ETV Bharat / bharat

ವಿಶೇಷ ಅಂಕಣ: ಜಮ್ಮು ಮತ್ತು ಕಾಶ್ಮೀರ-ಹೊಸ ಪೌರತ್ವ ಕಾಯ್ದೆ, ಮತ್ತದರ ಸೂಚ್ಯಾರ್ಥಗಳು - ಹೊಸ ಪೌರತ್ವ ಕಾಯಿದೆ

ಇಡೀ ದೇಶ ಕೋವಿಡ್-‌19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವಾಗ ನವದೆಹಲಿಯಲ್ಲಿರುವ ಬಿಜೆಪಿ ನೇತೃತ್ವದ ಸರಕಾರವು ಜಮ್ಮು ಮತ್ತು ಕಾಶ್ಮೀರ ಪುನರ್‌ ಸಂಘಟನೆ (ರಾಜ್ಯ ಕಾಯಿದೆಗಳ ಅಳವಡಿಕೆ) ಆದೇಶ, 2020ರ ಮೂಲಕ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಮೂಲ ನಿವಾಸಿಗಳಿಗೆ ಸಂಬಂಧಿಸಿದಂತೆ ಹೊಸ ವ್ಯಾಖ್ಯೆಯೊಂದನ್ನು ಪರಿಚಯಿಸುವಲ್ಲಿ ತೊಡಗಿಕೊಂಡಿತ್ತು. ಈ ಹೊಸ ವ್ಯಾಖ್ಯಾನಕ್ಕೆ ಜಮ್ಮು ಮತ್ತು ಕಾಶ್ಮೀರದ ಸಮಗ್ರ ರಾಜಕೀಯ ಸಂಘಟನೆಗಳು ಏಕರೂಪವಾಗಿ ವಿರೋಧ ವ್ಯಕ್ತಪಡಿಸುವ ಮೂಲಕ ಕೇಂದ್ರ ಸರಕಾರವು ಅದನ್ನು ಹಿಂಪಡೆದು, ತನ್ನದೇ ಹಿಂದಿನ ವ್ಯಾಖ್ಯೆಯನ್ನು ತಿರುಚಿ ಹೊಸ ಅಧಿಸೂಚನೆಯನ್ನು ಹೊರಡಿಸಬೇಕಾದ ಒತ್ತಡವನ್ನು ಸೃಷ್ಟಿಸಿದವು. ಕೇಂದ್ರಾಡಳಿತ ಪ್ರದೇಶದ ರಾಜಕಾರಣಿಗಳ ಬೇಗುದಿ ಈಗ ಸ್ವಲ್ಪಮಟ್ಟಿಗೆ ಶಮನವಾಗಿದೆಯಾದರೂ ಅವರ ಧಾವಂತಗಳು ಮಾತ್ರ ಇನ್ನೂ ಹಾಗೇ ಉಳಿದಿವೆ.

New Citizenship Acts and Other Implications
ಜಮ್ಮು ಮತ್ತು ಕಾಶ್ಮೀರ: ಹೊಸ ಪೌರತ್ವ ಕಾಯಿದೆಗಳು ಮತ್ತದರ ಸೂಚ್ಯಾರ್ಥಗಳು
author img

By

Published : Apr 12, 2020, 11:17 PM IST

Updated : Apr 13, 2020, 11:43 AM IST

ಆ ವಿಷಯ ಚರ್ಚಿಸುವುದಕ್ಕೂ ಮುನ್ನ, ಜಮ್ಮು ಮತ್ತು ಕಾಶ್ಮೀರದ ಮೂಲ ನಿವಾಸಿಗಳ ವಿಷಯವನ್ನು ಯಥಾವತ್ತಾಗಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತೇನೆ. ೩೭೦ನೇ ವಿಧಿ ಮೂಲಕ ಸಂವಿಧಾನವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಮಾನ್ಯತೆಯನ್ನು ಅಗಸ್ಟ್‌ ೫, ೨೦೧೯ರಂದು ರದ್ದು ಮಾಡಲು ನಿರ್ಧರಿಸಿದ ಕೇಂದ್ರ ಸರಕಾರ ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ (ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್) ವಿಭಜಿಸುವ ತನಕ, ಜಮ್ಮು ಕಾಶ್ಮೀರದ ಮೂಲ ನಿವಾಸಿಗಳು ಯಾರು ಮತ್ತು ಯಾರು ಅಲ್ಲ ಎಂಬುದನ್ನು ನಿರ್ಧರಿಸುವ ಸಾಂವಿಧಾನಿಕ ಅಧಿಕಾರ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗಿತ್ತು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಮೂಲನಿವಾಸಿಗಳೆಂದು ಘೋಷಿತರಾದವರು ಮಾತ್ರ ರಾಜ್ಯ ಸರಕಾರದ ಕೆಲಸಗಳಿಗೆ (ಕೆಲವು ಕೇಂದ್ರ ಲೋಕಸೇವಾ ಸೇವೆಗಳ ವಿನಾಯಿತಿಗೆ ಒಳಪಟ್ಟು) ಅರ್ಜಿ ಸಲ್ಲಿಸಬಹುದಿತ್ತು ಅಥವಾ ಅಲ್ಲಿ ಸ್ಥಿರಾಸ್ತಿ ಹೊಂದಬಹುದಿತ್ತು.

