ETV Bharat / bharat

2019ರ ಪುಲ್ವಾಮಾ ದಾಳಿಗೋಸ್ಕರ ಬಳಕೆಯಾಗಿದ್ದು_____ ಇಷ್ಟೊಂದು ಹಣ: ಎನ್​ಐಎ ಚಾರ್ಟ್​ಶೀಟ್​ನಲ್ಲಿ ಬಹಿರಂಗ!

author img

By

Published : Aug 27, 2020, 4:07 PM IST

2019ರ ಪುಲ್ವಾಮಾ ದಾಳಿ ಪ್ರಕರಣದ ಕುರಿತಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಿದೆ.ಇದೀಗ ಅದರಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ.

Pulwama Attack
Pulwama Attack

ನವದೆಹಲಿ: 2019ರ ಪುಲ್ವಾಮಾ ದಾಳಿ ಪ್ರಕರಣ ಕುರಿತಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಿದ್ದು, ದಾಳಿಯ ಹಿಂದೆ ಮೋಸ್ಟ್​ ವಾಂಟೆಂಡ್​ ಉಗ್ರ ಅಜರ್​ ಮಸೂದ್​ ಕೈವಾಡ ಇರುವುದು ಖಚಿತಪಡಿಸಿದೆ.

ಇದೀಗ ಮತ್ತೊಂದು ಮಹತ್ವದ ಮಾಹಿತಿ ಬಹಿರಂಗಗೊಂಡಿದ್ದು, ದಾಳಿಗೋಸ್ಕರ ಜೈಶ್​-ಎ-ಮೊಹಮ್ಮದ್​ ಉಗ್ರ ಸಂಘಟನೆ 1.85 ಲಕ್ಷ ರೂ ನೀಡಿ ಮಾರುತಿ ಇಕೋ ವಾಹನ ಖರೀದಿ ಮಾಡಿದ್ದು, ಅದರಲ್ಲಿ ಕೆಲವೊಂದು ಮಾರ್ಪಾಡು ಮಾಡಲು 35 ಸಾವಿರ ರೂ ಖರ್ಚು ಮಾಡಿತ್ತು ಎಂದು ತಿಳಿದು ಬಂದಿದೆ.

2019ರ ಪುಲ್ವಾಮಾ ದಾಳಿ: ಎನ್​ಐಎ ಚಾರ್ಜ್​​ಶೀಟ್​ನಲ್ಲಿ ಅಜರ್​ ಮಸೂದ್​ ಸೇರಿ 19 ಉಗ್ರರ ಹೆಸರು!

ಚಾರ್ಜ್​ಶೀಟ್​ನಲ್ಲಿ ಸಲ್ಲಿಕೆಯಾಗಿರುವ ಪ್ರಕಾರ 10 ಲಕ್ಷ ರೂ ಪಾಕ್​​ನಿಂದ ಐದು ಕಂತುಗಳಲ್ಲಿ ಜನವರಿಯಿಂದ ಫೆಬ್ರವರಿ ತಿಂಗಳಲ್ಲಿ ಉಗ್ರ ಮಸೂದ್​​ ಅಜರ್​​ ಅಲಿ ಸೋದರಳಿಯ ಉಮರ್​​ ಫಾರೂಖ್​​ ಅಕೌಂಟ್​ಗೆ ವರ್ಗಾವಣೆಗೊಂಡಿದೆ. 2.25 ಲಕ್ಷ ರೂ. ಸ್ಫೋಟಕ ವಸ್ತು ಖರೀದಿ ಮಾಡಲು ಬಳಕೆ ಮಾಡಲಾಗಿದ್ದು, 35 ಸಾವಿರ ರೂ. ವೆಚ್ಚದ 4 ಕೆಜಿ ಅಲೋಮಿನಿಯಂ ಆನ್​ಲೈನ್​ ಮೂಲಕ ಆರ್ಡರ್​ ಮಾಡಲಾಗಿದೆ ಎಂದು ಎನ್​ಐಎ ಮಾಹಿತಿ ನೀಡಿದೆ.

ಕಳೆದ ಆಗಸ್ಟ್​​​ 25ರಂದು ಜಮ್ಮು ನ್ಯಾಯಾಲಯಕ್ಕೆ ಸುಮಾರು 5 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದ್ದು, ಸಿಆರ್​​ಪಿಎಫ್​​ ಪಡೆ ಮೇಲೆ ಭಯೋತ್ಪಾದಕ ದಾಳಿ ನಡೆದು 18 ತಿಂಗಳ ಬಳಿಕ ವರದಿ ಸಲ್ಲಿಕೆಯಾಗಿದೆ. ದಾಳಿ ನಡೆಯಲು ಮುಖ್ಯವಾಗಿ ಮಸೂದ್​ ಅಜರ್​ ಪ್ರಮುಖ ರೂವಾರಿ ಎಂದು ಇದರಲ್ಲಿ ಉಲ್ಲೇಖ ಮಾಡಲಾಗಿದೆ. ಉಳಿದಂತೆ ಇವರ ಸಹೋದರ ಅಬ್ದುಲ್​ ಅಸ್ಗರ್​​​,ಅಮರ್​ ಅಲ್ವಿ ಹಾಗೂ ಸೋದರಳಿಯ ಉಮರ್​​ ಫಾರೂಖ್​​​ ಹೆಸರು ಇದೆ. 2019ರ ಫೆಬ್ರವರಿ 14ರಂದು ನಡೆದಿದ್ದ ಆತ್ಮಾಹುತಿ ಬಾಂಬ್​​ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.