ಚೆನ್ನೈ: ರುಚಿಕರವಾದ ಕಡಲೆ ಮಿಠಾಯಿ ಕಂಡರೇ ದೊಡ್ಡವರಿಂದ ಮಕ್ಕಳವರೆಗೂ ಇಷ್ಟಪಟ್ಟು ತಿನ್ನುತ್ತಾರೆ. ಇದಕ್ಕೆ ತಮಿಳಿನಲ್ಲಿ ‘ಕಡಲೈ ಮಿತ್ತೈ ಅಥವಾ ನೆಲಗಡಲೆ ಕ್ಯಾಂಡಿ’ ಎಂದು ಕರೆಯುತ್ತಾರೆ. ಈಗ ಅದು ಭೌಗೋಳಿಕ ಸೂಚಕದೊಂದಿದೆ (ಜಿಐ) ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.
ತಮಿಳುನಾಡಿನ ಕೋವಿಲ್‌ಪಟ್ಟಿ ಜಿಲ್ಲೆಯಲ್ಲಿ ನೆಲೆಸಿರುವ ಕಡಲೈ ಮಿತ್ತೈ ತಯಾರಕರು, ಜಿಯಾಗ್ರಾಫಿಕಲ್ ಇಂಡಿಕೇಷನ್ ಪ್ರಯೋಜನ ಪಡೆಯಲಿದ್ದಾರೆ ಎಂದು ಕೋವಿಲ್‌ಪಟ್ಟಿ ಕಡಲೈ ಮಿತ್ತೈ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ತಿಳಿಸಿದ್ದಾರೆ.
ಚೆನ್ನೈ ಮತ್ತು ಇತರ ಜಿಲ್ಲೆಗಳಲ್ಲಿ ಅನೇಕ ನೆಲಗಡಲೆ ಕ್ಯಾಂಡಿ ತಯಾರಕರು ಕಡಲೆ ಮಿಠಾಯಿ ಮಾರಾಟ ಮಾಡಲು ‘ಕೋವಿಲ್‌ಪಟ್ಟಿ ಕಡಲೈ ಮಿತ್ತೈ’ ಪದ ಬಳಸಿ, ವ್ಯಾಪಾರ ನಡೆಸುತ್ತಿದ್ದಾರೆ. ಗ್ರಾಹಕರಿಗೆ ಗೊಂದಲ ಆಗಬಾರದು ಎಂಬ ಉದ್ದೇಶದಿಂದ ಜಿಐ ಟ್ಯಾಗ್ ಪಡೆದುಕೊಂಡಿದ್ದೇವೆ. ಇದು ದೇಶಿಯ ಮಾರುಕಟ್ಟೆಯಲ್ಲದೇ ಸಾಗರೋತ್ತರ ಮಾರುಕಟ್ಟೆಗಳಿಗೆ ರಫ್ತು ಮಾಡಲು ಸಹಾಯವಾಗಿದೆ ಎಂದು ಸಂಘದ ಅಧ್ಯಕ್ಷ ಎ. ಕಾರ್ತೀಶ್ವರನ್ ಐಎಎನ್‌ಎಸ್‌ಗೆ ತಿಳಿಸಿದರು.
1940ರ ದಶಕದಲ್ಲಿ ಪೊನ್ನಂಬಳ ನಾಡರ್ ಕೋವಿಲ್ಪಟ್ಟಿಯಲ್ಲಿ ನೆಲಗಡಲೆ ಕ್ಯಾಂಡಿ ತಯಾರಿಕೆ ಆರಂಭಿವಾಯಿತು. ನಿಧಾನವಾಗಿ ವ್ಯವಹಾರ ರೂಪ ತಾಳಿ, ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಕೋವಿಲ್ಪಟ್ಟಿಯಲ್ಲಿ ಸುಮಾರು 150 ಕ್ಯಾಂಡಿ ತಯಾರಿಕ ಮಾಲೀಕರಿದ್ದು, ಸುಮಾರು 6,000 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಕಾರ್ತೀಶ್ವರನ್ ಹೇಳಿದರು.
ತಮಿಳುನಾಡಿನ ತೂತುಕುಡಿ ಜಿಲ್ಲೆಯ ಭಾಗವಾದ ಕೋವಿಲ್‌ಪಟ್ಟಿ ನೆಲಗಡಲೆ ಕ್ಯಾಂಡಿಗೆ ವಿಶಿಷ್ಟವಾದ ರುಚಿ ಇರುವುದರಿಂದ ತುಂಬಾ ಹೆಸರುವಾಸಿ ಆಗಿದೆ. ಇವರು ಜಿಐ ಟ್ಯಾಗ್‌ಗಾಗಿ 2014ರಲ್ಲಿ ಅರ್ಜಿ ಸಲ್ಲಿಸಿದ್ದರು. ಕ್ಯಾಂಡಿ ಅನ್ನು ಥೇನಿ ಮತ್ತು ಸೇಲಂನಿಂದ ಪಡೆದ ಬೆಲ್ಲದಿಂದ ತಯಾರಿಸಲಾಗುತ್ತದೆ. ಇದಕ್ಕೆ ಬೇಕಾದ ಕಡಲೆಯನ್ನು ಅರುಪುಕೊಟ್ಟೈನಿಂದ ಪಡೆದ ನೆಲಗಡಲೆಗಳಿಂದ ತಯಾರಿಸಲಾಗುತ್ತದೆ.
ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮುಂಬೈ ಸೇರಿ ಸಾಗರೋತ್ತರ ದುಬೈ, ಶ್ರೀಲಂಕಾಗೂ ರಫ್ತು ಮಾಡಲಾಗುತ್ತಿದೆ. ಈ ನೆಲಗಡಲೆ ಮಿಠಾಯಿ ದೊಡ್ಡ ಆಧುನಿಕ ಚಿಲ್ಲರೆ ಸರಪಳಿಯಾಗಿ ಮಾರ್ಪಟ್ಟಿದೆ. ಹೋಟೆಲ್, ಕಿರಾಣಿ ಅಂಗಡಿಗಳು ಸೇರಿದಂತೆ ರೆಸ್ಟೋರೆಂಟ್‌ಗಳಲ್ಲಿಯೂ ಲಭ್ಯವಿದೆ ಎನ್ನುತ್ತಾರೆ ಕಾರ್ತೀಶ್ವರನ್.
ಲಾಕ್ಡೌನ್ನಿಂದಾಗಿ ವ್ಯವಹಾರದ ಮೇಲೆ ಪರಿಣಾಮ ಬೀರಿದ್ದು, ಒಂದು ವಾರದ ಹಿಂದೆ ಉತ್ಪಾದನೆ ಮತ್ತೇ ಆರಂಭಗೊಂಡಿದೆ. ಕಡಿಮೆ ಕಾರ್ಮಿಕನ್ನು ಬಳಸಿಕೊಂಡು ತಯಾರಿಕೆ ಕಾರ್ಯ ಆರಂಭಿಸಿದ್ದೇವೆ. ಅಲ್ಲಿ ನೆಲಗಡಲೆ ಉತ್ತಮ ಪೂರೈಕೆ ಇದೆ. ರೈತರು ತಮ್ಮ ಸರಕುಗಳನ್ನು ಮಾರಾಟ ಮಾಡಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಕೋರಲಾಗಿದೆ ಎಂದು ಹೇಳಿದರು.