ರಾಂಚಿ: ಮೇವು ಹಗರಣ ಪ್ರಕರಣದಲ್ಲಿ ಜೈಲು ಸೇರಿರುವ ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರ ಅವರನ್ನು ಉತ್ತಮ ಚಿಕಿತ್ಸೆಗಾಗಿ ಇಂದು ದೆಹಲಿಯ ಏಮ್ಸ್ ಗೆ ಸ್ಥಳಾಂತರ ಮಾಡಲಾಗಿದೆ. ಈ ಬಗ್ಗೆ ಲಾಲೂರನ್ನು ನೋಡಿಕೊಳ್ಳುತ್ತಿರುವ ವೈದ್ಯ ಡಾ ಉಮೇಶ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಈ ನಡುವೆ, ಆರ್ಜೆಡಿ ನಾಯಕ ತೇಜಶ್ವಿಯಾದವ್ ರಾಂಚಿಯ ರಿಮ್ಸ್ಗೆ ಆಗಮಿಸಿದ್ದು, ತಂದೆಯ ಆರೋಗ್ಯ ವಿಚಾರಿಸಿದರು.
ಈ ಸುದ್ದಿಯನ್ನೂ ಓದಿ: ಲಾಲೂ ಪ್ರಸಾದ್ ಯಾದವ್ಗೆ ಶ್ವಾಸಕೋಶ ಸೋಂಕು: ಆಸ್ಪತ್ರೆಗೆ ದಾಖಲು
ಇದಕ್ಕೂ ಮೊದಲು ಮಾತನಾಡಿದ್ದ ಅವರ ರಿಮ್ಸ್ ನಿರ್ದೇಶಕ ಡಾ. ಕಾಮೇಶ್ವರ್ ಪ್ರಸಾದ್, ಲಾಲೂ ಪ್ರಸಾದ್ ಯಾದವ್ (ಆರ್ಜೆಡಿ ಮುಖ್ಯಸ್ಥ) ಅವರ ಆರೋಗ್ಯ ಸ್ಥಿರವಾಗಿದೆ. ಶ್ವಾಸಕೋಶದಲ್ಲಿ ಸೋಂಕು ಕಂಡು ಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಒಂದು ರೀತಿಯ ನ್ಯುಮೋನಿಯಾ. ನಾವು ಏಮ್ಸ್ ವಿಭಾಗದ ಶ್ವಾಸಕೋಶದ ಡಿಒಡಿ ಜೊತೆ ಸಮಾಲೋಚಿಸಿದ್ದೇವೆ. ಕೋವಿಡ್ ವರದಿ ನೆಗೆಟಿವ್ ಬಂದಿದ್ದು, ಆರ್ಟಿ - ಪಿಸಿಆರ್ ವರದಿಗೆ ಕಾಯುತ್ತಿದ್ದೇವೆ ಎಂದು ರಿಮ್ಸ್ ನಿರ್ದೇಶಕ ಡಾ.ಕಾಮೇಶ್ವರ ಪ್ರಸಾದ್ ತಿಳಿಸಿದ್ದರು. ಇದೀಗ ದೆಹಲಿಯ ಏಮ್ಸ್ ಗೆ ಸ್ಥಳಾಂತರಿಸಲಾಗಿದೆ.
ಯಾದವ್ ಪುತ್ರಿ ಮಿಸಾ ಭಾರತಿ ಮಧ್ಯಾಹ್ನ ರಿಮ್ಸ್ ತಲುಪಿದರು. ಪುತ್ರರಾದ ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್, ಅವರ ಪತ್ನಿ ರಾಬ್ರಿ ದೇವಿ ಸಹ ಶನಿವಾರ ಮುಂಜಾನೆ ರಾಂಚಿ ತಲುಪಿ ಯಾದವ್ ಅವರನ್ನು ಭೇಟಿಯಾಗಿದ್ದಾರೆ.
ಪುತ್ರ ತೇಜಸ್ವಿ ಯಾದವ್ ಮಾಧ್ಯಮದವರೊಂದಿಗೆ ಮಾತನಾಡಿ, ತಂದೆಯ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಉಳಿದ ಚಿಕಿತ್ಸೆಯ ವರದಿಗಾಗಿ ಕಾಯುತ್ತಿದ್ದೇವೆಂದು ತಿಳಿಸಿದರು. ಅಲ್ಲದೇ ನಾವು ಅವರನ್ನು ಭೇಟಿಯಾಗಿದ್ದು, ಅವರು ಆರೋಗ್ಯವಾಗಿದ್ದಾರೆ. ಚಿಕಿತ್ಸೆ ಮುಂದುವರೆದಿದ್ದು, ವೈದ್ಯರೊಂದಿಗೆ ಸಮಾಲೋಚಿಸಿದ್ದೇವೆ. ಶೀಘ್ರವಾಗಿ ಗುಣಮುಖರಾಗುತ್ತಾರೆ ಎಂದು ನಂಬಿದ್ದೇವೆಂದು ತಿಳಿಸಿದರು.