ETV Bharat / bharat

ಕೋವಿಡ್​-19; ಸುಳ್ಳು ಮಾಹಿತಿ ತಡೆಗೆ ಸೋಷಿಯಲ್ ಮೀಡಿಯಾ ಕಂಪನಿಗಳ ಯತ್ನ - ಯೂಟ್ಯೂಬ್

ಮಾಹಿತಿ ವಿನಿಮಯದಲ್ಲಿ ಸೋಷಿಯಲ್​ ಮೀಡಿಯಾಗಳ ಪಾತ್ರ ಇಂದು ಅತ್ಯಂತ ಪ್ರಮುಖವಾಗಿದೆ. ಆದರೆ ಇಂದು ಸತ್ಯ ಮಾಹಿತಿಯೊಂದಿಗೆ ಸುಳ್ಳು ಮಾಹಿತಿಯೂ ಅದೇ ವೇಗದಲ್ಲಿ ಹರಡುತ್ತಿರುವುದು ಚಿಂತೆಗೆ ಕಾರಣವಾಗಿದೆ. ಅದರಲ್ಲೂ ಸೋಷಿಯಲ್ ಮೀಡಿಯಾಗಳ ಮೂಲಕ ಸುಳ್ಳು ಮಾಹಿತಿಯೊಂದು ಸತ್ಯವೆಂದೇ ಬಿಂಬಿತವಾಗಿ ಕೆಲ ಹೊತ್ತಾದರೂ ಹರಿದಾಡುತ್ತದೆ. ಹೀಗಾದಾಗ ನಡೆಯಬಾರದ್ದು ನಡೆದು ಹೋಗಿ ಬಿಡುತ್ತವೆ. ಅಂತಲೇ ಈಗ ಸೋಷಿಯಲ್​ ಮೀಡಿಯಾಗಳು ತಮ್ಮ ಮಾಧ್ಯಮದ ಮೂಲಕ ಸುಳ್ಳು ಸುದ್ದಿಗಳು ಹರಡದಂತೆ ತಡೆಯಲು ಹಲವಾರು ಕ್ರಮ ಕೈಗೊಳ್ಳುತ್ತಿವೆ.

Social media companies attempt to block false information

author img

By

Published : Apr 4, 2020, 11:22 PM IST

ಹೈದರಾಬಾದ್: ಮನುಷ್ಯ ಪ್ರಾಚೀನ ಕಾಲದಿಂದಲೂ ಸಂಘಜೀವಿ. ಆತ ಯಾವತ್ತೂ ಸಮಾಜದಲ್ಲಿ ಬದುಕಿದವ. ಯಾವಾಗಲೂ ತನ್ನ ಸುತ್ತಲಿರುವವರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಲೇ ಬದುಕಿದವ. ಹಾಗಾಗಿಯೇ ಮಾನವ ದೂರದಲ್ಲಿರುವವರನ್ನು ಸಂಪರ್ಕಿಸಲು ಮೊದಲಿಗೆ ಪತ್ರ ಬರೆಯುತ್ತಿದ್ದ. ನಂತರ ಟೆಲಿಫೋನ್ ಕಂಡುಹಿಡಿದ. ಅದರ ನಂತರ ಕಳೆದ ಅರ್ಧ ಶತಮಾನದಲ್ಲಿ ಮಾಹಿತಿ ವಿನಿಮಯ ಕ್ಷೇತ್ರದಲ್ಲಿ ಕ್ರಾಂತಿಯೇ ನಡೆದಿದೆ. ಈಗ ಏನಿದ್ದರೂ ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾಗಳ ಕಾರುಬಾರು. ಜಗತ್ತಿನ ಒಂದು ಮೂಲೆಯಲ್ಲಿ ನಡೆದ ಘಟನೆ ಕ್ಷಣಾರ್ಧದಲ್ಲಿ ಇನ್ನೊಂದು ಮೂಲೆಗೆ ತಲುಪುತ್ತದೆ.

