ETV Bharat / bharat

ಅಗತ್ಯ ಔಷಧಗಳು, ಪಿಪಿಇ ಕೊರತೆ ಕೋವಿಡ್ ಚಿಕಿತ್ಸೆಗೆ ಬಹುದೊಡ್ಡ ಸವಾಲು

author img

By

Published : Apr 9, 2020, 1:29 PM IST

ಇತ್ತೀಚೆಗೆ ಕೋವಿಡ್ 19ರ ಕೇಂದ್ರ ಬಿಂದುವಾಗಿರುವ ಅಮೆರಿಕ ನೋವು ನಿವಾರಕ ಸೇರಿದಂತೆ ನಾನಾ ಔಷಧಗಳ ಕೊರತೆ ಎದುರಿಸುತ್ತಿದ್ದರೆ, ಇನ್ನೊಂದೆಡೆ ಭಾರತ ವೈಯಕ್ತಿಕ ರಕ್ಷಣಾ ಉಪಕರಣಗಳ (ಪಿಪಿಇ)ಗಳ ಕಡಿಮೆ ಸಂಗ್ರಹ ಹೊಂದಿದೆ.

covid19

ಹೈದರಾಬಾದ್: ವಿಶ್ವದ ಎಲ್ಲಾ ದೇಶಗಳಲ್ಲಿ ಕೋವಿಡ್19 ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಈ ಮಾರಣಾಂತಿಕ ವೈರಸ್‍ನ ವಿರುದ್ಧದ ಹೋರಾಟಕ್ಕೆ ದೊಡ್ಡ ಸವಾಲಾಗಿರುವುದು ಕೆಲವು ಅಗತ್ಯ ಔಷಧಗಳ ಕೊರತೆ. ಕೊರೊನಾ ವೈರಸ್ ಹಾವಳಿಯ ಕೇಂದ್ರಬಿಂದುವಾಗಿ ಈಗ ಪರಿವರ್ತನೆಗೊಂಡಿರುವ ಅಮೆರಿಕ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಅಗತ್ಯ ಔಷಧಗಳ ಕೊರತೆ ಎದುರಾಗಿದೆ. ಇದು ಕೋವಿಡ್ 19ರ ವಿರುದ್ಧದ ಹೋರಾಟದಲ್ಲಿ ಸ್ಥಳೀಯ ಸರಕಾರಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಲವು ಮಾಧ್ಯಮ ವರದಿಗಳು, ಕೋವಿಡ್ 19 ರ ಚಿಕಿತ್ಸೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸುವ ಔಷಧಗಳ ಕೊರತೆ ಬಗ್ಗೆ ಬೆಟ್ಟು ಮಾಡಿವೆ.

