ETV Bharat / bharat

ವಿಚಾರಣೆ ಹಾಜರಾಗದಿದ್ದರೆ ಬೇಲ್ ರದ್ದು..ಸಲ್ಮಾನ್ ಖಾನ್​​ಗೆ ಜೋಧ್​ಪುರ್ ಕೋರ್ಟ್ ವಾರ್ನಿಂಗ್

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್​​ ಖಾನ್ ಮುಂದಿನ ವಿಚಾರಣೆಗೆ ಹಾಜರಾಗದಿದ್ದಲ್ಲಿ ಬೇಲ್ ರದ್ದುಗೊಳಿಸುವುದಾಗಿ ಜೋಧ್​​ಪುರ್ ಕೋರ್ಟ್​ ವಾರ್ನಿಂಗ್ ಕೊಟ್ಟಿದೆ

ಸಲ್ಮಾನ್ ಖಾನ್​​
author img

By

Published : Jul 4, 2019, 2:01 PM IST

Updated : Jul 4, 2019, 2:16 PM IST

ಜೈಪುರ: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಗೆ ಹಾಜರಾಗದಿದ್ದರೆ ಬೇಲ್ ರದ್ದುಗೊಳಿಸುವುದಾಗಿ ಜೋಧ್​ಪುರ್ ಕೋರ್ಟ್ ಸಲ್ಮಾನ್​ ಖಾನ್​ಗೆ ಎಚ್ಚರಿಕೆ ನೀಡಿದೆ.

  • Blackbuck poaching case: The Jodhpur court says that if Salman Khan doesn't appear before the court in next hearing, his bail will be rejected. (file pic) #Rajasthan pic.twitter.com/bh3cTpDYF8

    — ANI (@ANI) July 4, 2019 " class="align-text-top noRightClick twitterSection" data=" ">

1998 ರಲ್ಲಿ 'ಹಮ್ ಸಾಥ್ ಸಾಥ್ ಹೈ' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಜೋಧ್​​ಪುರ್​​​ ಕಂಕಣಿ ಗ್ರಾಮದ ಬಳಿ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಸಿಜೆಎಂ ನ್ಯಾಯಾಲಯ ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ಪರಿಗಣಿಸಿ 5 ವರ್ಷ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿತ್ತು. ಆದರೆ 2018 ರಲ್ಲಿ ಚೀಫ್​ ಜುಡಿಶಿಯಲ್​ ಮ್ಯಾಜಿಸ್ಟ್ರೇಟ್ ಕೋರ್ಟ್​ ಸಲ್ಮಾನ್ ಖಾನ್ ಹಾಗೂ ಕೃಷ್ಣಮೃಗ ಬೇಟೆ ವೇಳೆ ಅವರೊಂದಿಗೆ ಇದ್ದ ಟಬು, ಸೈಫ್ ಅಲಿ ಖಾನ್, ನೀಲಂ, ಸೋನಾಲಿ ಬೇಂದ್ರೆ, ದುಷ್ಯಂತ್ ಸಿಂಹ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳು ಇಲ್ಲವೆಂದು ಐವರನ್ನೂ ದೋಷಮುಕ್ತಗೊಳಿಸಿ ಆದೇಶ ಹೊರಡಿಸಿತ್ತು.

ಈ ತೀರ್ಪಿನ ವಿರುದ್ಧ ರಾಜಸ್ಥಾನ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ನಂತರ ಮತ್ತೆ ವಿಚಾರಣೆ ನಡೆಸಿದ ಜೋಧ್​​ಪುರ್ ಕೋರ್ಟ್ 2019 ಮೇ ತಿಂಗಳಲ್ಲಿ ಈ ಐವರಿಗೂ ಹೊಸದಾಗಿ ನೋಟೀಸ್ ನೀಡಿತ್ತು. ಆದರೆ ಸಲ್ಮಾನ್ ಖಾನ್ ಪ್ರಕರಣದ ವಿಚಾರಣೆಗೆ ಹಾಜರಾಗದ ಕಾರಣ ಮುಂದಿನ ವಿಚಾರಣೆಗೆ ಕೋರ್ಟ್​ಗೆ ಹಾಜರಾಗದಿದ್ದಲ್ಲಿ ಬೇಲ್ ರದ್ದುಗೊಳಿಸುವುದಾಗಿ ವಾರ್ನಿಂಗ್ ಮಾಡಿದೆ.

ಕಳೆದ ವರ್ಷ ಟ್ರೈಲ್​ ಕೋರ್ಟ್​​ ಸಲ್ಮಾನ್​ ಖಾನ್​​ ದೋಷಿ ಎಂದು ತೀರ್ಪು ನೀಡಿತ್ತು. ಈ ಬಗ್ಗೆ ಮಾತನಾಡಿದ್ದ ಸಲ್ಮಾನ್​ ಖಾನ್​ ಪರ ವಕೀಲ ಆನಂದ್​ ದೇಸಾಯಿ, ನಾವು ಘನ ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ಆದರೆ ಕೋರ್ಟ್ ತೀರ್ಪು ನಮ್ಮನ್ನ ಚಕಿತಗೊಳಿಸಿದೆ. ಎರಡು ಕೇಸ್​​ಗಳಲ್ಲಿ ರಾಜಸ್ಥಾನ ಹೈಕೋರ್ಟ್​ ಎಲ್ಲ ಸಾಕ್ಷಿಗಳನ್ನ ಕೂಲಂಕಷವಾಗಿ ವಿಚಾರಣೆ ಮಾಡಿ ನಿರ್ದೋಷಿ ಎಂದು ತೀರ್ಪು ನೀಡಿತ್ತು. ಹೀಗಾಗಿ ಆ ತೀರ್ಪನ್ನು ನಾವು ಕೂಲಂಕಷವಾಗಿ ನೋಡ್ತೇವಿ ಎಂದು ಹೇಳಿದ್ದರು. ಆ ಬಳಿಕ ಸಲ್ಮಾನ್​ಖಾನ್ ​ಬೇಲ್​ ಸಹ ಪಡೆದಿದ್ದರು.

Intro:Body:

salman khan

Conclusion:
Last Updated : Jul 4, 2019, 2:16 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.