ETV Bharat / bharat

ಶಾಲಾ ಕಾಲೇಜುಗಳಲ್ಲಿ ಪ್ರತಿಭಟನೆ, ಧರಣಿ, ಚಳವಳಿಗೆ ಬ್ರೇಕ್​ ಹಾಕಿದ ಕೇರಳ ಹೈಕೋರ್ಟ್​ - ಶಾಲಾ ಕಾಲೇಜುಗಳಲ್ಲಿ ಹೋರಾಟಕ್ಕೆ ನಿಷೇಧ

ಕೇರಳದ ಶಾಲಾ ಕಾಲೇಜುಗಳಲ್ಲಿ ಪ್ರತಿಭಟನೆ, ಧರಣಿ ನಡೆಸದಂತೆ ಅಲ್ಲಿನ ಹೈಕೋರ್ಟ್​ ಆದೇಶ ಹೊರಡಿಸಿದೆ. ಶಾಲಾ-ಕಾಲೇಜುಗಳು ಇರುವುದು ವಿದ್ಯಾಭ್ಯಾಸಕ್ಕಾಗಿ, ಹೋರಾಟಕ್ಕಲ್ಲ. ಆದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಡೆಸುವ ಎಲ್ಲ ರೀತಿಯ ಚಳವಳಿಗಳಿಗೆ ನಿಷೇಧ ಹೇರಲಾಗುತ್ತಿದೆ ಎಂದು ಕೇರಳ ಹೈಕೋರ್ಟ್​ ನ್ಯಾಯಾಧೀಶ ಪಿ.ಬಿ.ಸುರೇಶ್ ಕುಮಾರ್ ಬುಧವಾರ ಆದೇಶ ಹೊರಡಿಸಿದ್ದಾರೆ.

kerala-hc-bans-student-strikes-in-schools-colleges
ಘೇರಾವ್​, ಧರಣಿಗೆ ನಿಷೇಧ
author img

By

Published : Feb 27, 2020, 12:22 PM IST

ತಿರುವನಂತಪುರ: ಕೇರಳದ ಶಾಲಾ ಕಾಲೇಜುಗಳಲ್ಲಿ ಪ್ರತಿಭಟನೆ, ಧರಣಿ ನಡೆಸದಂತೆ ಅಲ್ಲಿನ ಹೈಕೋರ್ಟ್​ ಆದೇಶ ಹೊರಡಿಸಿದೆ.

ಶಾಲಾ-ಕಾಲೇಜುಗಳು ಇರುವುದು ವಿದ್ಯಾಭ್ಯಾಸಕ್ಕಾಗಿ, ಹೋರಾಟಕ್ಕಲ್ಲ. ಆದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಡೆಸುವ ಎಲ್ಲ ರೀತಿಯ ಚಳವಳಿಗಳಿಗೆ ನಿಷೇಧ ಹೇರಲಾಗುತ್ತಿದೆ ಎಂದು ಕೇರಳ ಹೈಕೋರ್ಟ್​ ನ್ಯಾಯಾಧೀಶ ಪಿ.ಬಿ.ಸುರೇಶ್ ಕುಮಾರ್ ಬುಧವಾರ ಆದೇಶ ಹೊರಡಿಸಿದ್ದಾರೆ.

ಘೇರಾವ್​, ಧರಣಿಗೆ ನಿಷೇಧ

ಶಿಕ್ಷಣ ಸಂಸ್ಥೆಯಲ್ಲಿ ಇತರರ ಹಕ್ಕುಗಳಿಗೆ ಹಾನಿಯಾಗಬಾರದು. ಕಾಲೇಜುಗಳಲ್ಲಿ ಶಾಂತಿಯುತ ಚರ್ಚೆಗಳು ಹಾಗೂ ಆಲೋಚನೆಗಳಿಗೆ ವೇದಿಕೆ ಒದಗಿಸಬಹುದು. ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾದ ನಡೆ ವಿರುದ್ಧ ಆಯಾ ಸಂಸ್ಥೆಗಳು ಕ್ರಮ ತೆಗೆದುಕೊಳ್ಳಬಹುದು. ಅವಶ್ಯಕತೆ ಕಂಡು ಬಂದಲ್ಲಿ, ಪೊಲೀಸರನ್ನು ಕರೆಸಿಕೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕ್ಯಾಂಪಸ್​ ರಾಜಕೀಯದ ವಿರುದ್ಧ ಇಲ್ಲಿನ 20 ಶಿಕ್ಷಣ ಸಂಸ್ಥೆಗಳು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದವು. ಇದನ್ನು ಪರಿಶೀಲಿಸಿದ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.