ನವದೆಹಲಿ: ಸ್ಪೇನ್ನಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ವಿದೇಶಾಂಗ ಮಂತ್ರಿಯೊಡನೆ ಮಾತುಕತೆ ನಡೆಸಿದ್ದೇನೆ. ಕೊರೊನಾ ವಿರುದ್ಧದ ಜಾಗತಿಕ ಸಹಕಾರಕ್ಕಾಗಿ ಒಪ್ಪಿಕೊಂಡಿದ್ದೇವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಆರ್ ಜೈಶಂಕರ್ ತಿಳಿಸಿದ್ದಾರೆ.
ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ''ದೂರವಾಣಿಯಲ್ಲಿ ಸ್ಪೇನ್ ವಿದೇಶ ಮಂತ್ರಿ ಅರಂಚ ಗೊನ್ಜಾಲೆಜ್ ಅವರೊಂದಿಗೆ ಮಾತನಾಡಿದ್ದೇನೆ. ಔಷಧ ಬೇಡಿಕೆಗೆ ಭಾರತ ಸಕಾರಾತ್ಮವಾಗಿ ಸ್ಪಂದಿಸಿದೆ. ಜಾಗತಿಕವಾಗಿ ಕೊರೊನಾ ವಿರುದ್ಧ ಹೋರಾಡಲು ಸಹಕಾರ ನೀಡಲು ಒಪ್ಪಿಕೊಂಡಿದ್ದೇವೆ'' ಎಂದಿದ್ದಾರೆ.
ಸ್ಪೇನ್ ಕೊರೊನಾದಿಂದ ತತ್ತರಿಸಿದೆ. ಸುಮಾರು ಒಂದೂವರೆ ಲಕ್ಷ ಮಂದಿ ಕೊರೊನಾ ಪೀಡಿತರು ಇಲ್ಲಿದ್ದಾರೆ. ಸುಮಾರು 14 ಸಾವಿರ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.