ಮಾಹಿತಿ ವಿನಿಮಯದಲ್ಲಿ ಸೋಷಿಯಲ್​ ಮೀಡಿಯಾಗಳ ಪಾತ್ರ ಇಂದು ಅತ್ಯಂತ ಪ್ರಮುಖವಾಗಿದೆ. ಆದರೆ ಇಂದು ಸತ್ಯ ಮಾಹಿತಿಯೊಂದಿಗೆ ಸುಳ್ಳು ಮಾಹಿತಿಯೂ ಅದೇ ವೇಗದಲ್ಲಿ ಹರಡುತ್ತಿರುವುದು ಚಿಂತೆಗೆ ಕಾರಣವಾಗಿದೆ. ಅದರಲ್ಲೂ ಸೋಷಿಯಲ್ ಮೀಡಿಯಾಗಳ ಮೂಲಕ ಸುಳ್ಳು ಮಾಹಿತಿಯೊಂದು ಸತ್ಯವೆಂದೇ ಬಿಂಬಿತವಾಗಿ ಕೆಲ ಹೊತ್ತಾದರೂ ಹರಿದಾಡುತ್ತದೆ. ಹೀಗಾದಾಗ ನಡೆಯಬಾರದ್ದು ನಡೆದು ಹೋಗಿ ಬಿಡುತ್ತವೆ. ಅಂತಲೇ ಈಗ ಸೋಷಿಯಲ್​ ಮೀಡಿಯಾಗಳು ತಮ್ಮ ಮಾಧ್ಯಮದ ಮೂಲಕ ಸುಳ್ಳು ಸುದ್ದಿಗಳು ಹರಡದಂತೆ ತಡೆಯಲು ಹಲವಾರು ಕ್ರಮ ಕೈಗೊಳ್ಳುತ್ತಿವೆ.

ಈಗ ಕೊರೊನಾ ವೈರಸ್​ನ ಸಂಕಷ್ಟ ಕಾಲದಲ್ಲಿ ಕೊರೊನಾ ವೈರಸ್​ ಕುರಿತಾಗಿ ಹರಡುತ್ತಿರುವ ತಪ್ಪು ಮಾಹಿತಿಗಳನ್ನು ತಡೆಯುವುದೇ ಸವಾಲಾಗಿದೆ. ನಿಖರ ಮಾಹಿತಿಗಿಂತ ವೈರಲ್​ ಮಾಹಿತಿಯೇ ಮೇಲುಗೈ ಸಾಧಿಸುವುದರಿಂದ ಕೊರೊನಾ ಸೋಂಕು ನಿಗ್ರಹದಲ್ಲಿ ತಡೆಯುಂಟಾಗಬಹುದು ಎಂದು ವಿಶ್ವಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿದೆ.

ಕೇಂಬ್ರಿಡ್ಜ್​ ಅನಾಲಿಟಿಕ್ಸ್​ ಹಗರಣದ ನಂತರ ಸಾಮಾಜಿಕ ಜಾಲತಾಣಗಳು ಕೋಟ್ಯಂತರ ಜನರ ವಿಶ್ವಾಸ ಕಳೆದುಕೊಂಡಿದ್ದು ಸತ್ಯ. ಈ ಹಗರಣದ ನಂತರ ಎಚ್ಚೆತ್ತ ಫೇಸ್ಬುಕ್ ಸುಳ್ಳು ಮಾಹಿತಿ ಪ್ರಸಾರ ತಡೆಗೆ ಹಲವಾರು ಕ್ರಮಗಳನ್ನು ಕೈಗೊಂಡಿತು. ಇದರ ಬೆನ್ನಲ್ಲೇ ಟ್ವಿಟರ್ ಹಾಗೂ ಯೂಟ್ಯೂಬ್​ಗಳು ಸಹ ಕೆಲ ಕ್ರಮಗಳನ್ನು ಕೈಗೊಂಡವಾದರೂ ಇನ್ನೂ ಮಾಡಬೇಕಾದ್ದು ಬಹಳಷ್ಟಿದೆ.

ಜಗತ್ತಿನಲ್ಲಿ ನಡೆಯುವ ಯಾವುದೇ ವಿಷಯವನ್ನು ಮುಂಚೂಣಿಗೆ ತರುವ ಅಥವಾ ಅದನ್ನು ಕೆಳಗೆ ಸರಿಸುವ ತಾಕತ್ತು ಸಾಮಾಜಿಕ ಜಾಲತಾಣಗಳಿಗಿದೆ. ಫೇಸ್ಬುಕ್ ಪ್ರಕಾರ ಸರಾಸರಿ ಬಳಕೆದಾರರು ತಮ್ಮ ನ್ಯೂಸ್​ಫೀಡ್​ನ ವಿಷಯಗಳಲ್ಲಿ ಶೇ.10 ರಷ್ಟನ್ನು ಮಾತ್ರ ನೋಡುತ್ತಾರೆ. ಇನ್ನು ಸುದ್ದಿಗಳು ಕಾಣಿಸಿಕೊಳ್ಳುವ ಕ್ರಮ ಬದಲಿಸುವ ಮೂಲಕ ಬಳಕೆದಾರರು ಏನನ್ನು ನೋಡಬೇಕು ಎಂಬುದನ್ನು ಈ ಜಾಲತಾಣಗಳೇ ನಿರ್ಧರಿಸುತ್ತವೆ.

