ನವದೆಹಲಿ: ದೇಶಭಕ್ತ ಲಡಾಖಿಗಳು ಚೀನಾದ ಒಳ ನುಸುಳುವಿಕೆಯ ವಿರುದ್ಧ ದನಿ ಎತ್ತುತ್ತಿದ್ದಾರೆ. ಇವರ ಕೂಗನ್ನು ಕಡೆಗಣಿಸಿದರೆ ಭಾರತವೇ ಬೆಲೆ ತೆರಬೇಕಾಗತ್ತೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಮಾಧ್ಯಮವೊಂದರ ವಿಡಿಯೋ ವರದಿಯನ್ನು ತಮ್ಮ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಲಡಾಖ್‌ನಲ್ಲಿ ಚೀನಿಯರು ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಲಡಾಖಿಗಳು ಆರೋಪಿಸಿದ್ದಾರೆ. ಇದರ ವಿರುದ್ಧ ದನಿ ಎತ್ತುತ್ತಿದ್ದಾರೆ. ಇವರ ಎಚ್ಚರಿಕೆಯನ್ನು ನಿರ್ಲಕ್ಷಿಸುವುದರಿಂದ ಭಾರತಕ್ಕೆ ದೊಡ್ಡ ಮಟ್ಟದಲ್ಲಿ ನಷ್ಟವಾಗಲಿದೆ. ಭಾರತದ ರಕ್ಷಣೆಯ ಸಲುವಾಗಿ ದಯವಿಟ್ಟು ಅವರ ಮಾತುಗಳನ್ನು ಕೇಳಿ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
-
Patriotic Ladakhis are raising their voice against Chinese intrusion. They are screaming a warning.
— Rahul Gandhi (@RahulGandhi) July 4, 2020 " class="align-text-top noRightClick twitterSection" data="
Ignoring their warning will cost India dearly.
For India’s sake, please listen to them. pic.twitter.com/kjxQ9QNpd2
">Patriotic Ladakhis are raising their voice against Chinese intrusion. They are screaming a warning.
— Rahul Gandhi (@RahulGandhi) July 4, 2020
Ignoring their warning will cost India dearly.
For India’s sake, please listen to them. pic.twitter.com/kjxQ9QNpd2Patriotic Ladakhis are raising their voice against Chinese intrusion. They are screaming a warning.
— Rahul Gandhi (@RahulGandhi) July 4, 2020
Ignoring their warning will cost India dearly.
For India’s sake, please listen to them. pic.twitter.com/kjxQ9QNpd2
ಪೂರ್ವ ಲಡಾಖ್‌ನ ಚೀನಾ-ಭಾರತ ಗಡಿ ಬಿಕ್ಕಟ್ಟು ಸಂಬಂಧ ಕೇಂದ್ರ ಸರ್ಕಾರ ವಿರುದ್ಧ ರಾಗಾ ವಾಗ್ದಾಳಿ ನಡೆಸುತ್ತಾ ಬಂದಿದ್ದು, ಇದೀಗ ಲಡಾಖಿಗಳ ಎಚ್ಚರಿಕೆಯನ್ನು ಕಡೆಗಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದ್ದಾರೆ.