ಸೂರತ್: ಮಹಾರಾಷ್ಟ್ರ ಸರ್ಕಾರ ಮತ್ತು ಕಂಗನಾ ರಣಾವತ್ ಮಧ್ಯೆ ನಡೆಯುತ್ತಿರುವ ಶೀತಲ ಸಮರದ ನಡುವೆ ಸೀರೆಯಲ್ಲಿ ಕಂಗನಾ ಭಾವಚಿತ್ರ ಪ್ರಿಂಟ್ ಮಾಡಿ ಗುಜರಾತ್ನ ಸೂರತ್ನ ಜವಳಿ ವ್ಯಾಪಾರಿ ಕಂಗನಾಗೆ ಬೆಂಬಲ ಸೂಚಿಸಿದ್ದಾರೆ.
ಸೂರತ್ನ ಪ್ರಸಿದ್ಧ 'ಆಲಿಯಾ ಫ್ಯಾಬ್ರಿಕ್ಸ್' ಎಂಬ ಜವಳಿ ಮಳಿಗೆಯ ಮಾಲೀಕರಾದ ಚೋಟುಭಾಯ್ ಮತ್ತು ರಜತ್ ದಾವ್ರೆ ಎಂಬವರು 'ಮಣಿಕರ್ಣಿಕಾ' ಸಿನಿಮಾದಲ್ಲಿ ಕಂಗನಾ ರಣಾವತ್ ಪಾತ್ರದ ಫೋಟೋವನ್ನು ಸೀರೆಗಳಲ್ಲಿ ಮುದ್ರಿಸಿ ಮಾರಾಟ ಮಾಡುತ್ತಿದ್ದಾರೆ. ಈ ಸೀರೆಗಳ ಮೇಲೆ ನಟಿಯ ಚಿತ್ರ ಮಾತ್ರವಲ್ಲದೇ 'I Support Kangana Ranaut' ಎಂದೂ ಮುದ್ರಿಸಲಾಗಿದೆ.
![Kangana Ranaut print saree](https://etvbharatimages.akamaized.net/etvbharat/prod-images/gj-sur-saree-7200931_12092020215053_1209f_1599927653_430.jpg)
ಮಹಾರಾಷ್ಟ್ರ ಸರ್ಕಾರದಿಂದ ಕಂಗನಾ ಅವರಿಗೆ ಅನ್ಯಾಯವಾಗಿದೆ. ಆದರೆ ಕಂಗನಾ ಅವರ ಧೈರ್ಯವನ್ನು ನೋಡಿ ನಮಗೆ ಸ್ಫೂರ್ತಿ ಸಿಕ್ಕಿದೆ. ಮಹಿಳೆಯ ಜೊತೆ ಮಹಾರಾಷ್ಟ್ರ ಸರ್ಕಾರ ಹೋರಾಟ ನಡೆಸುತ್ತಿದೆ. ಆದ್ರೆ ನಾವು ಕಂಗನಾ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಈ ಸೀರೆಗಳಿಗೆ ಮಹಿಳೆಯರು ಆನ್ಲೈನ್ನಲ್ಲಿ ಹೆಚ್ಚೆಚ್ಚು ಆರ್ಡರ್ ಮಾಡಿದ್ದು, ಅವರೂ ಕೂಡ ಇದನ್ನು ಖರೀದಿಸುವ ಮೂಲಕ ನಟಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಚೋಟುಭಾಯ್ ಹಾಗೂ ರಜತ್ ದಾವ್ರೆ ಹೇಳುತ್ತಾರೆ.
ಅಲಿಯಾ ಫ್ಯಾಬ್ರಿಕ್ಸ್ ಫ್ಯಾನ್ಸಿ ಬಟ್ಟೆಗಳಿಗೆ ಹೆಸರುವಾಸಿಯಾಗಿದ್ದು, ಮುಂಬೈ, ದೆಹಲಿ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ಮುಂತಾದೆಡೆ ಇದರ ಬ್ರಾಂಚ್ಗಳಿವೆ.