ಕಾನ್ಪುರ(ಉತ್ತರ ಪ್ರದೇಶ): ಕಾನ್ಪುರದ ವಿಜಯ್ ನಗರ ಬಳಿಯ ಕಸದ ತೊಟ್ಟಿಯಲ್ಲಿ 500 ಮತ್ತು 2,000 ರೂಪಾಯಿ ನೋಟುಗಳು ಪತ್ತೆಯಗಿದ್ದು, ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಕಸ ಆರಿಸುವ ವ್ಯಕ್ತಿಗೆ ನೋಟುಗಳು ಕಂಡುಬಂದಿದ್ದು, ಸ್ಥಳೀಯ ಜನರಿಗೆ ಈ ವಿಷಯ ತಪಿದೆ. ಕಸ ಆಯುವವರು ಮತ್ತು ಸ್ಥಳೀಯರು ನೋಟುಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು ವರದಿಯಾಗಿದೆ. ಆ ಪೈಕಿ ಒಬ್ಬ ವ್ಯಕ್ತಿ 10,000 ರೂಪಾಯಿ ತೆಗೆದುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ವಿಷಯ ತಿಳಿದ ಪೊಲೀಸರು, ಸ್ಥಳಕ್ಕೆ ತೆರಳುವಷ್ಟರಲ್ಲಿ ಯಾವುದೇ ನೋಟುಗಳು ಕಂಡುಬಂದಿಲ್ಲ. ಘಟನೆ ಕುರಿತಂತೆ ತನಿಖೆ ಆರಂಭಿಸಿದ್ದಾರೆ.