ವಾಸ್ತವವಾಗಿ ಹೇಳುವುದಾದರೆ, ಜಮ್ಮು ಮತ್ತು ಕಾಶ್ಮೀರದ ಮೂಲನಿವಾಸಿಗಳ ವಿಷಯ ಭಾರತೀಯ ಸಂವಿಧಾನದ ೩೭೦ನೇ ವಿಧಿಗಿಂತ ಮುಂಚಿನದು. ರಾಜ್ಯದ ಆಗಿನ ಹಾಗೂ ಕೊನೆಯ ಅರಸ ಮಹಾರಾಜ ಹರಿಸಿಂಗ್‌ ಆಡಳಿತದಲ್ಲಿ ೧೯೨೭ ಮತ್ತು ೧೯೩೨ರಂದು ಪೌರತ್ವ ಮತ್ತು ಅದಕ್ಕೆ ಸಂಬಂಧಿಸಿದಂತೆ ನಾಗರಿಕರಿಗೆ ಇರುವ ಸೌಲಭ್ಯಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಸ್ವಾತಂತ್ರಾನಂತರ, ಇವೇ ಕಾನೂನುಗಳನ್ನು ಭಾರತೀಯ ಸಂವಿಧಾನದ ೩೭೦ ಮತ್ತು ೩೫(ಎ) ವಿಧಿಯಡಿ ಸೂಕ್ತ ರೀತಿಯಲ್ಲಿ ಅಳವಡಿಸಿಕೊಳ್ಳಲಾಗಿತ್ತು.

