ETV Bharat / bharat

ಲಕ್ಷಣರಹಿತ ಕೋವಿಡ್​ ಸೋಂಕು ಹರಡುವಿಕೆ; ಸಂಶೋಧನೆಗೆ ಮುಂದಾದ ಜಾನ್ ಹಾಪ್ಕಿನ್ಸ್​ ವಿವಿ - ಸೋಂಕು ಹರಡುವ ಕಾರಣಗಳು

ಅಂತಾರಾಷ್ಟ್ರೀಯ ವೈಮಾನಿಕ ಪ್ರಯಾಣ, ಜಾಗತಿಕ ಹವಾಮಾನ ಪರಿಸ್ಥಿತಿ, ಆಯಾ ರಾಷ್ಟ್ರೀಯ ಭೌಗೋಳಿಕ ಭಿನ್ನತೆ ಮತ್ತು ಕೋವಿಡ್ ಸೋಂಕಿತ ವ್ಯಕ್ತಿಗಳ ಜೀನ್​​ಗಳ ಮಾಹಿತಿ ಇರುವ ಬೃಹತ್ ಡೇಟಾಬೇಸ್ ತಯಾರಿಸಲು ವಿಜ್ಞಾನಿಗಳ ತಂಡ ಕಾರ್ಯೋನ್ಮುಖವಾಗಿದೆ. ಈ ಎಲ್ಲ ಮಾಹಿತಿಗಳನ್ನು ಆಧರಿಸಿ ಕೋವಿಡ್​ ಹರಡುವಿಕೆಯ ಕಾರಣಗಳನ್ನು ಪತ್ತೆ ಮಾಡಲು ತಂಡ ಯತ್ನಿಸಲಿದೆ.

asymptomatic spread of Covid-19
asymptomatic spread of Covid-19
author img

By

Published : Jun 15, 2020, 2:40 PM IST

ಹೈದರಾಬಾದ್: ಕೊರೊನಾ ವೈರಸ್​ ವಿರುದ್ಧ ಹೋರಾಟದಲ್ಲಿ ಜಗತ್ತಿನ ಹಲವಾರು ಸಂಶೋಧನಾ ಸಂಸ್ಥೆಗಳು ಕೈಜೋಡಿಸಿರುವ ಬೆನ್ನಲ್ಲೇ ಈಗ ಅಮೆರಿಕೆಯ ಜಾನ್ ಹಾಪ್ಕಿನ್ಸ್ ವಿವಿ, ಲಕ್ಷಣರಹಿತ ಕೋವಿಡ್​-19 ಹರಡುವಿಕೆಯ ಕುರಿತು ಸಮಗ್ರ ಸಂಶೋಧನೆ ನಡೆಸಲು ಮುಂದಾಗಿದೆ.

ವಿಶ್ವಮಾನ್ಯತೆ ಪಡೆದ ಕೋವಿಡ್​-19 ಟ್ರ್ಯಾಕಿಂಗ್ ಸಿದ್ಧಪಡಿಸಿರುವ ಹಾಪ್ಕಿನ್ಸ್​ ವಿವಿ ಪ್ರಾಧ್ಯಾಪಕ ಡಾ. ಲಾರೆನ್ ಗಾರ್ಡನರ್ ಅವರು ಸ್ಕ್ರಿಪ್ಸ್ ರಿಸರ್ಚ್ ಸಂಸ್ಥೆ ಮತ್ತು ಯುಸಿಎಲ್​ಎ ವಿಜ್ಞಾನಿಗಳೊಂದಿಗೆ ಸೇರಿ ಈ ಕುರಿತು ಅಧ್ಯಯನ ನಡೆಸಲಿದ್ದಾರೆ. ಕೋವಿಡ್​-19 ವೈರಸ್​ನ ಅತ್ಯಂತ ಶೀಘ್ರಗತಿಯ ಹರಡುವಿಕೆಯ ಕಾರಣಗಳನ್ನು ಪ್ರಮುಖವಾಗಿ ಇವರು ಅಧ್ಯಯನ ನಡೆಸಲಿದ್ದಾರೆ.

ಅಂತಾರಾಷ್ಟ್ರೀಯ ವೈಮಾನಿಕ ಪ್ರಯಾಣ, ಜಾಗತಿಕ ಹವಾಮಾನ ಪರಿಸ್ಥಿತಿ, ಆಯಾ ರಾಷ್ಟ್ರೀಯ ಭೌಗೋಳಿಕ ಭಿನ್ನತೆ ಮತ್ತು ಕೋವಿಡ್ ಸೋಂಕಿತ ವ್ಯಕ್ತಿಗಳ ಜೀನ್​​ಗಳ ಮಾಹಿತಿ ಇರುವ ಬೃಹತ್ ಡೇಟಾಬೇಸ್ ತಯಾರಿಸಲು ಈ ವಿಜ್ಞಾನಿಗಳ ತಂಡ ಕಾರ್ಯೋನ್ಮುಖವಾಗಿದೆ. ಈ ಎಲ್ಲ ಮಾಹಿತಿಗಳನ್ನು ಆಧರಿಸಿ ಕೋವಿಡ್​ ಹರಡುವಿಕೆಯ ಕಾರಣಗಳನ್ನು ಪತ್ತೆ ಮಾಡಲು ತಂಡ ಯತ್ನಿಸಲಿದೆ.

