ETV Bharat / bharat

ಭೂ ದಂಧೆಕೋರರಿಂದ ಮಹಿಳೆಯರ ಮೇಲೆ ಗುಂಡಿನ ದಾಳಿ!: ವಿಡಿಯೋ... - ಕನ್ನೌಜ್​ ಭೂ ಮಾಫಿಯಾ,

ಯೋಗಿ ಆದಿತ್ಯನಾಥ್​ ರಾಜ್ಯದಲ್ಲಿ ಭೂ ಕಳ್ಳರ ದೌರ್ಜನ್ಯ ಹೆಚ್ಚುತ್ತಲೇ ಇದ್ದು, ಅಮಯಾಕರ ಮೇಲೆ ಗುಂಡು ಹಾರಿಸಿ ದರ್ಪ ಮೆರೆದಿರುವ ಘಟನೆ ಉತ್ತರಪ್ರದೇಶದಲ್ಲಿ ಸಂಚಲನ ಮೂಡಿಸಿದೆ.

man fire on two woman, man fire on two woman in Kannauj, firing in land dispute, Kannauj land mafia, Kannauj land mafia news, Kannauj land mafia 2020, ಮಹಿಳೆಯರ ಮೇಲೆ ಗುಂಡಿನ ದಾಳಿ, ಕನ್ನೌಜ್​ನಲ್ಲಿ ಮಹಿಳೆಯರ ಮೇಲೆ ಗುಂಡಿನ ದಾಳಿ, ಕನ್ನೌಜ್​ ಭೂ ಮಾಫಿಯಾ, ಕನ್ನೌಜ್​ ಭೂ ಮಾಫಿಯಾ 2020, ಕನ್ನೌಜ್​ ಭೂ ಮಾಫಿಯಾ ಸುದ್ದಿ,
ಭೂ ದಂಧೆಕೋರರಿಂದ ಮಹಿಳೆಯರ ಮೇಲೆ ಗುಂಡಿನ ದಾಳಿ
author img

By

Published : Aug 20, 2020, 12:54 PM IST

ಕನೌಜ್​​: ಜಿಲ್ಲೆಯಲ್ಲಿ ಭೂ ಮಾಫಿಯಾ ದಂಧೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಬಲ ಇದ್ದವರು ಅಮಾಯಕರ ಮೇಲೆ ದರ್ಪ ತೋರಿ ಭೂಮಿಯನ್ನು ಕಸಿದುಕೊಳ್ಳುವುದು ಸಾಮಾನ್ಯವಾಗಿದೆ.

ಹೌದು, ಭೂಮಿ ಕಬ್ಜಾ ಮಾಡಿಕೊಳ್ಳಲು ಬಂದ ದುಷ್ಕರ್ಮಿಯೊಬ್ಬ ಚತುರಿಪೂರ್​ ನಿವಾಸಿಯಾದ ಜಪೇಂದ್ರ ಮತ್ತು ಆತನ ಕುಟುಂಬದ ಮೇಲೆ ಗುಂಡಿನ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದಾನೆ.

ಭೂ ದಂಧೆಕೋರರಿಂದ ಮಹಿಳೆಯರ ಮೇಲೆ ಗುಂಡಿನ ದಾಳಿ

ಗುಂಡು ಹಾರಿಸುವ ವೇಳೆ ಇಬ್ಬರು ಮಹಿಳೆಯರು ಆತನಿಂದ ತಪ್ಪಿಸಿಕೊಂಡು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಆರೋಪಿಗೆ ಸ್ಥಳೀಯ ಪೊಲೀಸರು ಸಾಥ್​ ನೀಡುತ್ತಿದ್ದಾರೆಂಬ ದೂರು ಇದೆ. ಇದಕ್ಕೆ ಸಾಕ್ಷಿಯೆಂಬಂತೆ ಪೊಲೀಸರು ಮತ್ತು ಸಂತ್ರಸ್ತೆ ಮಹಿಳೆ ಆಡಿಯೋ ಸಹ ವೈರಲ್​ ಆಗುತ್ತಿದ್ದು, ಈ ಆಡಿಯೋದಲ್ಲಿ ಪೊಲೀಸರೊಬ್ಬರು ಭೂಮಾಫಿಯಾ ಮಾಡುತ್ತಿದ್ದ ವ್ಯಕ್ತಿ ಬೆಂಬಲಕ್ಕೆ ನಿಂತಿರುವುದು ಸ್ಪಷ್ಟವಾಗಿದೆ.

ಇನ್ನು ಮಹಿಳೆಯರ ಮೇಲೆ ಗುಂಡು ಹಾರಿಸುತ್ತಿರುವ ವಿಡಿಯೋ ಮತ್ತು ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದ್ದು, ಭೂಮಾಲೀಕನಿಗೆ ನ್ಯಾಯ ಸಿಗುವುದಾ ಎಂದು ಕಾದು ನೋಡಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.