ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ಸೋಂಕು ತಗುಲಿ ಸಾವನ್ನಪ್ಪಿರುವ ವೈದ್ಯ ಆಸೀಂ ಗುಪ್ತಾ ಕುಟುಂಬಕ್ಕೆ ಮುಖ್ಯಮಂತ್ರಿ ಕೇಜ್ರಿವಾಲ್ ಒಂದು ಕೋಟಿ ರೂ ಮೊತ್ತದ ಪರಿಹಾರದ ಚೆಕ್ ವಿತರಿಸಿದರು.
ದೆಹಲಿಯ ಎಲ್ಎನ್ಜೆಪಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿದ್ದ ಇವರಿಗೆ ಜೂನ್ 6ರಂದು ಸೋಂಕು ಕಾಣಿಸಿತು. ಇದಾದ ಬಳಿಕ ಅವರನ್ನು ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದ್ರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
-
Met with the family of Late Dr Aseem Gupta ji who lost his life to Corona.
— Arvind Kejriwal (@ArvindKejriwal) July 3, 2020 " class="align-text-top noRightClick twitterSection" data="
We cannot do anything to bring back the "People's Doctor", but it is our duty to support families of those who lay down their lives for us.
An ex gratia of ₹1 crore was given to the family today. pic.twitter.com/YlYCKZ9siy
">Met with the family of Late Dr Aseem Gupta ji who lost his life to Corona.
— Arvind Kejriwal (@ArvindKejriwal) July 3, 2020
We cannot do anything to bring back the "People's Doctor", but it is our duty to support families of those who lay down their lives for us.
An ex gratia of ₹1 crore was given to the family today. pic.twitter.com/YlYCKZ9siyMet with the family of Late Dr Aseem Gupta ji who lost his life to Corona.
— Arvind Kejriwal (@ArvindKejriwal) July 3, 2020
We cannot do anything to bring back the "People's Doctor", but it is our duty to support families of those who lay down their lives for us.
An ex gratia of ₹1 crore was given to the family today. pic.twitter.com/YlYCKZ9siy
ಡಾ. ಗುಪ್ತಾ ಅವರು ಜನರ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಅವರ ಕುಟುಂಬ ಸಂಕಷ್ಟದಲ್ಲಿದ್ದು ಸಹಾಯ ಮಾಡುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಇದೊಂದು ಸಣ್ಣ ಸಹಾಯ ಎಂದು ಸಿಎಂ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
52 ವರ್ಷದ ವೈದ್ಯ ಡಾ. ಆಸೀಂ ಗುಪ್ತಾ ಕಳೆದ ಕೆಲ ದಿನಗಳಿಂದ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.