ಶ್ರೀನಗರ: ಪುಲ್ವಾಮಾ ದಾಳಿಗೆ ಕಾರಣವಾದ ಜೈಷೆ ಮೊಹಮ್ಮದ್ ಸಂಘಟನೆಯ ಪ್ರಮುಖ ಉಗ್ರನೊಬ್ಬನನ್ನು ಕಾಶ್ಮೀರ ಪೊಲೀಸರು ಶ್ರೀನಗರದಲ್ಲಿ ಬಂಧಿಸಿದ್ದಾರೆ. ದೆಹಲಿಯ ವಿಶೇಷ ತಂಡವು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಉಗ್ರ ಫಯಾಸ್ ಅಹ್ಮದ್ ಲೋನ್ನನ್ನು ಬಂಧಿಸಲಾಗಿದೆ.

ಜೈಷೆ ಸಂಘಟನೆಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿದ್ದ ಹೆಸರುಗಳಲ್ಲಿ ಈತನ ಹೆಸರೂ ಒಂದು. ದೆಹಲಿ ಪೊಲೀಸರು ಈತನ ಗುರುತು ಪತ್ತೆ ಮಾಡಿದವರಿಗೆ ಎರಡು ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದರು.
ಈತನ ವಿರುದ್ಧ ಬಂಧನ ರಹಿತ ವಾರಂಟ್ ಜಾರಿಯಾಗಿತ್ತು. 2015ರಿಂದಲೂ ಈತ ತಲೆತಪ್ಪಿಸಿಕೊಂಡಿದ್ದ ಎನ್ನಲಾಗಿದೆ.