ETV Bharat / bharat

7 ದಶಕ ದೇಶವಾಳಿದ ಪಕ್ಷಕ್ಕೆ ನಾಯಕತ್ವದ ಬಿಕ್ಕಟ್ಟು.? ಯಾರಾಗಲಿದ್ದಾರೆ ‘ಕೈ’ ಬಲಪಡಿಸುವ ನಾಯಕ.!

1998-2017ರ ವರೆಗೆ ಸೋನಿಯಾ ಗಾಂಧಿ ಪೂರ್ಣ ಸಮಯದ ಅಧ್ಯಕ್ಷರಾಗಿದ್ದಾಗ, ಅವರ ನಾಯಕತ್ವದ ಶೈಲಿಯನ್ನು ಸಮಾಲೋಚನೆ ಮತ್ತು ಒಮ್ಮತದಿಂದ ಅಂಗೀಕರಿಸಲಾಯಿತು. ಈ ಲಕ್ಷಣವು ಅವರನ್ನು ಮಧ್ಯಂತರ ಮುಖ್ಯಸ್ಥರಾಗಿ ಮರಳಿ ಕರೆತಂದಿತು. ಆದರೆ ಸೋನಿಯಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಮುಂದಿನ ದಶಕಗಳಲ್ಲಿ ಪಕ್ಷವನ್ನು ಮುನ್ನಡೆಸಬಲ್ಲ ಸಮರ್ಥ ನಾಯಕನ ಅಗತ್ಯ ಕಾಂಗ್ರೆಸ್​ಗಿದೆ.

author img

By

Published : Aug 23, 2020, 10:08 PM IST

7 ದಶಕ ದೇಶವಾಳಿದ ಪಕ್ಷಕ್ಕೆ ಎದುರಾಯ್ತಾ ನಾಯಕತ್ವದ ಬಿಕ್ಕಟ್ಟು

ನವದೆಹಲಿ: ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್​ನಲ್ಲಿ ನಾಯಕತ್ವದ ಬಿಕ್ಕಟ್ಟು ಎದುರಾಗಿದೆ. ಗಾಂಧಿ ಕುಟುಂಬಸ್ಥರು ಅಥವಾ ಗಾಂಧಿಯೇತರರಲ್ಲಿ ಯಾರು ಕಾಂಗ್ರೆಸ್​​ ಪಕ್ಷದ ರಾಷ್ಟ್ರೀಯ ನಾಯಕತ್ವ ವಹಿಸಬೇಕೆಂಬದು ವ್ಯಾಪಕ ಚರ್ಚೆಗೆ ಬಂದಿದೆ.

ನಾಳೆ ಕಾಂಗ್ರೆಸ್ ಪಕ್ಷದ ಕಾರ್ಯಕಾರಣಿ ಸಭೆ ನಡೆಯಲಿದ್ದು, ಈ ವೇಳೆ ಪಕ್ಷಕ್ಕೆ ಸೂಕ್ತ ನಾಯಕತ್ವ ನೀಡುವ ಕುರಿತು 23 ಜನ ಧುರೀಣರು ಬರೆದಿರುವ ಪತ್ರದ ಕುರಿತು ಚರ್ಚೆ ಮಾಡಲಾಗುವ ಸಾಧ್ಯತೆ ಹೆಚ್ಚಾಗಿದೆ. ಹಲವಾರು ನ್ಯೂನತೆಗಳು ಮತ್ತು ಆರ್ಥಿಕತೆ ಮತ್ತು ಭದ್ರತೆಗೆ ಸಂಬಂಧಿಸಿದ ಸವಾಲುಗಳ ಹೊರತಾಗಿಯೂ, ಬಿಜೆಪಿ ಬಲಗೊಳ್ಳುತ್ತಿರುವಾಗ, ಕಾಂಗ್ರೆಸ್ ನಿಶ್ಚಲವಾಗಿರುವಂತೆ ತೋರುತ್ತಿದೆ. ಈ ಸಮಯದಲ್ಲಿ ಪಕ್ಷವನ್ನು ಬಲಪಡಿಸಲು ಸಮರ್ಥ ನಾಯಕನ ಅವಶ್ಯಕತೆಯಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್​ನಲ್ಲಿ ನಾಯಕತ್ವದ ಬಿಕ್ಕಟ್ಟು ಹೊಸದೇನಲ್ಲ. ಪಕ್ಷವು 2014 ರಲ್ಲಿ ಹೀಗೆಯೇ ನಾಯಕತ್ವದ ಬಿಕ್ಕಟ್ಟನ್ನು ಎದುರಿಸಿತ್ತು. ಆಗ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ರಾಜೀನಾಮೆ ನೀಡಲು ಮುಂದಾದಾಗ ಪಕ್ಷವು ಲೋಕಸಭೆಯಲ್ಲಿ 44/543 ಸ್ಥಾನಗಳನ್ನು ಗಳಿಸಿ ಹೀನಾಯ ಸೋಲು ಕಂಡಿತು.

