ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಫೈರಿಂಗ್ ನಡಸಿದ್ದ ಯುವಕ ರಾಮಭಕ್ತ್ ಗೋಪಾಲ್ ಜೊತೆಯಲ್ಲಿ ಬಿಜೆಪಿ ನಾಯಕ ಅನುರಾಗ್ ಠಾಕೂರ್, ಕಪಿಲ್ ಮಿಶ್ರಾ ಮತ್ತು ಪರ್ವೇಶ್ ವರ್ಮಾ ವಿರುದ್ಧವೂ ಎಫ್ಐಆರ್ ದಾಖಲಿಸುವಂತೆ ಅಲುಮ್ನಿ ಅಸೋಸಿಯೇಶನ್ ಆಫ್ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಪೊಲೀಸರಿಗೆ ಪತ್ರ ಬರೆದಿದೆ.
-
#PressRelease 4PM- JAN 30 2020
— Jamia Coordination Committee (@Jamia_JCC) January 30, 2020 " class="align-text-top noRightClick twitterSection" data="
Statement on Sangh Attempt Against Protestors. @Jamia_JCC@ndtv @ANI @JNUSUofficial @PTI_News @ThePeopleOfIN @RanaAyyub @Shaheenbaghoff1 pic.twitter.com/4gjry4r3lQ
">#PressRelease 4PM- JAN 30 2020
— Jamia Coordination Committee (@Jamia_JCC) January 30, 2020
Statement on Sangh Attempt Against Protestors. @Jamia_JCC@ndtv @ANI @JNUSUofficial @PTI_News @ThePeopleOfIN @RanaAyyub @Shaheenbaghoff1 pic.twitter.com/4gjry4r3lQ#PressRelease 4PM- JAN 30 2020
— Jamia Coordination Committee (@Jamia_JCC) January 30, 2020
Statement on Sangh Attempt Against Protestors. @Jamia_JCC@ndtv @ANI @JNUSUofficial @PTI_News @ThePeopleOfIN @RanaAyyub @Shaheenbaghoff1 pic.twitter.com/4gjry4r3lQ
ಬಿಜೆಪಿ ನಾಯಕ ಅನುರಾಗ್ ಠಾಕೂರ್ ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ ದೇಶದ್ರೋಹಿಗಳನ್ನು ಶೂಟ್ ಮಾಡಿ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಮತ್ತೊಬ್ಬ ಬಿಜೆಪಿ ಸಂಸದ ಪರ್ವೇಶ್ ವರ್ಮಾ, ಶಹೀನ್ ಬಾಗ್‌ನಲ್ಲಿನ ಪ್ರತಿಭಟನಾಕಾರರು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಹತ್ಯೆ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಹೀಗಾಗಿ ಗುಂಡು ಹಾರಿಸಿದ ರಾಮಭಕ್ತ್ ಗೋಪಾಲ್ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿ ಇಂತಹ ಘಟನೆಗೆ ಕಾರಣರಾಗಿರುವ ಬಿಜೆಪಿ ನಾಯಕರ ವಿರುದ್ಧವೂ ಎಫ್ಐಆರ್ ದಾಖಲಿಸುವಂತೆ ಅಲುಮ್ನಿ ಅಸೋಸಿಯೇಶನ್ ಆಫ್ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಒತ್ತಾಯಿಸಿದೆ.
ಸಾಮಾಜಿಕ ಜಾಲತಾಣದಲ್ಲೂ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು #ArrestAnuragThakur ಎಂಬ ಹ್ಯಾಶ್ ಟ್ಯಾಗ್ ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗುತ್ತಿದೆ. ಈಗಾಗಲೆ ಬಿಜೆಪಿ ನಾಯಕರ ಪ್ರಚೋದನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಅನುರಾಗ್ ಠಾಕೂರ್ಗೆ 3 ದಿನ ಮತ್ತು ಪರ್ವೇಶ್ ವರ್ಮಾ ಅವರಿಗೆ 4 ದಿನ ದೆಹಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದಂತೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ.
ಜಾಮಿಯಾ ಶೂಟರ್ ರಾಮಭಕ್ತ್ ಗೋಪಾಲ್ ವಿರುದ್ಧ ಕೊಲೆಯತ್ನ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ. ಗುಂಡೇಟಿನಿಂದ ಗಾಯಗೊಂಡಿರುವ ವಿದ್ಯಾರ್ಥಿ ಶಾದಾಬ್ ಫಾರೂಕ್ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.