ಕೊಚ್ಚಿ: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಐಎಎಸ್ ಮಾಜಿ ಅಧಿಕಾರಿ ಹಾಗೂ ಕೇರಳ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ಗೆ ಕೇರಳ ಹೈಕೋರ್ಟ್ ಜಾಮೀನು ನೀಡಿದೆ.
2019ರ ಜುಲೈನಲ್ಲಿ ಬೆಳಕಿಗೆ ಬಂದ ಕೇರಳದ ಬಹುಕೋಟಿ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ವೇಳೆ ಶಿವಶಂಕರ್ ಅವರು 1.30 ಕೋಟಿ ರೂ. ಮೌಲ್ಯದ ಡಾಲರ್ಗಳನ್ನು ಕಳ್ಳಸಾಗಣೆ ಮಾಡಿರುವುದು ತಿಳಿದು ಬಂದಿತ್ತು. ಈ ಸಂಬಂಧ ಶಿವಶಂಕರ್ ವಿರುದ್ಧ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಕೇಸ್ ದಾಖಲಿಸಿಕೊಂಡ ಜಾರಿ ನಿರ್ದೇಶನಾಲಯ (ಇಡಿ) ಅವರನ್ನು ಬಂಧಿಸಿತ್ತು.
-
Kerala High Court grants bail to M Sivasankar, former Principal Secretary to the Kerala CMO, in the money laundering case registered by Enforcement Directorate in connection with the Kerala gold smuggling case
— ANI (@ANI) January 25, 2021 " class="align-text-top noRightClick twitterSection" data="
">Kerala High Court grants bail to M Sivasankar, former Principal Secretary to the Kerala CMO, in the money laundering case registered by Enforcement Directorate in connection with the Kerala gold smuggling case
— ANI (@ANI) January 25, 2021Kerala High Court grants bail to M Sivasankar, former Principal Secretary to the Kerala CMO, in the money laundering case registered by Enforcement Directorate in connection with the Kerala gold smuggling case
— ANI (@ANI) January 25, 2021
ಇದನ್ನೂ ಓದಿ: ಸಿಕ್ಕಿಂನಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದಿತ್ತು ಸಂಘರ್ಷ: ಸ್ಫೋಟಕ ಮಾಹಿತಿ ಬಹಿರಂಗ
ಭ್ರಷ್ಟಾಚಾರ ಸೇರಿದಂತೆ ಇತರ ಕ್ರಿಮಿನಲ್ ಆರೋಪಗಳು ನಾಗರಿಕ ಸೇವಾ ಅಧಿಕಾರಿಗಳ ಮೇಲಿದ್ದರೂ ಸಹ ಕೇಂದ್ರ ತನಿಖಾ ಸಂಸ್ಥೆಯಿಂದ ಬಂಧನಕ್ಕೊಳಗಾದ ಕೇರಳದ ಮೊದಲ ಐಎಎಸ್ ಅಧಿಕಾರಿ ಎಂ. ಶಿವಶಂಕರ್ ಆಗಿದ್ದಾರೆ. ಇದೀಗ ಇವರಿಗೆ ಕೇರಳ ಹೈಕೋರ್ಟ್ ಬೇಲ್ ನೀಡಿದೆ.