ಕಾನ್ಪುರ್ (ಉತ್ತರ ಪ್ರದೇಶ): ಕಾನ್ಪುರ್ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಸಬ್ ಇನ್ಸ್‌ಪೆಕ್ಟರ್ ಮತ್ತು ಮೂವರು ಕಾನ್ಸ್ಟೇಬಲ್ಗಳನ್ನು ಇಂದು ಅಮಾನತು ಮಾಡಲಾಗಿದೆ.
ಮೂಲಗಳ ಪ್ರಕಾರ, ಅಮಾನತುಗೊಂಡಿರುವ ಎಲ್ಲಾ ಪೊಲೀಸರು ವಿಕಾಸ್ ದುಬೆಯೊಂದಿಗೆ ಫೋನ್ ಸಂಪರ್ಕದಲ್ಲಿದ್ದರು ಎಂಬುದು ಕರೆ ವಿವರಗಳಿಂದ ತಿಳಿದುಬಂದಿದೆ.
ಕಾನ್ಪುರದ ಸಮೀಪವಿರುವ ಹಳ್ಳಿಯಲ್ಲಿ ವಿಕಾಸ್ ದುಬೆಯ ಸಹಾಯಕರು ಡಿಎಸ್ಪಿ ಸೇರಿದಂತೆ ಎಂಟು ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದರು.
ಜುಲೈ 2 ಮತ್ತು ಜುಲೈ 3 ರ ಮಧ್ಯರಾತ್ರಿ ಚೌಬೆಪುರ ಪೊಲೀಸ್ ಠಾಣೆ ವ್ಯಾಪ್ತಿಯ ಡಿಕ್ರು ಗ್ರಾಮದಲ್ಲಿ 60 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ವಿಕಾಸ್ ದುಬೆಯನ್ನು ಬಂಧಿಸಲು ಮುಂದಾದಾಗ ಗುಂಡಿನ ದಾಳಿ ನಡೆದಿತ್ತು. ಈ ವೇಳೆ 8 ಮಂದಿ ಪೊಲೀಸರು ಹುತಾತ್ಮರಾಗಿದ್ದರು.