ಸರಕಾರದ ಮೊದಲಿನ ಆದೇಶದಲ್ಲಿ, ಪತ್ರಾಂಕಿತವಲ್ಲದ ಹುದ್ದೆಗಳನ್ನು ಮಾತ್ರ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೆ ಮೀಸಲಿಡಲಾಗಿತ್ತು. ಇದು ಕಣಿವೆ ಮೂಲದ ಪ್ರಮುಖ ರಾಜಕೀಯ ಪಕ್ಷಗಳಾದ ನ್ಯಾಶನಲ್‌ ಕಾನ್ಫರೆನ್ಸ್‌, ದಿ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿಗಳಲ್ಲದೇ ಕೇಂದ್ರ ಸರಕಾರದ ಬೆಂಬಲವನ್ನು ಹೊಂದಿದೆ ಎಂದು ನಂಬಲಾದ ಹೊಸ ರಾಜಕೀಯ ಪಕ್ಷ ಅಪ್ನಿ ಪಾರ್ಟಿ ಸಹಿತ ಎಲ್ಲಾ ಪಕ್ಷಗಳ ನಾಯಕರೆಲ್ಲರ ಪಕ್ಷಾತೀತ ವಿರೋಧಕ್ಕೆ ಕಾರಣವಾಯಿತು. ಕಣಿವೆ ರಾಜ್ಯದಲ್ಲಿನ ಅಶಾಂತಿಗೆ ಪ್ರತಿಕ್ರಿಯಿಸಿರುವ ನವದೆಹಲಿಯು, ಸದರಿ ಕಾಯಿದೆಗಳಿಗೆ ಈಗ ತಿದ್ದುಪಡಿ ತಂದಿದೆ. ಕೇವಲ ಜಮ್ಮು ಮತ್ತು ಕಾಶ್ಮೀರದ ಮೂಲನಿವಾಸಿಗಳು ಮಾತ್ರ ಕೇಂದ್ರಾಡಳಿತ ಪ್ರದೇಶದಲ್ಲಿ ಕೆಲಸಗಳಿಗೆ ಅರ್ಜಿ ಹಾಕಬಹುದು ಎಂದು ತಿದ್ದುಪಡಿಯ ಅಂತಿಮ ರೂಪದಲ್ಲಿ ಹೇಳಲಾಗಿದೆ. ಅಲ್ಲದೇ, ನೂತನ ಕೇಂದ್ರಾಡಳಿತ ಪ್ರದೇಶದ ಹೊರಗಿನವರಾಗಿದ್ದರೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ೧೫ ವರ್ಷಗಳಿಂದ ಯಾರೆಲ್ಲ ವಾಸವಾಗಿದ್ದಾರೋ ಅವರನ್ನೂ ಮೂಲ ನಿವಾಸಿಗಳೆಂದು ಪರಿಗಣಿಸಲಾಗುವುದು ಹಾಗೂ ಅವರೂ ಈ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆಂದು ಕಾಯಿದೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ತಿದ್ದುಪಡಿ ಕಾಯಿದೆಗಳು ಕೂಡಾ ಕಾಶ್ಮೀರ ಕಣಿವೆಯ ರಾಜಕೀಯ ವರ್ಗದ ವಿರೋಧಕ್ಕೆ ಒಳಗಾಗಿವೆ. “ನಮ್ಮ ಯುವಜನತೆಯ ಭವಿಷ್ಯದ ರಕ್ಷಣೆಯನ್ನು ಪ್ರಮುಖ ಆದ್ಯತೆಯಾಗಿಸಿಕೊಂಡಂತೆ, ಜಮ್ಮು ಮತ್ತು ಕಾಶ್ಮೀರದ ಜನಾಂಗೀಯತೆಯ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದ ಧಾವಂತವನ್ನೂ ಸಹ ಭಾರತ ಸರಕಾರ ಪರಿಹರಿಸಬೇಕಿತ್ತು. ಹೊಸ ಪೌರತ್ವದ ಹಿಂಬಾಗಿಲನ್ನು ವಿಶಾಲವಾಗಿ ತೆರೆದು, ನೆಪಮಾತ್ರದ ವಿನಾಯಿತಿಯನ್ನು ನೀಡುವುದರಿಂದ, ಜೀವ ಭೀತಿ ತಂದಿರುವ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಭಾರತ ಸರಕಾರದ ಈ ತುರ್ತು ನಡೆಯ ಮೇಲಿನ ಕಳಂಕ ತೊಡೆದುಹೋಗುವುದಿಲ್ಲ” ಎಂದು ಪಿಡಿಪಿ ಹೇಳಿದೆ.

ರಾಜ್ಯ, ಅದರ ರಾಜಕೀಯ ಹಾಗೂ ಜನಾಂಗೀಯ ರಚನೆಯ ಮೇಲೆ ಇದು ಬೀರಬಲ್ಲ ಶಾಶ್ವತ ಪರಿಣಾಮಗಳ ಜೊತೆಗೆ, ಪರಿಷ್ಕರಣೆಗೂ ಮುಂಚೆಯೇ ಸದರಿ ಕಾನೂನಿಗೆ ಸಂಬಂಧಿಸಿದಂತೆ ತೋರಬೇಕಿದ್ದ ಕೆಲ ತುರ್ತು ವಿಷಯಗಳಿದ್ದವು. ವರದಿಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಅಂದಾಜು ೮೪,೦೦೦ ಹುದ್ದೆಗಳು ಖಾಲಿ ಇವೆ. ಹೊಸ ಮೂಲನಿವಾಸಿಗಳ ವ್ಯಾಖ್ಯೆಯು ನೇಮಕಾತಿ ಪ್ರಕ್ರಿಯೆ ಮೇಲೆ ಪ್ರಮುಖ ಸೂಚ್ಯಾರ್ಥಗಳನ್ನು ಬೀರಲಿತ್ತಾದರೂ, ತಿದ್ದುಪಡಿಯ ನಂತರ ಅದರ ತೀವ್ರತೆ ಕಡಿಮೆಯಾಗಲಿದೆ.

