ಅಹ್ಮದ್ನಗರ(ಮಹಾರಾಷ್ಟ್ರ): ಲೇಸರ್ ನಿರ್ದೇಶಿತ ಆ್ಯಂಟಿ ಟ್ಯಾಂಕ್ ಕ್ಷಿಪಣಿಯನ್ನು (ಎಟಿಜಿಎಂ) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಇಂದು ಮತ್ತೊಮ್ಮೆ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ.
ಕೆಕೆ ರೇಂಜ್ನ ಆರ್ಮರ್ಡ್ ಕಾರ್ಪ್ಸ್ ಸೆಂಟರ್ ಮತ್ತು ಶಾಲೆ, ಅಹ್ಮದ್ನಗರದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಎಟಿಜಿಎಂ ಈ ಪರೀಕ್ಷೆಗಳಲ್ಲಿ ನಿಗದಿತ ಗುರಿ 3 ಕಿಲೋ ಮೀಟರ್ನ್ನು ಯಶಸ್ವಿಯಾಗಿ ತಲುಪಿದ್ದು, ಇದರಿಂದ ಭಾರತೀಯ ರಕ್ಷಣಾ ಇಲಾಖೆಗೆ ಮತ್ತಷ್ಟು ಬಲ ಬಂದಿದೆ.
ಲೇಸರ್ ಗೈಡೆಡ್ ಆ್ಯಂಟಿ ಟ್ಯಾಂಕ್ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ಇದಾಗಿದ್ದು, ದೂರದ ಗುರಿಯನ್ನು ಯಶಸ್ವಿಯಾಗಿ ಎಟಿಜಿಎಂ ಕ್ಷಿಪಣಿ ಭೇದಿಸಿದೆ. ಈಗಾಗಲೇ ಸೆಪ್ಟೆಂಬರ್ 22ರಂದು ನಡೆಸಿದ್ದ ಪರೀಕ್ಷೆಯೂ ಯಶಸ್ವಿಯಾಗಿತ್ತು. ಭಾರತೀಯ ಸೇನೆಯ ಎಂಬಿಟಿ ಅರ್ಜುನ್ ಟ್ಯಾಂಕ್‌ನಿಂದ ಎಟಿಜಿಎಂ ಕ್ಷಿಪಣಿಯ ಉಡಾವಣೆಯಾಗಿದೆ.