ಅತಿ ಹೆಚ್ಚಿನ ಬೇಡಿಕೆ ಕಾರಣಕ್ಕಾಗಿ ನೋವು ನಿವಾರಕ ಮೆದುಳಿಗೆ ಸಂಬಂಧಿಸಿದ ಔಷಧಗಳಾದ ಫೆಂಟಾನಿಲ್, ಮಿದೊಝೋಲಾಮ್, ಹಾಗೂ ಪ್ರೊಫಾಫೋಲ್, ರಕ್ತದ ಒತ್ತಡಕ್ಕೆ ಸಂಬಂಧಿಸಿದ ವೆಸೊಫ್ರೆಸರ್‍ಗಳ ಲಭ್ಯತೆ ಕಡಿಮೆಯಾಗುತ್ತಿದೆ. ಮೆಡ್‍ಸ್ಕೇಪ್ ವೈದ್ಯಕೀಯ ವರದಿ ಪ್ರಕಾರ ಅಮೆರಿಕದಲ್ಲಿ 3000ಕ್ಕೂ ಅಧಿಕ ಆಸ್ಪತ್ರೆಗಳಿಗೆ ಹಾಗೂ ಆರೋಗ್ಯ ಸೇವಾ ಪೂರೈಕೆದಾತ ಸಂಸ್ಥೆಗಳಿಗೆ ಔಷಧಗಳನ್ನು ಪೂರೈಕೆ ಮಾಡುವ ವಿಝೆಂಟ್ ಔಷಧ ಸೇವಾ ಕಂಪನಿಯ ಉಪಾಧ್ಯಕ್ಷ ಡನ್ ಕಿಸ್ನರ್ ಈ ಬಗ್ಗೆ ಈಗಾಗಲೆ ಮಾಹಿತಿ ನೀಡಿದ್ದಾರೆ. "ಈ ಹಿಂದೆ ವೆಂಟಿಲೇಟರ್​​​​ಗೆ ಸಂಬಂಧಿಸಿದ ಶೇ.95%ರಷ್ಟು ಔಷಧಗಳನ್ನು ಆಸ್ಪತ್ರೆಗಳು ಪಡೆಯುತ್ತಿದ್ದವು. ಆದರೆ ಕಳೆದ ಒಂದು ತಿಂಗಳಲ್ಲಿ ಇದು 60%-70%ಕ್ಕೆ ಇಳಿದಿದೆ," ಎಂದು ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಸಮಸ್ಯೆಯ ತೀವ್ರತೆ ಎಷ್ಟಿದೆಯೆಂದು ಅಂದಾಜಿಸಬೇಕೆಂದರೆ, ಪೋರ್ಟ್‍ಲ್ಯಾಂಡ್‍ನ ಒರೆಗಾನ್ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾನಿಲಯದ ತುರ್ತು ಚಿಕಿತ್ಸಾ ವೈದ್ಯ ಡಾ. ಎಷ್ಟರ್ ಚೂಹು ಅವರು ಟ್ವೀಟ್ ಒಂದನ್ನು ಗಮನಿಸಬೇಕು. ಅಗತ್ಯ ಔಷಧಗಳ ಪೂರೈಕೆ ಇಲ್ಲದೇ, ಇಲ್ಲಿರುವ ವೆಂಟಿಲೇಟರ್​​​​​ಗಳನ್ನ ಬಳಸಲು ಸಾಧ್ಯವಿಲ್ಲ ಹಾಗೂ ರೋಗಿಗಳನ್ನು ಬದುಕಿಸಲು ಸಾಧ್ಯವಿಲ್ಲ. "ಈ ಸಾಂಕ್ರಾಮಿಕ ರೋಗ ಅತಿ ತೀವ್ರತೆಯ ಮಟ್ಟ ತಲುಪುವ ಮುನ್ನವೇ ನಾವು ಔಷಧಗಳ ಕೊರತೆ ಎದುರಿಸಲಾರಂಭಿಸಿದ್ದೇವೆ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಉತ್ತರ ಕೆರೋಲಿನಾದ ಚಾರ್ಲೊಟ್‍ನ ಆರೋಗ್ಯ ರಕ್ಷಣೆ ಸೇವಾ ಸಂಸ್ಥೆ ಪ್ರೀಮಿಯರ್ ಇತ್ತೀಚೆಗೆ ಬಿಡುಗಡೆಗೊಳಿಸಿರುವ ವರದಿ ಪ್ರಕಾರ ಕೋವಿಡ್19 ವಿರುದ್ಧ ಬಳಸಲ್ಪಡುವ 15 ಔಷಧಗಳ ಕೊರತೆ ಈಗಾಗಲೆ ಉದ್ಭವಿಸಿದ್ದು ಅಥವಾ ಪೂರೈಕೆಯಲ್ಲಿ ಕೊರತೆಯಾಗಿದೆ ಅದರಲ್ಲೂ ಮುಖ್ಯವಾಗಿ ನ್ಯೂಯಾರ್ಕ್‍ನಲ್ಲಿ ಈ ಕೊರತೆ ಎದುರಾಗಿದೆ.

ಈ ವರದಿ ಪ್ರಕಾರ ಈ ತಿಂಗಳು ಅನಸ್ತೇಷಿಯಾ ರೂಪದಲ್ಲಿ ಬಳಸಲ್ಪಡುವ ಅಲ್ಬುಟೆರೊಲ್ ಔಷಧ ಪೂರೈಕೆ ಆದೇಶ ಶೇ 1870ರಷ್ಟು ಹೆಚ್ಚಳ ಕಂಡಿದೆ. ಆದರೆ ಈ ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಅದೇ ರೀತಿ, ಫೆಂಟಾನಿಲ್‍ಗೆ ಮಾರ್ಚ್ ತಿಂಗಳಲ್ಲಿ ದೇಶಾದ್ಯಂತ ಎರಡು ಪಟ್ಟು ಬೇಡಿಕೆ ಬಂದರೆ, ನ್ಯೂಯಾರ್ಕ್ ನಗರದಿಂದ ಒಂದರಿಂದಲೇ ಶೇ 533 ರಷ್ಟು ಹೆಚ್ಚು ಬೇಡಿಕೆ ಬಂದಿದೆ. ಪ್ರೀಮಿಯರ್ ವರದಿ ಪ್ರಕಾರ ಶೇ 61ರಷ್ಟು ಬೇಡಿಕೆಯ ಪ್ರಮಾಣವನ್ನಷ್ಟೇ ಪೂರೈಸಲಾಗುತ್ತಿದೆ.

