ರಾಂಚಿ: ಜಾರ್ಖಂಡ್ ರಾಜಕೀಯ ಜೀವನದಲ್ಲಿ ಸೋಲಿಲ್ಲದ ಸರದಾರನೆಂಬ ದಾಖಲೆ ನಿರ್ಮಾಣ ಮಾಡಿದ್ದ ಮುಖ್ಯಮಂತ್ರಿ ರಘುಬರ್ ದಾಸ್ಗೆ ಈ ಚುನಾವಣೆಯಲ್ಲಿ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ.
ಪ್ರಥಮ ಬುಡಕಟ್ಟೇತರ ಮುಖ್ಯಮಂತ್ರಿ ಆಗಿ 2014ರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ರಘುಬರ್ ದಾಸ್ 2014ರಲ್ಲಿ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದರು. ಜೆಮ್ಶೆಡ್ಪುರ ಪೂರ್ವ ಕ್ಷೇತ್ರದಿಂದ 1995ರಿಂದಲೂ ಚುನಾವಣೆ ಎದುರಿಸುತ್ತಿದ್ದ ರಘುಬರ್ ದಾಸ್ ಈ ಹಿಂದಿನ ಯಾವುದೇ ಚುನಾವಣೆಯಲ್ಲೂ ಸೋಲು ಕಂಡಿದ್ದಿಲ್ಲ. ಆದರೆ, ಇದೇ ಮೊದಲ ಸಲ ಅವರು ಸೋಲಿನ ಮುಖಭಂಗ ಅನುಭವಿಸಿದ್ದಾರೆ. ಇವರ ಜತೆಗೆ ಆರು ಸಚಿವರು ಸೋಲಿನ ಮುಖಭಂಗ ಅನುಭವಿಸಿದ್ದಾರೆ.
-
#JharkhandAssemblyElections2019: Chief Minister Raghubar Das tenders his resignation from the post to Governor Draupadi Murmu, at Raj Bhavan in Ranchi. pic.twitter.com/Dk1PChjZ39
— ANI (@ANI) December 23, 2019 " class="align-text-top noRightClick twitterSection" data="
">#JharkhandAssemblyElections2019: Chief Minister Raghubar Das tenders his resignation from the post to Governor Draupadi Murmu, at Raj Bhavan in Ranchi. pic.twitter.com/Dk1PChjZ39
— ANI (@ANI) December 23, 2019#JharkhandAssemblyElections2019: Chief Minister Raghubar Das tenders his resignation from the post to Governor Draupadi Murmu, at Raj Bhavan in Ranchi. pic.twitter.com/Dk1PChjZ39
— ANI (@ANI) December 23, 2019
ಸೋಲು ಕಾಣುತ್ತಿದ್ದಂತೆ ರಾಜಭವನಕ್ಕೆ ಆಗಮಿಸಿದ ರಘುಬರ್ ದಾಸ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಅದನ್ನ ರಾಜ್ಯಪಾಲೆ ದ್ರೌಪದಿ ಮುರ್ಮು ಅವರಿಗೆ ನೀಡಿದ್ದಾರೆ.
81 ಕ್ಷೇತ್ರಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 25 ಕ್ಷೇತ್ರ,ಜೆಎಂಎಂ ಮೈತ್ರಿ 47 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಎಜೆಎಸ್ಯು 2 ಕ್ಷೇತ್ರ ಹಾಗೂ ಇತರ 7 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿವೆ. ಈ ಸೋಲಿನೊಂದಿಗೆ ಬಿಜೆಪಿ 5ನೇ ರಾಜ್ಯ ಕಳೆದುಕೊಂಡಿದ್ದು, ಈಗಾಗಲೇ ರಾಜಸ್ಥಾನದಲ್ಲಿ ವಸುಂಧರಾ ರಾಜೆ, ಮಧ್ಯ ಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್, ಛತ್ತೀಸ್‌ಗಢದಲ್ಲಿ ರಮಣ್ ಸಿಂಗ್, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಇದೀಗ ಜಾರ್ಖಂಡ್‌ನಲ್ಲಿ ರಘುಬರ್ ದಾಸ್ ಸರ್ಕಾರ ಪತನಗೊಂಡಿವೆ. ಈ ಮೂಲಕ ಬಹುತೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಒಂದೊಂದೆ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಹಿನ್ನಡೆ ಅನುಭವಿಸಿದೆ.