ಕೇಂದ್ರ ಸರಕಾರವು ಮೊದಲು ಪರಿಸ್ಥಿತಿಯನ್ನು ತೀವ್ರಗೊಳಿಸಿ (ಪತ್ರಾಂಕಿತವಲ್ಲದ ಹುದ್ದೆಗಳನ್ನು ಹೊರತುಪಡಿಸಿ ಮೂಲನಿವಾಸಿಗಳಲ್ಲದವರೂ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳುವ ಮೂಲಕ), ನಂತರ ಕಾಯಿದೆಗಳಿಗೆ ತಿದ್ದುಪಡಿ ತರುವ ಮೂಲಕ ಕೆಲವು ವಿನಾಯಿತಿಗಳನ್ನು ನೀಡಿದಂತೆ ಚೆನ್ನಾಗಿ ಆಟವಾಡಿರುವ ಸಾಧ್ಯತೆಗಳೂ ಇವೆ.

ನಿರ್ಣಯ ಕೈಗೊಂಡಿರುವ ಸಮಯ

ಅಚ್ಚರಿಯ (ಅಥವಾ ಇಲ್ಲದಿರುವ) ವಿಷಯವೇನೆಂದರೆ, ಜಮ್ಮು ಮತ್ತು ಕಾಶ್ಮೀರದ ಮೂಲನಿವಾಸಿಗಳಿಗೆ ಕಾನೂನುಗಳನ್ನು ರೂಪಿಸಲು ನಿರ್ಧರಿಸಿರುವ ಸಮಯ. ಇಡೀ ದೇಶ ಕೋವಿಡ್-‌೧೯ ತಂದಿಟ್ಟಿರುವ ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಸಿಲುಕಿಕೊಂಡಿರುವಾಗ, ಹೊಸ ಕಾನೂನುಗಳ ಜಾರಿಗೆ ಇದೇ ಸೂಕ್ತ ಸಂದರ್ಭ ಎಂದು ಕೇಂದ್ರ ಗೃಹ ಸಚಿವಾಲಯ ಯೋಚಿಸಿದೆ. ಈ ಅನುಚಿತತೆಯ ಜೊತೆಗೆ, ಕೋವಿಡ್-‌೧೯ನಿಂದ ಉಂಟಾಗಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ, ಅಧಿಸೂಚನೆಯ ವಿರುದ್ಧ ಕಣಿವೆ ರಾಜ್ಯದಲ್ಲಿ ಹೆಚ್ಚೆಂದರೆ ಸಣ್ಣ ಮಟ್ಟದ ಪ್ರತಿಭಟನೆಗಳು ನಡೆಯಬಹುದೆಂಬ ತರ್ಕವೂ ಸಚಿವಾಲಯದ ಈ ಕ್ರಮದ ಹಿಂದಿರಬಹುದು.

ಈ ವಿಶ್ಲೇಷಣೆ ಕರಾರುವಾಕ್‌ ಎಂಬುದು ಸಾಬೀತಾಗಿದೆ. ಅಷ್ಟೇ ಅಲ್ಲ, ಕಠಿಣವಾಗಿರುವ ಸಾರ್ವಜನಿಕ ಭದ್ರತಾ ಕಾಯ್ದೆಯಡಿ ಬಂಧಿತರಾಗಿದ್ದ ಇಬ್ಬರು ಉನ್ನತ ರಾಜಕೀಯ ಕೈದಿಗಳಾದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್‌ ಅಬ್ದುಲ್ಲಾ ಮತ್ತು ಒಮರ್‌ ಅಬ್ದುಲ್ಲಾ ಅವರನ್ನು ಬಿಡುಗಡೆ ಮಾಡಲು ಬಳಸಿಕೊಂಡಿರುವ ಸಂದರ್ಭವೂ ಕೋವಿಡ್-‌೧೯ರ ಉದ್ಭವವಾದ ನಂತರವೇ ಎಂಬುದನ್ನು ನೆನಪಿಸಿಕೊಳ್ಳಿ. ಬೇರೆ ಸಂದರ್ಭವಾಗಿದ್ದರೆ, ಇದು ಕಾಶ್ಮೀರಿಗಳ ಪಾಲಿಗೆ ಸ್ಮರಣೀಯ ಅವಕಾಶವಾಗಿರುತ್ತಿತ್ತು. ಮುಖ್ಯವಾಗಿ ನ್ಯಾಶನಲ್‌ ಕಾನ್ಫರೆನ್ಸ್‌ ಬೆಂಬಲಿಗರು ಬೀದಿಗೆ ಬಂದು ಕೇಂದ್ರ ಸರಕಾರದ ಮೇಲಿರುವ ತಮ್ಮ ಅತೃಪ್ತಿಯನ್ನು ಹೊರಹಾಕಬಹುದಾಗಿದ್ದ ಸಂಭ್ರಮಾಚರಣೆಯ ಅವಕಾಶವೂ ಇಲ್ಲದಂತಾಗಿ ಹೋಯಿತು.

