ತಿರುವನಂತಪುರಂ (ಕೇರಳ): 2020-21ರ ಶೈಕ್ಷಣಿಕ ವರ್ಷಕ್ಕೆ ಪದವಿಪೂರ್ವ (ಯುಜಿ) ತರಗತಿಗಳಿಗೆ ಪ್ರವೇಶ ಪಡೆಯಲು ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ಕೇರಳ ವಿಶ್ವವಿದ್ಯಾಲಯ ಮಂಗಳವಾರ ಪ್ರಾರಂಭಿಸಿದೆ.
ಜುಲೈ 21 ರಿಂದ ಪ್ರಾರಂಭವಾದ ಆನ್‌ಲೈನ್ ನೋಂದಣಿ ಆಗಸ್ಟ್ 17 ರಂದು ಮುಕ್ತಾಯಗೊಳ್ಳಲಿದೆ. ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ (keralauniversity.ac.in ಅಥವಾ admissions.keralauniversity.ac.in) ಗೆ ಭೇಟಿ ನೀಡಿ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬಹುದು.
ಆಗಸ್ಟ್ 12 ರಂದು ವಿಶ್ವವಿದ್ಯಾಲಯವು ಪ್ರಾಯೋಗಿಕ ಸೀಟ್ ಹಂಚಿಕೆಯನ್ನು ನಡೆಸಲಿದೆ ಎಂದು ವರದಿಯಾಗಿದೆ. ಮೊದಲ ಪಟ್ಟಿಯನ್ನು ಆಗಸ್ಟ್ 18 ರೊಳಗೆ ಮತ್ತು ಎರಡನೇ ಪಟ್ಟಿಯನ್ನು ಆಗಸ್ಟ್ 24 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಆದರೆ, ಕಾಲೇಜು ಸೇರ್ಪಡೆಗಾಗಿ ವಿಶ್ವವಿದ್ಯಾಲಯವು ಇನ್ನೂ ಯಾವುದೇ ನಿರ್ದಿಷ್ಟ ದಿನಾಂಕವನ್ನು ಘೋಷಿಸಿಲ್ಲ. ವೆಬ್‌ಸೈಟ್‌ನ ಅಧಿಕೃತ ಲಿಂಕ್: https://admissions.keralauniversity.ac.in/ug2020/generate_chalan.php