ನವದೆಹಲಿ: ತುರ್ತು ಬಂಡವಾಳ ದೊರೆಯದ ಪರಿಣಾಮ ಜೆಟ್ ಏರ್ವೇಸ್ನ ಎಲ್ಲ ವಿಮಾನಗಳ ಹಾರಾಟ ಇಂದು ರಾತ್ರಿಯಿಂದಲೇ ಸ್ಥಗಿತಗೊಳಿಸಲು ಸಂಸ್ಥೆ ತೀರ್ಮಾನಿಸಿದೆ.
ಜೆಟ್ ಏರ್ವೇಸ್ ಸಂಸ್ಥೆ ₹400 ಕೋಟಿ ತುರ್ತು ಬಂಡವಾಳಕ್ಕಾಗಿ ಸ್ಟೇಟ್ ಬ್ಯಾಂಕ್ ಮೊರೆ ಹೋಗಿತ್ತು. ಆದರೆ ಮಾತುಕತೆ ವಿಫಲವಾದ ಕಾರಣ ಎಲ್ಲ ವಿಮಾನಗಳ ಹಾರಾಟವನ್ನು ಇಂದು ರಾತ್ರಿಯಿಂದಲೇ ನಿಲ್ಲಿಸಲು ಮುಂದಾಗಿದೆ.
₹8,000 ಕೋಟಿಗೂ ಅಧಿಕ ಸಾಲದ ಹೊರೆಯಲ್ಲಿರುವ ಜೆಟ್ ಏರ್ವೇಸ್ ಸಂಸ್ಥೆ ಸಿಬ್ಬಂದಿಗೂ ತಿಂಗಳ ಸಂಬಳ ನೀಡಲು ಪರದಾಡುತ್ತಿದೆ. ಇದೀಗ ತುರ್ತು ಬಂಡವಾಳ ದೊರೆಯದಿರುವುದು ಸಂಸ್ಥೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.