ಈ ಮೂಲಕ ಮೋದಿ - ಶಾ ಅವರು 18ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ತಂದು ಏಕಚಕ್ರಾಧಿಪತ್ಯ ಸ್ಥಾಪಿಸುವ ಕನಸಿಗೆ ದೊಡ್ಡ ಪೆಟ್ಟು ನೀಡಿದೆ. ಬಹುತೇಕ ದೊಡ್ಡ ರಾಜ್ಯಗಳು ಕೇಸರಿ ತೆಕ್ಕೆಯಿಂದ ದೂರ ಸರಿದಿರುವುದು, ಪ್ರಧಾನಿ ಜನಪ್ರೀಯತೆ ಕಡಿಮೆ ಆಗಿದೆ ಎಂಬುದನ್ನು ಸಾರುವಂತಿವೆ. ಅಷ್ಟೇ ಅಲ್ಲ ಅಧಿಕಾರ ಕೇಂದ್ರೀಕರಣ, ಸ್ಥಳೀಯ ನಾಯಕರ ನಿರ್ಲಕ್ಷ್ಯ ಹಾಗೂ ಹಿರಿಯ ನಾಯಕರ ಕಡೆಗಣನೆಯೇ ಈ ಫಲಿತಾಂಶಕ್ಕೆ ಕಾರಣ ಎಂದೇ ಬಣ್ಣಿಸಲಾಗುತ್ತಿದೆ.
ಇದು ಇದೇ ರೀತಿ ಮುಂದುವರೆದರೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಧೂಳಿ ಪಟವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಕರ್ನಾಟಕ, ಉತ್ತರಪ್ರದೇಶ, ಗುಜರಾತ್ ರಾಜ್ಯಗಳಷ್ಟೇ ಬಿಜೆಪಿ ಕೈಯಲ್ಲಿರುವ ದೊಡ್ಡ ರಾಜ್ಯಗಳಾಗಿವೆ. ಈ ಚುನಾವಣೆಗಳಿಂದ ಮೋದಿ- ಶಾ ಜೋಡಿ ಎಚ್ಚೆತ್ತುಕೊಂಡು, ಅಧಿಕಾರ ವಿಕೇಂದ್ರೀಕರಣ, ಸ್ಥಳೀಯ ನಾಯಕರಿಗೆ ಅಧಿಕಾರ ಹಾಗೂ ಆದ್ಯತೆ ನೀಡಬೇಕಾದ ಅನಿವಾರ್ಯತೆ ಇದೆ.
ಎಲ್ಲರನ್ನೂ ಎಲ್ಲ ಸಮಯದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕಾದ ಅಗತ್ಯತೆ ಇದೆ. ಕೇಂದ್ರ ಸರ್ಕಾರಕ್ಕೆ ಈಗ ಯಾವುದೇ ಅಪಾಯ ಇಲ್ಲ. ಅವರಿಗೆ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವೇನೋ ಇದೆ. ಆದರೆ ಮುಂಬರುವ ಚುನಾವಣೆಗಳಲ್ಲಿ ಪಕ್ಷ ಮುಗ್ಗರಿಸದಂತೆ ನೋಡಿಕೊಳ್ಳಬೇಕಾದರೆ ಮೋದಿ- ಶಾ ಜೋಡಿ ಕೆಲ ಹೊಂದಾಣಿಕೆ ಹಾಗೂ ಸಂಯಮ ಕಾಪಾಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡಿದ್ದಾರೆ.