ETV Bharat / bharat

ಉಗ್ರರಿಗಾಗಿ ಡ್ರೋನ್​ ತಂದಿಳಿಸಿದ್ದ ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆದ ಭದ್ರತಾ ಪಡೆ - ಅಂಕೂರ್​ ಗಡಿ ಪ್ರದೇಶ

ಉಗ್ರರ ಬಳಕೆಗಾಗಿ ಡ್ರೋನ್ ಮೂಲಕ ಕಳುಹಿಸಲಾಗಿದ್ದ ಎಕೆ -47 ರೈಫಲ್‌ಗಳು, ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಜಮ್ಮುವಿನ ಅಂಕೂರ್​ ಗಡಿ ಪ್ರದೇಶದಲ್ಲಿ ಭದ್ರತಾ ಪಡೆ ವಶಪಡಿಸಿಕೊಂಡಿದೆ..

drone dropped arms, ammunitio
ಡ್ರೋನ್​ ತಂದಿಳಿಸಿದ ಶಸ್ತ್ರಾಸ್ತ್ರ
author img

By

Published : Sep 22, 2020, 4:49 PM IST

ಜಮ್ಮು-ಕಾಶ್ಮೀರ : ಡ್ರೋನ್ ಮೂಲಕ ಕಳುಹಿಸಲಾಗಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಜಮ್ಮು ಮತ್ತು ಕಾಶ್ಮೀರದ ಅಂಕೂರ್​ ಗಡಿ ಪ್ರದೇಶದಲ್ಲಿ ಭದ್ರತಾ ಪಡೆ ವಶಪಡಿಸಿಕೊಂಡಿದೆ.

ಎರಡು ಎಕೆ -47 ರೈಫಲ್‌ಗಳು, ಮೂರು ಸ್ಫೋಟಕ ವಸ್ತುಗಳು (AK magazines) ಪಿಸ್ತೂಲ್ ಸೇರಿ ಇತರ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸರು ಹಾಗೂ ಸೇನಾ ಪಡೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಇವುಗಳನ್ನು ಉಗ್ರರ ಬಳಕೆಗಾಗಿ ಡ್ರೋನ್ ಮೂಲಕ ಅಂಕೂರ್​ ಗಡಿ ಪ್ರದೇಶದೆಡೆ ಕಳುಹಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಸೆ.19ರಂದು ರಾಜೌರಿ ಜಿಲ್ಲೆಯಲ್ಲಿ ಲಷ್ಕರ್​- ಇ-ತೋಯ್ಬಾ (ಎಲ್‌ಇಟಿ) ಸಂಘಟನೆಯ ಮೂವರು ಉಗ್ರರನ್ನು ಬಂಧಿಸಿದ ಭದ್ರತಾ ಪಡೆ, ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ಕಳುಹಿಸಿದ್ದ ಎರಡು ಎಕೆ -56 ರೈಫಲ್‌ಗಳು, ಎರಡು ಚೀನಿ ಪಿಸ್ತೂಲ್‌ಗಳು, ನಾಲ್ಕು ಗ್ರೆನೇಡ್‌ಗಳು ಸೇರಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಂಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.