ಕೊಚ್ಚಿ: ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿದೆ. ರಾಜ್ಯದ 244 ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
ಕೊಚ್ಚಿ ಕಾರ್ಪೊರೇಶನ್‌ನ ನಾರ್ತ್ ಐಲ್ಯಾಂಡ್ ವಾರ್ಡ್‌ನಲ್ಲಿ ಯುಡಿಎಫ್ ಮೇಯರ್ ಅಭ್ಯರ್ಥಿಯನ್ನು ಬಿಜೆಪಿ ಅಭ್ಯರ್ಥಿ ಕೇವಲ ಒಂದು ಮತದಿಂದ ಸೋಲಿಸಿ, ಗೆಲುವು ದಾಖಲಿಸಿದ್ದಾರೆ.
ಕಾಂಗ್ರೆಸ್ ಮೇಯರ್ ಅಭ್ಯರ್ಥಿಯಾಗಿದ್ದ ಎನ್.ವೇಣುಗೋಪಾಲ್ ವಿರುದ್ಧ ಬಿಜೆಪಿ ಅಭ್ಯರ್ಥಿ ಟಿ.ಪದ್ಮಕುಮಾರಿ ಗೆದ್ದು ಬೀಗಿದ್ದಾರೆ.
ಓದಿ: ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಆಡಳಿತಾರೂಢ ಎಲ್‌ಡಿಎಫ್-ವಿರೋಧ ಪಕ್ಷಗಳ ಪೈಪೋಟಿ