ETV Bharat / bharat

ರಾಜೀನಾಮೆ ನೀಡಲಿದ್ದಾರಂತೆ ಜಪಾನ್​ ಪ್ರಧಾನಿ... ಕಾರಣ!?

ತಮ್ಮ ಅನಾರೋಗ್ಯದಿಂದಾಗಿ ಸರ್ಕಾರದ ಆಡಳಿತದ ಮೇಲೆ ಪರಿಣಾಮ ಉಂಟಾಗಲಿದೆ ಎಂಬ ಉದ್ದೇಶದಿಂದ ಜಪಾನ್​ ಪ್ರಧಾನಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

author img

By

Published : Aug 28, 2020, 11:42 AM IST

Updated : Aug 28, 2020, 12:06 PM IST

Japan PM to resign amid health concerns: Reports
ಅನಾರೋಗ್ಯ ಕಾರಣದಿಂದ ಜಪಾನ್ ಪ್ರಧಾನಿ ಶಿಂಜೋ ಅಬೆ ರಾಜೀನಾಮೆ

ಜಪಾನ್​​​: ಅನಾರೋಗ್ಯದಿಂದಾಗಿ ಬಳಲುತ್ತಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಎರಡು ವಾರದ ಅಂತರದಲ್ಲಿ ಅವರು ಎರಡು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದು, ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಬೆ ಜಪಾನ್​​ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿ ಪ್ರಧಾನಿ ಎನಿಸಿಕೊಂಡಿದ್ದು, ಪ್ರಧಾನಿ ಕಚೇರಿಯಲ್ಲಿ ಅತೀ ಹೆಚ್ಚು ದಿನ ಕಳೆದ ಪ್ರಧಾನಿ ಎನಿಸಿದ್ದಾರೆ.

2ನೇ ಬಾರಿಗೆ ಜಪಾನ್​​​ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಒಟ್ಟು 2,799 ದಿನಗಳನ್ನು ತಮ್ಮ ಕಚೇರಿಯಲ್ಲಿ ಕಳೆದಿದ್ದಾರೆ. ಇವರ ದೊಡ್ಡಪ್ಪ ಐಸಾಕು ಸಾಟೊ 1964ರಿಂದ 1972ರವರೆಗೆ 2,798 ದಿನಗಳನ್ನು ಕಚೇರಿಯಲ್ಲಿ ಕಳೆದಿದ್ದ ಹಿಂದಿನ ದಾಖಲೆಯನ್ನು ಅಬೆ ಮೀರಿಸಿದ್ದಾರೆ.

66 ವರ್ಷದ ಶಿಂಜೋ ಅಬೆ ತಮ್ಮ ಅನಾರೋಗ್ಯದಿಂದಾಗಿ ಸರ್ಕಾರದ ಆಡಳಿತದ ಮೇಲೆ ಪರಿಣಾಮ ಉಂಟಾಗಲಿದೆ ಎಂಬ ಉದ್ದೇಶದಿಂದ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Last Updated : Aug 28, 2020, 12:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.