ಐದು ವರ್ಷಗಳ ನಂತರ, 2019 ರ ಮೇ ತಿಂಗಳಲ್ಲಿ ಪಕ್ಷವು ಮತ್ತೆ ನಾಯಕತ್ವದ ಬಿಕ್ಕಟ್ಟನ್ನು ಎದುರಿಸಿತು. ಆಗ ಲೋಕಸಭಾ ಚುನಾವಣಾ ಫಲಿತಾಂಶದ ಜವಾಬ್ದಾರಿಯಿಂದಾಗಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ರಾಜೀನಾಮೆ ನೀಡಿದರು. ಇದರಲ್ಲಿ ಪಕ್ಷಕ್ಕೆ ಕೇವಲ 52/543 ಸ್ಥಾನಗಳು ದೊರೆತವು.

ಜನಪ್ರಿಯ ಮನಸ್ಥಿತಿಯನ್ನು ಗ್ರಹಿಸಿದ ರಾಹುಲ್, ಕಾಂಗ್ರೆಸ್ ಅನ್ನು ಮುನ್ನಡೆಸಲು ಗಾಂಧಿಯೇತರರನ್ನು ಹುಡುಕಬೇಕೆಂದು ಪಕ್ಷವನ್ನು ಒತ್ತಾಯಿಸಿದರು. ಇದು ಸಾಕಷ್ಟು ಚರ್ಚೆಯ ನಂತರ ಸೋನಿಯಾ ಅವರನ್ನು ಮಧ್ಯಂತರ ಮುಖ್ಯಸ್ಥರಾಗಿ ನೇಮಿಸಲಾಯಿತು.

ಆಗಸ್ಟ್ 10 ರಂದು ಸೋನಿಯಾ ಅಧಿಕಾರದಲ್ಲಿ ಒಂದು ವರ್ಷ ಪೂರ್ಣಗೊಂಡಿದ್ದರಿಂದ, ಈಗ ಮತ್ತೆ ನಾಯಕತ್ವದ ವಿಷಯ ಹೆಚ್ಚು ಚರ್ಚೆಗೆ ಬಂದಿದೆ. ನಿರ್ಣಾಯಕ ಕಾರ್ಯಕಾರಣಿ ಸಭೆಗೂ ಒಂದು ದಿನ ಮುಂಚಿತ ಅಂದರೆ ಇಂದು, ಸೋನಿಯಾ ಗಾಂಧಿ ಹೊಸ ನಾಯಕನನ್ನು ಆಯ್ಕೆ ಮಾಡುವಂತೆ ಅನುಭವಿಗಳನ್ನು ಕೇಳಿದ್ದಾರೆ.

