ನವದೆಹಲಿ: ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಸೀಜ್ ಮಾಡಲಾದ ಮನೆಯನ್ನು ಖಾಲಿ ಮಾಡುವಂತೆ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಜಾರಿ ನಿರ್ದೇಶನಾಲಯ ಸೂಚಿಸಿದೆ.
ಭ್ರಷ್ಟಾಚಾರ ಪ್ರಕರಣ ಸಂಬಂಧ ನವದೆಹಲಿಯಲ್ಲಿರುವ ಕಾರ್ತಿ ಚಿದಂಬರಂ ಅವರ ಮನೆಯನ್ನೂ ಕಳೆದ ಅಕ್ಟೋಬರ್ ತಿಂಗಳಲ್ಲಿ ಇಡಿ ವಶಕ್ಕೆ ಪಡೆದಿತ್ತು. ಇನ್ನು 10 ದಿನದೊಳಗೆ ಆಸ್ತಿಯನ್ನು ತಮ್ಮ ವಶಕ್ಕೆ ನೀಡುವಂತೆ ಇದೀಗ ಆದೇಶಿಸಿದೆ.
ಈ ಆಸ್ತಿಯಲ್ಲಿ ಕಾರ್ತಿ ಚಿದಂಬರಂ ಅವರ ತಾಯಿ ನಳಿನಿ ಅವರ ಪಾಲುದಾರಿಕೆಯೂ ಇದೆ. ಮುಂದಿನ ಆದೇಶ ಅಥವಾ ಪ್ರಕ್ರಿಯೆವರೆಗೂ ಆಸ್ತಿ ಇಡಿ ವಶದಲ್ಲೇ ಇರಲಿದೆ ಎಂದು ಇಡಿ ಕೌನ್ಸಿಲ್ ಅಧಿಕಾರಿ ನಿತೇಶ್ ರಾಣಾ ಹೇಳಿದ್ದಾರೆ.