ಹ್ಯಾಮಿಲ್ಟನ್: ಟೀಂ ಇಂಡಿಯಾ-ನ್ಯೂಜಿಲ್ಯಾಂಡ್ ನಡುವಿನ ಮೂರನೇ ಟಿ-20 ಪಂದ್ಯ ಬಹಳಷ್ಟು ರೋಚಕತೆ ಪಡೆದುಕೊಂಡಿದ್ದು, ಎಲ್ಲರಿಗೂ ತಿಳಿದ ಸಂಗತಿ. ಈ ವೇಳೆ ಪಂದ್ಯ ವೀಕ್ಷಣೆ ಮಾಡಲು ಬಂದಿದ್ದ ಕಿವೀಸ್ ಕ್ರೀಡಾಭಿಮಾನಿಯೊಬ್ಬ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿ ಎಲ್ಲರ ಗಮನ ಸೆಳೆದಿದ್ದಾರೆ.
-
Indian Fans asking a New Zealand fan to say ‘Bharat Mata Ki Jai’ 🤣
— swagcricket (@swagcricket) January 30, 2020 " class="align-text-top noRightClick twitterSection" data="
.
Nz fans one of the best fan base in the World 💓 #INDvsNZ #NZvIND #KaneWilliamson pic.twitter.com/cJpQ1FBs9W
">Indian Fans asking a New Zealand fan to say ‘Bharat Mata Ki Jai’ 🤣
— swagcricket (@swagcricket) January 30, 2020
.
Nz fans one of the best fan base in the World 💓 #INDvsNZ #NZvIND #KaneWilliamson pic.twitter.com/cJpQ1FBs9WIndian Fans asking a New Zealand fan to say ‘Bharat Mata Ki Jai’ 🤣
— swagcricket (@swagcricket) January 30, 2020
.
Nz fans one of the best fan base in the World 💓 #INDvsNZ #NZvIND #KaneWilliamson pic.twitter.com/cJpQ1FBs9W
ನ್ಯೂಜಿಲ್ಯಾಂಡ್ ಕ್ರೀಡಾಭಿಮಾನಿ ಬಳಿ ಕುಳಿತುಕೊಂಡಿದ್ದ ಕೆಲ ಭಾರತೀಯರು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ, ನ್ಯೂಜಿಲ್ಯಾಂಡ್ನ ಅಭಿಮಾನಿಯೊಬ್ಬ ಫುಲ್ ಜೋಶ್ನಿಂದ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಹಾಕಿದ್ದಾರೆ. ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಮೊದಲು ಭಾರತೀಯರು ಆತನಿಗೆ ಈ ರೀತಿಯಾಗಿ ಘೋಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದು, ಅದಕ್ಕೆ ನ್ಯೂಜಿಲ್ಯಾಂಡ್ ಅಭಿಮಾನಿ ಧ್ವನಿಗೂಡಿಸಿ ಈ ರೀತಿಯಾಗಿ ಹೇಳಿದ್ದಾರೆ.
ಐದು ಟಿ-20 ಪಂದ್ಯಗಳ ಕ್ರಿಕೆಟ್ ಸರಣಿಯಲ್ಲಿ ಈಗಾಗಲೇ ಟೀಂ ಇಂಡಿಯಾ 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದ್ದು, ಮುಂದಿನ ಎರಡು ಪಂದ್ಯಗಳಲ್ಲೂ ಗೆಲುವು ಸಾಧಿಸಿ ಕ್ಲಿನ್ ಸ್ವೀಪ್ ಮಾಡುವ ತವಕದಲ್ಲಿದೆ.