ಇನ್ನು ಭಾರತ ದೇಶ, ರಕ್ಷಣಾ ಉಪಕರಣಗಳ ಕೊರತೆ ಎದುರಿಸುತ್ತಿದೆ. ಇತರ ದೇಶಗಳಂತೆಯೆ ಕೋವಿಡ್ 19ನ್ನು ಎದುರಿಸಲು ಭಾರತ ಕೂಡಾ ಹಲವಾರು ಕೊರತೆಗಳನ್ನು ಎದುರಿಸುತ್ತಿದೆ. ಇತ್ತೀಚೆಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್)ನ ಸ್ಥಾನಿಕ ವೈದ್ಯರ ಸಂಘ (ಆರ್‍ಡಿಎ) ಸಂಸ್ಥೆಯ ನಿರ್ದೇಶಕರಿಗೆ ಪತ್ರವೊಂದನ್ನು ಬರೆದು, ವೈಯಕ್ತಿಕ ರಕ್ಷಣಾ ಉಪಕರಣಗಳ (ಪಿಪಿಇ), ಶಸ್ತ್ರ ಚಿಕಿತ್ಸಾ ಉಪಕರಣಗಳು, ಶಸ್ತ್ರ ಚಿಕಿತ್ಸಾ ಮುಖಗವುಸು, ಇತ್ಯಾದಿಗಳ ಕೊರತೆ ಬಗ್ಗೆ ಗಮನ ಸೆಳೆದಿದ್ದರು. ಕೆಲ ವೈದ್ಯರು ಸಾಮಾಜಿಕ ಮಾಧ್ಯಮಗಳ ಮುಖಾಂತರ ಕೂಡಾ ಪಿಪಿಇ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆಂತರಿಕವಾಗಿ ದೇಶದಲ್ಲಿ ಇವೆಲ್ಲದರ ಕೊರತೆ ಕಂಡು ಬಂದಿದ್ದರೂ, ವಿಶ್ವ ಆರೋಗ್ಯ ಸಂಸ್ಥೆಯ ಫೆಬ್ರವರಿ 27,2020ರ ಮಾರ್ಗದರ್ಶಿ ಸೂತ್ರರಗಳಿಗೆ ವಿರುದ್ಧವಾಗಿ ತೀರಾ ಇತ್ತೀಚಿನವರೆಗೆ ಪಿಪಿಇಗಳ ರಫ್ತಿಗೆ ಸರಕಾರ ಅವಕಾಶ ನೀಡಿತ್ತು. ವಿಶ್ವ ಆರೋಗ್ಯ ಸಂಸ್ಥೆ ಎಲ್ಲಾ ದೇಶಗಳು ಸಾಕಷ್ಟು ಪ್ರಮಾಣದಲ್ಲಿ ಆಂತರಿಕವಾಗಿ ಪಿಪಿಇ ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಿತ್ತು. ವಿಶ್ವಾದ್ಯಂತ 1, 278, 383 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 69, 756 ರೋಗಿಗಳು ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ 309, 254 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇದು ಜಗತ್ತಿನ್ನಲ್ಲೇ ಅತ್ಯಧಿಕ. ದೇಶದಲ್ಲಿ 9,620 ರೋಗಿಗಳು ಈವರೆಗೆ ಸಾವನ್ನಪ್ಪಿದ್ದಾರೆ. ಭಾರತದಲ್ಲಿ 6,217 ಕೋವಿಡ್ 19 ಪ್ರಕರಣಗಳು ವರದಿಯಾಗಿದ್ದು 184 ಮಂದಿ ಸಾವನ್ನಪ್ಪಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.