ಅಧ್ಯಯನದ ವರದಿಗಳನ್ನು ಆಧರಿಸಿ ಆನ್ಲೈನ್ ಮೂಲಕ ಮಾಹಿತಿಯನ್ನು ಹಂಚಿಕೊಂಡು, ಜಗತ್ತಿನಾದ್ಯಂತ ಜನತೆ ಹಾಗೂ ರಾಜಕೀಯ ನಾಯಕರಿಗೆ ಕೋವಿಡ್​-19 ವಿರುದ್ಧ ಹೋರಾಡಲು ಅಗತ್ಯವಾದ ಮಾರ್ಗದರ್ಶಿಗಳನ್ನು ರೂಪಿಸಲು ಪ್ಲಾಟ್​ಫಾರ್ಮ್ ರಚಿಸಲಾಗುವುದು ಎಂದು ಮೂಲಗಳು ಹೇಳಿವೆ. ಆನ್ಲೈನ್​ನಲ್ಲಿ ಹಂಚಿಕೊಳ್ಳಲಾಗುವ ಈ ಮಾಹಿತಿಗಳನ್ನಾಧರಿಸಿ ಭವಿಷ್ಯದಲ್ಲಿ ಕೋವಿಡ್​ ಮತ್ತೆ ತಮ್ಮ ರಾಷ್ಟ್ರಗಳಲ್ಲಿ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ.

"ಸಾಮಾನ್ಯ ಸಾಂಕ್ರಾಮಿಕ ರೋಗಗಳು ಹೇಗೆ ಹರಡುತ್ತವೆ ಹಾಗೂ ಭೌಗೋಳಿಕ ಸ್ಥಿತಿಗಳನ್ನಾಧರಿಸಿ ಇವುಗಳ ಹರಡುವಿಕೆ ಹೇಗೆ ಭಿನ್ನವಾಗಿರುತ್ತದೆ ಎಂಬುದರ ಕುರಿತಾದ ಸಾರ್ವಜನಿಕರ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸುವುದು ನಮ್ಮ ಸಂಶೋಧನೆಗಳ ಮುಖ್ಯ ಗುರಿಯಾಗಿದೆ. ಜೀನ್ ವ್ಯವಸ್ಥೆ, ಜನರ ಪ್ರಯಾಣ ಮಾದರಿಗಳು, ಪರಿಸರ, ಜನಸಂಖ್ಯಾ ಸಾಂದ್ರತೆ ಮುಂತಾದ ಅಂಶಗಳನ್ನು ಆಧರಿಸಿ ಕೋವಿಡ್​-19 ಯಾವ ರೀತಿ ಹರಡುತ್ತದೆ ಎಂಬ ವಿಷಯಗಳ ಕುರಿತಾಗಿ ಸಂಶೋಧನೆಗಳು ನಡೆಯಲಿವೆ." ಎಂದು ಡಾ. ಲಾರೆನ್ ಗಾರ್ಡನರ್ ಹೇಳಿದ್ದಾರೆ.

"ಕೋವಿಡ್​-19 ಹರಡುವಿಕೆ ತಡೆಗಟ್ಟುವಲ್ಲಿ ಸದ್ಯದ ಆರೋಗ್ಯ ವ್ಯವಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆಯಾ ಅಥವಾ ಇಲ್ಲ, ಹಾಗೂ ವಿಭಿನ್ನ ಸಂದರ್ಭಗಳಲ್ಲಿ ಕೋವಿಡ್​ ಹೇಗೆ ಹರಡುತ್ತದೆ ಎಂಬ ಬಗ್ಗೆ ಸಾಕಷ್ಟು ಮಾಹಿತಿ ತಿಳಿದುಬರಲಿದೆ." ಎಂದು ಯುಸಿಎಲ್​ಎ ಸಂಸ್ಥೆಯ ಪ್ರಾಧ್ಯಾಪಕ, ವಿಜ್ಞಾನಿ ಮಾರ್ಕ್ ಸುಚರ್ಡ್​ ತಿಳಿಸಿದ್ದಾರೆ.

ಕೋವಿಡ್​-19 ಸೋಂಕಿತರಿಂದ ಪಡೆಯಲಾಗುವ ಜೀನ್ಸ್​ ಮಾಹಿತಿಯನ್ನು ಈ ವಿಜ್ಞಾನಿಗಳ ತಂಡವು ಮುಕ್ತವಾಗಿ ಜಗತ್ತಿನೊಂದಿಗೆ ಹಂಚಿಕೊಳ್ಳಲಿದೆ ಎಂಬುದು ಗಮನಾರ್ಹ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.