ETV Bharat / bharat

ಬಸ್, ಮೆಟ್ರೋ ಪುನಾರಂಭಕ್ಕೆ ಜನರ ಒಲವು : ಜನಾರ್ಧನರ ಅಭಿಪ್ರಾಯ ಬಹಿರಂಗಗೊಳಿಸಿದ ಕೇಜ್ರಿವಾಲ್​​

ದೇಶದಲ್ಲಿ ಹೇರಿಕೆ ಮಾಡಿರುವ ಲಾಕ್​ಡೌನ್​ 3.0 ಮೇ 17ಕ್ಕೆ ಅಂತ್ಯಗೊಳ್ಳಲಿದ್ದು, ಮುಂದಿನ ಕಾರ್ಯಯೋಜನೆ ಯಾವ ರೀತಿಯಲ್ಲಿರಬೇಕು ಎಂಬುದರ ಕುರಿತು ಮನವಿ ಸಲ್ಲಿಸುವಂತೆ ಕೇಜ್ರಿವಾಲ್​ ಕೇಳಿಕೊಂಡಿದ್ದರು.

Kejriwal
Kejriwal
author img

By

Published : May 14, 2020, 2:12 PM IST

ನವದೆಹಲಿ: ದೇಶದಲ್ಲಿ ಹೇರಿಕೆ ಮಾಡಲಾಗಿರುವ ಲಾಕ್​ಡೌನ್​ 3.0 ಮೇ.17ರಂದು ಮುಕ್ತಾಯಗೊಳ್ಳಲಿದೆ. ಇದಾದ ಬಳಿಕ ದೆಹಲಿಯಲ್ಲಿ ಯಾವ ರೀತಿಯ ನಿಯಮ ಜಾರಿಯಲ್ಲಿರಬೇಕು ಎಂಬುದರ ಮನವಿ ನೀಡುವಂತೆ ಕೋರಿದ್ದ ಕೇಜ್ರಿವಾಲ್​​ ಕಚೇರಿಗೆ 5 ಲಕ್ಷ ಸಲಹೆ ಬಂದಿದ್ದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಸಲಹೆ ನೀಡುವಂತೆ ದೆಹಲಿ ಜನರಲ್ಲಿ ಅವರು ಮನವಿ ಮಾಡಿದ್ದರು. ಇದೀಗ ಅದರ ಬಗ್ಗೆ ಮಾಹಿತಿ ನೀಡಿರುವ ಕೇಜ್ರಿವಾಲ್​​ ಅತಿ ಹೆಚ್ಚು ಜನರು ಬಸ್​ ಹಾಗೂ ಮೆಟ್ರೋ ಆರಂಭ ಮಾಡುವಂತೆ ಮನವಿ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ಶಾಲಾ-ಕಾಲೇಜ್​ ಬಂದ್​​ ಮಾಡುವಂತೆ ಜನರು ಸಲಹೆ ನೀಡಿದ್ದಾರೆ. ಎಲ್ಲ ಶಾಪ್​ ಓಪನ್​ ಮಾಡುವಂತೆ ಮಾರುಕಟ್ಟೆ ಅಸೋಷಿಯೇಷನ್​ ಮನವಿ ಮಾಡಿದ್ದು ಇಂದು ಸಂಜೆ ಗವರ್ನರ್​ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಕೇಜ್ರಿವಾಲ್​ ಸುದ್ದಿಗೋಷ್ಠಿ

ಇನ್ನು ಕಟ್ಟಿಂಗ್​ ಶಾಪ್​, ಸಲೂನ್​, ಸಿನಿಮಾ ಹಾಲ್​,ಶಿಕ್ಷಣ ತರಬೇತಿ ಕೇಂದ್ರ, ಹೋಟೆಲ್​ ಓಪನ್​ ಮಾಡದಂತೆ ದೆಹಲಿ ಜನರು ಮನವಿ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ಹೀಗಾಗಿ ಈ ಎಲ್ಲ ವಿಚಾರಗಳ ಕುರಿತು ನಾವು ಗವರ್ನರ್​ ಜತೆ ಮಾತನಾಡಿ ಕೇಂದ್ರಕ್ಕೆ ಮನವಿ ಸಲ್ಲಿಕೆ ಮಾಡುತ್ತೇವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹಾರಾಷ್ಟ್ರ, ಗುಜರಾತ್​ ಹಾಗೂ ತಮಿಳುನಾಡು ಬಿಟ್ಟರೆ ಅತಿ ಹೆಚ್ಚು ಕೊರೊನಾ ಕೇಸ್​ ಕಂಡು ಬಂದಿರುವುದು ನವದೆಹಲಿಯಲ್ಲಿ. ಇಲ್ಲಿಯವರೆಗೆ 7,998 ಪ್ರಕರಣ ಕಂಡು ಬಂದಿದ್ದು, 2,459 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 472 ಹೊಸ ಕೋವಿಡ್​ ಪ್ರಕರಣ ಕಾಣಿಸಿಕೊಂಡಿವೆ.

ಕಳೆದೆರಡು ದಿನಗಳ ಹಿಂದೆ ಎಲ್ಲ ಸಿಎಂಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್​ ವೇಳೆ ಮೇ.17ರ ಬಳಿಕ ನಿಮ್ಮ ರಾಜ್ಯದಲ್ಲಿ ಯಾವ ರೀತಿಯ ಸಡಿಲಿಕೆ ಬೇಕು ಎಂಬುದರ ಬಗ್ಗೆ ನನಗೆ ಮಾಹಿತಿ ನೀಡುವಂತೆ ತಿಳಿಸಿದ್ದರು. ಅದರಂತೆ ದೆಹಲಿ ಜನರ ಬಳಿ ನಾವು ಇದರ ಬಗ್ಗೆ ಕೇಳಿಕೊಂಡಿದ್ದೆವು. ಅತ್ಯಂತ ಮಹತ್ವದ ಮಾಹಿತಿ ಜನರು ನೀಡಿದ್ದಾರೆ ಎಂದಿದ್ದಾರೆ.

ಮೊನ್ನೆ ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಕೇಜ್ರಿವಾಲ್ ಮೇ 17ರ ಬಳಿಕ ಲಾಕ್​‌ಡೌನ್​ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುವುದಿಲ್ಲ, ಸಡಿಲಿಕೆ ಕುರಿತು ಸಲಹೆ ನೀಡುವಂತೆ ಕೋರಿದ್ದರು. ಲಾಕ್​ಡೌನ್ ಸಡಿಲಿಕೆ ಕಾರ್ಯರೂಪಕ್ಕೆ ಬಂದರೂ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಮತ್ತು ಇತರ ಎಲ್ಲ ನಿಯಮಗಳನ್ನು ಪಾಲಿಸಬೇಕು ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.