ETV Bharat / bharat

ಬಂಧಿಸುವುದಾದರೆ ಬಂಧಿಸಲಿ... ಯಾವುದಕ್ಕೂ ಜಗ್ಗಲ್ಲ ಎಂದ ಕಮಲ್​ ಹಾಸನ್​ - kamal hassan

ಗೊಡ್ಸೆ ಹೇಳಿಕೆಯಿಂದಾಗಿ ವಿವಾದಕ್ಕೊಳಗಾಗಿರುವ ನಟ ಕಮಲ್​ ಹಾಸನ್, ತಮ್ಮ ಹೇಳಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯಾವ ಪ್ರತಿಭಟನೆಗೂ ತಾವು ಜಗ್ಗುವುದಿಲ್ಲ ಎಂದು ವಿರೋಧಿಗಳಿಗೆ ಟಾಂಗ್​ ಕೊಟ್ಟಿದ್ದಾರೆ.

ತಿರುಚಿಯ ರ್ಯಾಲಿ ಸಂದರ್ಭದಲ್ಲಿ ಕಮಲ್​ ಹಾಸನ್​ ಮೇಲೆ ಕಲ್ಲು ತೂರಾಟ
author img

By

Published : May 17, 2019, 11:35 AM IST

ನವದೆಹಲಿ: ತಮಗೆ ನನ್ನನ್ನು ಬಂಧಿಸುತ್ತಾರೆ ಎಂಬ ಭೀತಿಯಿಲ್ಲ. ನನ್ನನ್ನು ಬಂಧಿಸುವುದರಿಂದ ಅವರಿಗೇ ಸಮಸ್ಯೆಗಳು ಹೆಚ್ಚು. ಇದು ಎಚ್ಚರಿಕೆ ಅಲ್ಲ ಸಲಹೆ ಮಾತ್ರ ಎಂದು ಕಮಲ್​ ಹಾಸನ್ ಹೇಳುವ ಮೂಲಕ ವಿರೋಧಿಗಳಿಗೆ ತಾವು ಜಗ್ಗಲ್ಲ ಬಗ್ಗಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಚೆನ್ನೈನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕಮಲ್​ ಹಾಸನ್​, ತಿರುಚಿ ಘಟನೆಯನ್ನು ಖಂಡಿಸಿದರು. 'ಇತ್ತೀಚಿನ ದಿನಗಳಲ್ಲಿ ಸಭ್ಯತೆ, ಕರುಣೆ ಮರೆಯಾಗುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಿರುಚಿಯಲ್ಲಿ ಕಮಲ್ ಹಾಸನ್ ಸಮಾವೇಶ ನಡೆಸುತ್ತಿದ್ದ ಸಂದರ್ಭದಲ್ಲಿ ಕಲ್ಲುತೂರಾಟದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಮಲ್​ ಹಾಸನ್ ಈ ಹೇಳಿಕೆ ನೀಡಿದ್ದಾರೆ.

Kamal Haasan
ತಿರುಚಿಯ ರ್ಯಾಲಿ ಸಂದರ್ಭದಲ್ಲಿ ಕಮಲ್​ ಹಾಸನ್​ ಮೇಲೆ ಕಲ್ಲು ತೂರಾಟ

ಅಷ್ಟೇ ಅಲ್ಲದೆ, ಪ್ರತಿ ಧರ್ಮವೂ ಭಯೋತ್ಪಾದಕರನ್ನು ಹೊಂದಿದ್ದು, ನಾವು ಮಾತ್ರ ಪವಿತ್ರರಾಗಿದ್ದೇವೆ ಎಂದು ಹೇಳಲಾರೆವು. ಎಲ್ಲಾ ಧರ್ಮಗಳು ಉಗ್ರಗಾಮಿಗಳನ್ನು ಹೊಂದಿದೆ ಎಂಬುದನ್ನು ಇತಿಹಾಸವೇ ತೋರಿಸುತ್ತದೆ ಎಂದು ಕಮಲ್​ ಹಾಸನ್​ ಅಭಿಪ್ರಾಯಪಟ್ಟಿದ್ದಾರೆ.

Intro:Body:Conclusion:

For All Latest Updates

TAGGED:

kamal hassan
ETV Bharat Logo

Copyright © 2025 Ushodaya Enterprises Pvt. Ltd., All Rights Reserved.