ETV Bharat / bharat

ಎಐಸಿಸಿ ವಕ್ತಾರೆ ಹುದ್ದೆಯಿಂದ ಖುಷ್ಬೂ ಕೈಬಿಟ್ಟ ಕಾಂಗ್ರೆಸ್​: ನಟಿ ಬಿಜೆಪಿ ಸೇರ್ಪಡೆ ಊಹಾಪೋಹಕ್ಕೆ ಸಿಕ್ತು ಪುಷ್ಟಿ

author img

By

Published : Oct 12, 2020, 10:31 AM IST

ಎಐಸಿಸಿ ವಕ್ತಾರೆಯಾಗಿದ್ದ ಕಾಂಗ್ರೆಸ್ ನಾಯಕಿ ಖುಷ್ಬೂ ಸುಂದರ್​ ಅವರನ್ನು ಹುದ್ದೆಯಿಂದ ಕಾಂಗ್ರೆಸ್​ ಕೆಳಗಿಳಿಸಿದೆ. ಈ ಬಳಿಕ ತಾವೇ ಪಕ್ಷದಿಂದ ಹೊರಹೋಗಿದ್ದಾರೆ ಎನ್ನಲಾಗ್ತಿದೆ.

ಖುಷ್ಬು ಸುಂದರ್
ಖುಷ್ಬು ಸುಂದರ್

ಚೆನ್ನೈ (ತಮಿಳುನಾಡು): ನಟಿ ಮತ್ತು ತಮಿಳುನಾಡಿನ ಕಾಂಗ್ರೆಸ್ ನಾಯಕಿ ಖುಷ್ಬೂ ಸುಂದರ್​ ಅವರನ್ನು ಎಐಸಿಸಿ ವಕ್ತಾರೆ ಹುದ್ದೆಯಿಂದ ಕಾಂಗ್ರೆಸ್​ ಕೆಳಗಿಳಿಸಿದ್ದು, ಈ ಬಳಿಕ ತಾವೇ ಪಕ್ಷದಿಂದ ಹೊರಹೋಗಿದ್ದಾರೆ ಎಂದು ತಿಳಿದುಬಂದಿದೆ.

ಎಐಸಿಸಿ ವಕ್ತಾರೆ ಹುದ್ದೆಯಿಂದ ಕೆಳಗಿಳಿಸಿದ ಕಾಂಗ್ರೆಸ್​

ಖುಷ್ಬೂ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂಬ ಊಹಾಪೋಹಗಳ ನಡುವೆ ಭಾನುವಾರ ನವದೆಹಲಿಗೆ ತೆರಳಿದ್ದಾರೆ. ವರದಿಗಳ ಪ್ರಕಾರ, 2014ರಲ್ಲಿ ಕಾಂಗ್ರೆಸ್ ಸೇರಿದ್ದ ಖುಷ್ಬೂ, ಇದೀಗ ಕೇಸರಿ ಪಕ್ಷಕ್ಕೆ ಸೇರಲು ಸಜ್ಜಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ನಿನ್ನೆ ರಾಷ್ಟ್ರ ರಾಜಧಾನಿಗೆ ತೆರಳುತ್ತಿದ್ದಾಗ, 'ಖುಷ್ಬೂ ಅವರು ಕಾಂಗ್ರೆಸ್ ತೊರೆಯುತ್ತೀರಾ?' ಎಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರು ಪ್ರಶ್ನಿಸಿದಾಗ "ಯಾವುದೇ ಪ್ರತಿಕ್ರಿಯೆ ಇಲ್ಲ" ಎಂದಿದ್ದಾರೆ.

ಕಾಂಗ್ರೆಸ್​ ತೊರೆಯುವುದಾಗಿ ಖುಷ್ಬು ಸ್ಪಷ್ಟನೆ
ಕಾಂಗ್ರೆಸ್​ ತೊರೆಯುವುದಾಗಿ ಖುಷ್ಬೂ ಸ್ಪಷ್ಟನೆ

ಅಕ್ಟೋಬರ್ 10 ರಂದು ನಟಿ ಮಾಡಿದ್ದ ಒಂದು ಟ್ವೀಟ್​ ಬದಲಾವಣೆ ಬಗೆಗಿನ ಊಹಾಪೋಹ ಸೃಷ್ಟಿಯಾಗಲು ಕಾರಣವಾಗಿದೆ. "ಅನೇಕರು ನನ್ನಲ್ಲಿ ಬದಲಾವಣೆಯನ್ನು ಬಯಸುತ್ತಾರೆ. ಗ್ರಹಿಕೆಗಳು ಬದಲಾಗುತ್ತವೆ. ಇಷ್ಟಗಳು ಇಷ್ಟವಾಗುವುದಿಲ್ಲ. ಆಲೋಚನೆಗಳು ಹೊಸ ಆಕಾರವನ್ನು ಪಡೆದುಕೊಳ್ಳುತ್ತವೆ. ಕನಸುಗಳು ಹೊಸದು, ಸರಿ ಮತ್ತು ತಪ್ಪು ನಡುವೆ ಪ್ರೀತಿಯಂತಹ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುತ್ತೀರಿ. ಬದಲಾವಣೆ ಅನಿವಾರ್ಯ" ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.

ಇತ್ತೀಚೆಗೆ ಖುಷ್ಬೂ ಅವರು ಕೇಂದ್ರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಅನ್ನು ಸ್ವಾಗತಿಸಿದ್ದರು. ಪಕ್ಷದ ನಾಯಕ ರಾಹುಲ್ ಗಾಂಧಿಯವರ ಭಿನ್ನ ನಿಲುವಿಗೆ ಕ್ಷಮೆಯಾಚಿಸಿದ್ದರು. ಅವರ ಹೇಳಿಕೆಯು ಟ್ವಿಟ್ಟರ್​ನಲ್ಲಿ ಸಂಚಲನವನ್ನುಂಟು ಮಾಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.