ಸೂಚ್ಯಾರ್ಥಗಳು

ವಾಸ್ತವ ಏನೆಂದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಅನುಷ್ಠಾನಗೊಳಿಸಿರುವ ಮೂಲನಿವಾಸಿಗಳ ಕಾಯಿದೆಗಳ ಸಹಿತ ಹೊಸ ಕಾಯಿದೆಗಳು, ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಆಗಸ್ಟ್‌ ೫ರ ತನ್ನ ನಿರ್ಧಾರವನ್ನು ಹಿಂದುಮುಂದಾಗಿಸಲು ಕೇಂದ್ರ ಸರಕಾರ ಸಿದ್ಧವಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸಿವೆ. ಮುಂದಿನ ಚುನಾವಣೆಗಳ ನಂತರ, ನವದೆಹಲಿಯಲ್ಲಿ ಹೊಸ ಸರಕಾರ ರಚನೆಗೊಳ್ಳುವ ಹೊತ್ತಿನಲ್ಲಿ, ಕಾನೂನಾತ್ಮಕವಾಗಿ ಹೇಳುವುದಾದರೆ, ಜಮ್ಮು ಮತ್ತು ಕಾಶ್ಮೀರವು ಒಕ್ಕೂಟದೊಂದಿಗೆ ಸಮಗ್ರವಾಗಿ ಸೇರಿಹೋಗಿರಲಿದ್ದು, ಅಲ್ಲಿಂದ ಮುಂಚಿನ ಸ್ಥಾನಕ್ಕೆ ಅದು ಹಿಂದಿರುಗುವುದು ಬಹುತೇಕ ಕಷ್ಟಕರವಾಗಿರುತ್ತದೆ.

ಅದೇನೇ ಇರಲಿ, ಜಮ್ಮು ಮತ್ತು ಕಾಶ್ಮೀರವು ತನ್ನ ರಾಜ್ಯದ ಸ್ಥಾನಮಾನವನ್ನು ಮತ್ತೆ ಪಡೆಯುವ ಸಾಧ್ಯತೆಯನ್ನು ಇದು ತಳ್ಳಿಹಾಕುವುದಿಲ್ಲ. ನವದೆಹಲಿಯ ನಾಯಕರು ಕೂಡಾ, ಜಮ್ಮು ಮತ್ತು ಕಾಶ್ಮೀರವು ಮುಂದೊಮ್ಮೆ ತನ್ನ ರಾಜ್ಯದ ಸ್ಥಾನಮಾನವನ್ನು ಮತ್ತೆ ಪಡೆಯಲಿದೆ ಎಂದು ಆಗಾಗ ಹೇಳುತ್ತಲೇ ಇದ್ದಾರೆ. ಈಗ ತಂದಿರುವ ಹೊಸ ಕಾನೂನುಗಳು ಕೇವಲ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದವುಗಳಾಗಿವೆಯೇ ಹೊರತು ಅದರ ರಾಜ್ಯದ ಸ್ಥಾನಮಾನಕ್ಕಲ್ಲ. ಹೀಗಾಗಿ, ವಿಶೇಷ ಸ್ಥಾನಮಾನದ ಕುರಿತು ಮತ್ತೆ ಪ್ರಸ್ತಾಪವೇ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ನವದೆಹಲಿ, ಜಮ್ಮು ಮತ್ತು ಕಾಶ್ಮೀರದ ಎಲ್ಲಾ ರಾಜಕೀಯ ವರ್ಗಗಳನ್ನು ರಾಜ್ಯದ ಸ್ಥಾನಮಾನದ ಸುತ್ತಲೇ ಕೇಂದ್ರೀಕರಿಸುವಂತೆ ಮಾಡಲಿದೆ. ಮತ್ತು, ನವದೆಹಲಿಗೆ ಬೇಕಾಗಿರುವುದೂ ಕೂಡಾ ಇದೇ.

ಹ್ಯಾಪಿಮನ್‌ ಜೇಕಬ್‌

ಸಹಾಯಕ ಪ್ರಾಧ್ಯಾಪಕ | ಅಂತಾರಾಷ್ಟ್ರೀಯ ರಾಜಕೀಯ, ಸಂಘಟನೆ ಮತ್ತು ನಿಶ್ಯಸ್ತ್ರೀಕರಣ ಕೇಂದ್ರ | ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ

Last Updated : Apr 13, 2020, 11:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.