2017 ರಲ್ಲಿ ರಾಹುಲ್ ಅಧ್ಯಕ್ಷ ಸ್ಥಾನದ ನಂತರ 2018 ರಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗಳಲ್ಲಿ ಮೂರು ಮಹತ್ವದ ಗೆಲುವು ಸಾಧಿಸಿತು. ಅಲ್ಲದೆ ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನಿಂದ ಹೊರ ಬಂದಿರುವ ಕಾಂಗ್ರೆಸ್, ಎಲ್ಲರನ್ನೂ ಒಟ್ಟುಗೂಡಿಸಿ ಸಾಗಬೇಕಾದ ಅನಿವಾರ್ಯತೆಗೆ ಸಿಲುಕಿರುವುದು ಗಣನೀಯ.

1998-2017ರ ವರೆಗೆ ಸೋನಿಯಾ ಗಾಂಧಿ ಪೂರ್ಣ ಸಮಯದ ಅಧ್ಯಕ್ಷರಾಗಿದ್ದಾಗ, ಅವರ ನಾಯಕತ್ವದ ಶೈಲಿಯನ್ನು ಸಮಾಲೋಚನೆ ಮತ್ತು ಒಮ್ಮತದಿಂದ ಅಂಗೀಕರಿಸಲಾಯಿತು. ಈ ಲಕ್ಷಣವು ಅವರನ್ನು ಮಧ್ಯಂತರ ಮುಖ್ಯಸ್ಥರಾಗಿ ಮರಳಿ ಕರೆತಂದಿತು. ಆದರೆ ಸೋನಿಯಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಮುಂದಿನ ದಶಕಗಳಲ್ಲಿ ಪಕ್ಷವನ್ನು ಮುನ್ನಡೆಸಬಲ್ಲ ಸಮರ್ಥ ನಾಯಕನ ಅಗತ್ಯ ಕಾಂಗ್ರೆಸ್​ಗಿದೆ.

ರಾಹುಲ್ 2017 ರಲ್ಲಿ ಕಾಂಗ್ರೆಸ್ ಆಡಳಿತವನ್ನು ವಹಿಸಿಕೊಂಡಿದ್ದು, ಪಕ್ಷದಲ್ಲಿ ಒಂದು ಪೀಳಿಗೆಯ ಬದಲಾವಣೆಯನ್ನು ಗುರುತಿಸಿದೆ. ಕಾಂಗ್ರೆಸ್ ತನ್ನ ಪಕ್ಷದ ಸಂಘಟನೆಯಲ್ಲಿನ ನಿರ್ಣಾಯಕ ಅಂತರವನ್ನು ಪರಿಹರಿಸಬೇಕು, ಹೊಸ ಪ್ರಾದೇಶಿಕ ನಾಯಕರನ್ನು ಉತ್ತೇಜಿಸಬೇಕು, ಅವರಿಗೆ ಪಕ್ಷದ ಪ್ರಮುಖ ಪಾತ್ರಗಳನ್ನು ನೀಡಬೇಕು ಮತ್ತು ನಿರುದ್ಯೋಗ, ಕುಸಿಯುವ ಆರ್ಥಿಕತೆ, ಕೋಮು ವಿಭಜನೆ, ಬಡವರ ಅವಸ್ಥೆ ಮತ್ತು ವ್ಯಾಪಕವಾದ ಕೃಷಿ ಬಿಕ್ಕಟ್ಟು ಮುಂತಾದ ಸಮಸ್ಯೆಗಳಿಗಾಗಿ ಹೋರಾಡುವ ಮತ್ತು ಜನರನ್ನು ಈ ದಿಕ್ಕಿನಲ್ಲಿ ಎಚ್ಚರಿಸುವ ನಾಯಕನ ಅವಶ್ಯಕತೆ ಇದೆ.

ಒಟ್ಟಿನಲ್ಲಿ ಸದ್ಯ ಮತ್ತೊಮ್ಮೆ ಕಾಂಗ್ರೆಸ್​ನಲ್ಲಿ ನಾಯಕತ್ವದ ಬಿಕ್ಕಟ್ಟು ಎದುರಾಗಿದ್ದು, ಕೈ ಯನ್ನು ಬಲಪಡಿಸುವ ಸಮರ್ಥ ನಾಯಕ ಯಾರಾಗುತ್ತಾರೆಂದು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.