ಪಶ್ಚಿಮ ಬಂಗಾಳ: ಕೊರೊನಾದಿಂದ ಚೇತರಿಸಿಕೊಂಡ ತಾಯಿ ಹಾಗೂ ಮಗಳು ಒಟ್ಟಿಗೆ ಡ್ಯಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ. ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯ ಮಹಿಳೆ ಕೆಲವು ದಿನಗಳ ಹಿಂದೆ ಕೊರೊನಾದಿಂದ ಗುಣಮುಖರಾಗಿದ್ದರು. ಇದೀಗ ಅವರ ಮಗಳು ಸಹ ಕೋವಿಡ್ 19 ನಿಂದ ಚೇತರಿಸಿಕೊಂಡಿದ್ದಾರೆ.
ಗುಣಮುಖಳಾಗಿ ಮನೆಗೆ ಬಂದ ಮಗಳ ಮೇಲೆ ಹೂ ಸುರಿದು ತಾಯಿ ಬರಮಾಡಿಕೊಂಡಿದ್ದಾರೆ.