ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹಿರ್ಪೋರಾ ಪ್ರದೇಶವನ್ನು ಸುತ್ತುವರೆದಿರುವ ಭದ್ರತಾ ಸಿಬ್ಬಂದಿ ಶುಕ್ರವಾರ ಶೋಧ ಕಾರ್ಯಾಚರಣೆ ಆರಂಭಿಸಿದೆ.
ಈ ಪ್ರದೇಶದಲ್ಲಿ ಶೋಧ ನಡೆಸುತ್ತಿರುವಾಗ ಅವರಿಗೆ ಉಗ್ರಗಾಮಿಗಳ ಅಡಗುತಾಣಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ ಅವರು ಬಳಸುತ್ತಿದ್ದ ವಿವಿಧ ದೈನಂದಿನ ಅಗತ್ಯ ವಸ್ತುಗಳನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದೆ.
ಮಿಲಿಟರಿ ಮೂಲಗಳ ಪ್ರಕಾರ, ಸೈನಿಕ ದಳ 62 ಆರ್ಆರ್ ಗುರುವಾರ ರಾತ್ರಿ ಹಿರ್ಪೋರಾ ಪ್ರದೇಶಗಳ ಕಾಡುಗಳಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿತ್ತು.
ಇದನ್ನು ಓದಿ:ಮೀನುಗಾರಿಕಾ ದೋಣಿಯಲ್ಲಿತ್ತು 9.7 ಕೆಜಿ ನಿಷೇಧಿತ ಚಿನ್ನ; ಐವರು ಅರೆಸ್ಟ್
ಗುರುವಾರ ಮತ್ತು ಶುಕ್ರವಾರದ ಮಧ್ಯರಾತ್ರಿ ಹಿರ್ಪೋರಾದ ಕಾಡುಗಳಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ, ಉಗ್ರರು ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.