ಫೇಸ್ಬುಕ್​ ಥರ್ಡ್ ಪಾರ್ಟಿಯ ವಾಸ್ತವಾಂಶ ಪರೀಕ್ಷೆಯ ಮೂಲಕ ಸಮಸ್ಯಾತ್ಮಕ ಪೋಸ್ಟ್​ಗಳನ್ನು ತೆಗೆದುಹಾಕುತ್ತದೆ. ತನ್ನದೇ ಸೋದರ ಸಂಸ್ಥೆಯಾದ ಇನ್​ಸ್ಟಾಗ್ರಾಂನಲ್ಲಿ ಕೂಡ ಹ್ಯಾಶ್​ ಟ್ಯಾಗ್​ ಮೂಲಕ ಹರಡುವ ತಪ್ಪುಮಾಹಿತಿಯನ್ನು ನಿರ್ಬಂಧಿಸುತ್ತದೆ ಅಥವಾ ಮಿತಿಗೊಳಿಸುತ್ತದೆ.

ಇನ್ನು ಟ್ವಿಟರ್​ ಸಹ ತೇಜೋವಧೆ ಮಾಡುವ ಪೋಸ್ಟ್​​ಗಳನ್ನು ಅಳಿಸಿ ಹಾಕುತ್ತದೆ. ಟ್ವಿಟರ್​ನಲ್ಲಿ ಹಾಕಲಾಗುವ ತಪ್ಪು ಮಾಹಿತಿ ಅಥವಾ ತಿರುಚಿದ ಮಾಹಿತಿಯನ್ನು ತೆಗೆದುಹಾಕಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಟ್ವಿಟರ್​ ಸಂಸ್ಥೆಯ ನಂಬಿಕೆ ಮತ್ತು ಸುರಕ್ಷತೆ ವಿಭಾಗದ ಉಪಾಧ್ಯಕ್ಷ ಡೆಲ್​ ಹಾರ್ವೆ ಹೇಳಿದ್ದಾರೆ. ಕೊರೊನಾ ಸೋಂಕು ತಡೆಹಿಡಿದಿದ್ದಾಗಿ ಹೇಳಿಕೊಂಡ ವಿಡಿಯೋವನ್ನು ಯೂಟ್ಯೂಬ್​ ತೆಗೆದು ಹಾಕಿದೆ. ಆದರೂ ನಿರ್ದಿಷ್ಟ ಸಮಯಮಿತಿಯಲ್ಲಿ ವಾಸ್ತವಾಂಶ ಪರಿಶೀಲನೆ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಈ ಎರಡೂ ಕಂಪನಿಗಳು ಇನ್ನೂ ಹೊಂದಿಲ್ಲ.

ಫೇಸ್ಬುಕ್​, ಟ್ವಿಟರ್ ಹಾಗೂ ಯೂಟ್ಯೂಬ್​ ಮೂರೂ ಮಾಧ್ಯಮಗಳು ಸುಳ್ಳು ಮಾಹಿತಿಗಳನ್ನು ಕಡಿಮೆ ಮಾಡಿ ಅಧಿಕೃತ ಮೂಲಗಳನ್ನು ಆಧರಿಸಿದ ಮಾಹಿತಿ ಪ್ರಚಾರಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಆದಾಗ್ಯೂ ನಿರಂತರವಾಗಿ ವಾಸ್ತವಾಂಶಗಳನ್ನು ಪರಿಶೀಲಿಸುವ ವ್ಯವಸ್ಥೆ ಇಲ್ಲದಿರುವುದು ಬಹುದೊಡ್ಡ ಕೊರತೆಯಾಗಿದೆ. ಮುಖ್ಯವಾಗಿ ಟ್ವಿಟರ್​ನಲ್ಲಿ ತಪ್ಪು ಮಾಹಿತಿಗಳು ಪ್ರಚಾರವಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.