ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು ಎದುರಾಳಿ ಬೌಲರ್ಗಳ ಮೇಲೆ ಗದಾ ಪ್ರಹಾರ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಬೌಲರ್ಗಳನ್ನು ಹಿಗ್ಗಾಮಗ್ಗ ದಂಡಿಸಿರುವ ಕೊಹ್ಲಿ ಪಡೆ ಹರಿಣಗಳ ಮುಂದೆ ರನ್ನುಗಳನ್ನು ಶಿಖರವನ್ನೇ ಕಟ್ಟಿ ನಿಲ್ಲಿಸಿದೆ. ಇದೇ ಹತಾಶೆಯಲ್ಲಿ ಎದುರಾಳಿ ತಂಡದ ಆಟಗಾರರು ಮೈದಾನದಲ್ಲೇ ಕಿತ್ತಾಡಿಕೊಂಡಿದ್ದಾರೆ.
- — Liton Das (@BattingAtDubai) October 11, 2019 " class="align-text-top noRightClick twitterSection" data="
— Liton Das (@BattingAtDubai) October 11, 2019
">— Liton Das (@BattingAtDubai) October 11, 2019
ಟೀಂ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದ್ದಾಗ ಮೊದಲನೇ ಇನ್ನಿಂಗ್ಸ್ನ 123ನೇ ಓವರ್ನಲ್ಲಿ ಈ ಘಟನೆ ನಡೆದಿದೆ. ದಕ್ಷಿಣ ಆಫ್ರಿಕಾದ ಬೌಲರ್ ಕಗಿಸೋ ರಬಾಡ ಚೆಂಡನ್ನು ವಿಕೆಟ್ ಕೀಪರ್ ಡಿಕಾಕ್ ಹತ್ತಿರ ಎಸೆದಿದ್ದಾರೆ. ಈ ವೇಳೆ ಚೆಂಡು ಡಿಕಾಕ್ ತಲೆ ಮೇಲೆ ಹೋಗಿದ್ದರಿಂದ ಅದನ್ನು ಹಿಡಿದುಕೊಳ್ಳಲು ಸಾಧ್ಯವಾಗಿಲ್ಲ. ತಕ್ಷಣವೇ ಮೈದಾನದಲ್ಲಿದ್ದ ಕೊಹ್ಲಿ, ಜಡೇಜಾ ಸಿಕ್ಕ ಅವಕಾಶವನ್ನು ಸರಿಯಾಗೇ ಬಳಸಿಕೊಂಡು ಸಿಂಗಲ್ ರನ್ ಬಾಚಿದ್ದಾರೆ.
- — Mohit Das (@MohitDa29983755) October 11, 2019 " class="align-text-top noRightClick twitterSection" data="
— Mohit Das (@MohitDa29983755) October 11, 2019
">— Mohit Das (@MohitDa29983755) October 11, 2019
ಇದರಿಂದ ಕೊಪಗೊಂಡ ರಬಾಡ, ಡಿಕಾಕ್ಗೆ ಅವಾಚ್ಯವಾಗಿ ವಾಚ್ 'ದಿ... ಬಾಲ್' ಎಂದು ಬೈಯ್ದಿದ್ದಾರೆ. ಇದರಿಂದ ಪಿತ್ತ ನೆತ್ತಿಗೇರಿಸಿಕೊಂಡ ಡಿಕಾಕ್ ಕೈಸನ್ನೆ ಮೂಲಕ ಅವರಿಗೆ ತಿರುಗೇಟು ನೀಡಿದ್ರು. ಈ ವೇಳೆ ಮೈದಾನದಲ್ಲಿದ್ದ ಕ್ಯಾಪ್ಟನ್ ಡುಪ್ಲೆಸಿಸ್, ರಬಾಡ ಬಳಿ ಹೋಗಿ ಸಮಾಧಾನಪಡಿಸಿದ್ದಾರೆ.