ETV Bharat / bharat

ಕೇರಳದ ಪೆಟ್ಟಿಮುಡಿಯಲ್ಲಿ ಭೂ ಕುಸಿತ : 7 ಮೃತ ದೇಹಗಳು ಪತ್ತೆ - ಪೆಟ್ಟಿಮುಡಿಯಲ್ಲಿ ಭೂ ಕುಸಿತ ನಾಲ್ವರು ಸಾವು

ಕೇರಳದ ಇಡುಕ್ಕಿ ಜಿಲ್ಲೆಯ ಪೆಟ್ಟಿಮುಡಿಯಲ್ಲಿ ಭೂ ಕುಸಿತ ಸಂಭವಿಸಿದ್ದು, ಮಣ್ಣಿನಡಿ ಸಿಲುಕಿದ್ದ ಏಳು ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ.

Landslide in Pettimudi of Idukki 4 died
ಇಡುಕ್ಕಿಯ ಪೆಟ್ಟಿಮುಡಿಯಲ್ಲಿ ಭೂ ಕುಸಿತ
author img

By

Published : Aug 7, 2020, 10:43 AM IST

Updated : Aug 7, 2020, 2:32 PM IST

ಇಡುಕ್ಕಿ (ಕೇರಳ) : ಜಿಲ್ಲೆಯ ಎಡಮಾಲುಕ್ಕುಡಿ ಬಳಿಯ ಪೆಟ್ಟಿಮುಡಿಯಲ್ಲಿ ಸಂಭವಿಸಿದ ಭೂಕುಸಿತ ಘಟನೆಯಲ್ಲಿ ಮಣ್ಣಿನಡಿ ಸಿಲುಕಿದ್ದ ಏಳು ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ನಿನ್ನೆ ರಾತ್ರಿ ಭೂಕುಸಿತ ಸಂಭವಿಸಿದೆ. ಸ್ಥಳೀಯ ನಿವಾಸಿಯೊಬ್ಬರು ಮುನ್ನಾರ್​ಗೆ ತೆರಳಿ ಘಟನೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೆಟ್ಟಿಮುಡಿ ಬೆಟ್ಟಗಳಿಂದ ಆವೃತವಾದ ಪ್ರದೇಶವಾಗಿದ್ದು, ಸುಮಾರು 80 ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಸದ್ಯ, ಘಟನಾ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ಎನ್​ಡಿಆರ್​ಎಫ್​ ತಂಡದಿಂದ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ಘಟನೆಯಲ್ಲಿ ಸುಮಾರು 20 ಮನೆಗಳು ಮಣ್ಣಿನಡಿ ಸಿಲುಕಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇರಳದ ಪೆಟ್ಟಿಮುಡಿಯಲ್ಲಿ ಭೂ ಕುಸಿತ

ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದ, ಸ್ಥಳಕ್ಕೆ ಭೇಟಿ ನೀಡುವುದಾಗಿ ಸಚಿವ ಎಂಎಂ ಮಣಿ ತಿಳಿಸಿದ್ದಾರೆ.

Last Updated : Aug 7, 2020, 2:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.