ಅಮರಾವತಿ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಕೃಷ್ಣ ಜಿಲ್ಲಾಡಳಿತವು ಸೋಮವಾರ ಕೋವಿಡ್-19 ವ್ಯಾಕ್ಸಿನೇಷನ್ನ 'ಡ್ರೈ ರನ್' (ಪ್ರಯೋಗಾತ್ಮಕ ಪರೀಕ್ಷೆ) ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು.
ವಿಜಯವಾಡದ ಪ್ರಕಾಶ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 'ಡ್ರೈ ರನ್' ಕಾರ್ಯಕ್ರಮಕ್ಕೆ ಕೃಷ್ಣ ಜಿಲ್ಲೆಯ ಜಿಲ್ಲಾಧಿಕಾರಿ ಎಂಡಿ ಇಮ್ತಿಯಾಜ್ ಅವರು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಲಸಿಕೆಯನ್ನು ಕೇಂದ್ರ ಶೇಖರಣಾ ಸೌಲಭ್ಯದಿಂದ ವಿವಿಧ ಸ್ಥಳಗಳಲ್ಲಿನ ಕೋಲ್ಡ್ ಚೈನ್ ಪಾಯಿಂಟ್‌ಗಳಿಗೆ ಸಾಗಿಸಲಾಯಿತು ಎಂದರು.
'ಡ್ರೈ ರನ್' ಕೋವಿಡ್ ಲಸಿಕೆಯನ್ನು ಜಿಲ್ಲೆಯ ಐದು ಸ್ಥಳಗಳಿಗೆ 25 ಆರೋಗ್ಯ ಕಾರ್ಯಕರ್ತರೊಂದಿಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಮಾಹಿತಿ ನೀಡಿದರು.
ಓದಿ:ಯುವತಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡುತ್ತಿದ್ಯಾ ಪಾಕ್.!?
"ನಾವು ಇದನ್ನು ಕೋ-ವಿನ್ ಅಪ್ಲಿಕೇಶನ್‌ನಲ್ಲಿ ರೆಕಾರ್ಡ್ ಮಾಡಿದ್ದೇವೆ ಮತ್ತು ಆಯ್ಕೆ ಮಾಡಿದ ರೋಗಿಗಳಿಗೆ ಎಸ್‌ಎಂಎಸ್ ಕೂಡ ಕಳುಹಿಸಿದ್ದೇವೆ. ವಿಭಿನ್ನ ಪ್ರಕ್ರಿಯೆಗಳಿಗೆ ತೆಗೆದುಕೊಂಡ ಸಮಯ ಮತ್ತು ಅದರಲ್ಲಿರುವ ಲಾಜಿಸ್ಟಿಕ್ಸ್ ಅನ್ನು ನಾವು ಮೇಲ್ವಿಚಾರಣೆ ಮಾಡಿದ್ದೇವೆ. ಇದನ್ನು ನೈಜ-ಸಮಯದ ಸಿಮ್ಯುಲೇಶನ್‌ನಲ್ಲಿ ಬಳಸಲಾಗುತ್ತದೆ" ಎಂದು ಡಿಸಿ ಸುದ್ದಿಗಾರರಿಗೆ ತಿಳಿಸಿದರು.
ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಗ್ರಾಮ ಕಾರ್ಯದರ್ಶಿ ಕಾರ್ಯಾಲಯಗಳನ್ನು ಲಸಿಕೆ ಕೇಂದ್ರಗಳನ್ನಾಗಿ ಮಾಡಲಾಗುವುದು ಎಂದು ಅವರು ಹೇಳಿದರು. ರಾಜ್ಯ ಸರ್ಕಾರವು ಕೃಷ್ಣ ಜಿಲ್ಲೆಯನ್ನು ಡ್ರೈ ರೈನ್ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿದ್ದು, ಐದು ಸ್ಥಳಗಳಲ್ಲಿ ಈ ಪ್ರಯೋಗ ನಡೆಸಲಾಗುತ್ತಿದೆ.