ತಿರ್ಪೂರ್(ತಮಿಳುನಾಡು): ಕೇರಳ ರಾಜ್ಯ ಸಾರಿಗೆ ಬಸ್ ಹಾಗೂ ಕಂಟೇನರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಸುಮಾರು 20 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದ ಘಟನೆ ನಡೆದಿದ್ದು, ಇದೀಗ ಅಲ್ಲಿನ ಸಾರಿಗೆ ಸಂಸ್ಥೆ ಪರಿಹಾರ ಘೋಷಣೆ ಮಾಡಿದೆ.
ಬೆಂಗಳೂರಿನಿಂದ ಕೇರಳಕ್ಕೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ಅಪಘಾತ: 20 ಮಂದಿ ಸಾವು
ಘಟನೆಯಲ್ಲಿ ಸಾವನ್ನಪ್ಪಿರುವ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದ್ದು, ತಕ್ಷಣಕ್ಕೆ 2 ಲಕ್ಷ ರೂ ನೀಡುವುದಾಗಿ ಕೇರಳ ರಸ್ತೆ ಸಾರಿಗೆ ಸಂಸ್ಥೆ ಘೋಷಣೆ ಮಾಡಿದೆ. ಉಳಿದಂತೆ ಇನ್ಸೂರೆನ್ಸ್ ರೂಪದಲ್ಲಿ 30 ಲಕ್ಷ ರೂಗಳನ್ನ ಕುಟುಂಬಗಳಿಗೆ ನೀಡಲಾಗುವುದು ಎಂದು ತಿಳಿಸಿದೆ.
-
Kerala Transport Min on Tirupur bus mishap:Kerala State Road Transport Corp to give Rs10 lakh as compensation to families of the deceased. Rs2 lakh to be given immediately as emergency aid. Insurance amt of Rs30 lakh each to be given to families of the deceased KSRTC employees
— ANI (@ANI) February 20, 2020 " class="align-text-top noRightClick twitterSection" data="
">Kerala Transport Min on Tirupur bus mishap:Kerala State Road Transport Corp to give Rs10 lakh as compensation to families of the deceased. Rs2 lakh to be given immediately as emergency aid. Insurance amt of Rs30 lakh each to be given to families of the deceased KSRTC employees
— ANI (@ANI) February 20, 2020Kerala Transport Min on Tirupur bus mishap:Kerala State Road Transport Corp to give Rs10 lakh as compensation to families of the deceased. Rs2 lakh to be given immediately as emergency aid. Insurance amt of Rs30 lakh each to be given to families of the deceased KSRTC employees
— ANI (@ANI) February 20, 2020
ಇಂದು ಬೆಳಗಿನ ಜಾವ 3.15ರ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ಬಸ್ ನಲ್ಲಿ ಒಟ್ಟು 48 ಮಂದಿ ಪ್ರಯಾಣಿಕರಿದ್ದರು. ಚಾಲಕ, ನಿರ್ವಾಹಕ ಸೇರಿ ಒಟ್ಟು 20 ಮಂದಿ ಮೃತಪಟ್ಟಿದ್ದು, ಉಳಿದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನೆಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಸಲಾಗುತ್ತಿದೆ.