ನವದೆಹಲಿ: ಬಹುಕೋಟಿ ಮೇವು ಹಗರಣದಲ್ಲಿ ಆರೋಪಿಯಾಗಿ ಜೈಲು ಶಿಕ್ಷೆಗೊಳಗಾಗಿರುವ ಲಾಲೂ ಪ್ರಸಾದ್ ಯಾದವ್ ಆರೋಗ್ಯ ತೀವ್ರ ಹದಗೆಟ್ಟಿದ್ದು, ಸದ್ಯ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇದರ ಬೆನ್ನಲ್ಲೇ ಅವರ ಮಗಳು ರೋಹಿಣಿ ಆಚಾರ್ಯ ಇದೀಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದು, ತಮ್ಮ ತಂದೆಯನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ಕೇಳಿಕೊಂಡಿದ್ದಾರೆ.
ಓದಿ: ಲಾಲೂ ಆರೋಗ್ಯದಲ್ಲಿ ಏರುಪೇರು; ದೆಹಲಿಯ ಏಮ್ಸ್ಗೆ ಶಿಫ್ಟ್
ಬರೆದಿರುವ ಪತ್ರದಲ್ಲಿ ಏನಿದೆ!?
ಬಡವರ ಭಗವಾನ್ ಶ್ರೀ ಲಾಲೂ ಪ್ರಸಾದ್ ಯಾದವ್ ಅವರನ್ನು ಬಿಡುಗಡೆ ಮಾಡಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಜತೆಗೆ ಈ ಅಭಿಯಾನಕ್ಕೆ ಕೈಜೋಡಿಸಿ ಹಾಗೂ ನಾಯಕನ ಬಿಡುಗಡೆಗಾಗಿ ಮನವಿ ಮಾಡಿ ಎಂದಿದ್ದಾರೆ. ಯಾರು ನಿಮಗೆ ಶಕ್ತಿ ನೀಡಿದರೂ, ಇಂದು ಅವರಿಗೆ ನೀವೂ ಶಕ್ತಿಯಾಗುವ ಸಮಯ ಎಂದು ಟ್ವೀಟರ್ನಲ್ಲೂ ಬರೆದುಕೊಂಡಿದ್ದಾರೆ.
72 ವರ್ಷದ ಲಾಲು ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.