ಅಮರಾವತಿ (ಆಂಧ್ರ ಪ್ರದೇಶ): ರಾಜ್ಯದಲ್ಲಿ ಎಲ್ಲಾ ಆನ್‌ಲೈನ್ ಗೇಮಿಂಗ್, ಜೂಜು ಮತ್ತು ಬೆಟ್ಟಿಂಗ್ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ಎಲ್ಲಾ ಅಂತರ್ಜಾಲ ಸೇವಾ ಪೂರೈಕೆದಾರರಿಗೆ (ಐಎಸ್‌ಪಿ) ನಿರ್ದೇಶನ ನೀಡುವಂತೆ ಕೋರಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ.
ಜಗನ್ ಸರ್ಕಾರ ಇತ್ತೀಚೆಗೆ ಆಂಧ್ರ ಪ್ರದೇಶದ ಗೇಮಿಂಗ್ ಕಾಯ್ದೆ 1974ಕ್ಕೆ ತಿದ್ದುಪಡಿ ಮಾಡಿ ಆನ್‌ಲೈನ್ ಗೇಮಿಂಗ್, ಜೂಜು ಮತ್ತು ಬೆಟ್ಟಿಂಗ್ ಅಪರಾಧವೆಂದು ಸೇರಿಸಲು ಸೆಪ್ಟೆಂಬರ್ 25, 2020ರಂದು ಸುಗ್ರೀವಾಜ್ಞೆ ಹೊರಡಿಸಿದೆ.
ಈ ಕಾಯ್ದೆಯನ್ನು ಜಾರಿಗೆ ತರಲು ಆಂಧ್ರ ಪ್ರದೇಶ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ, ಕೇಂದ್ರ ಸರ್ಕಾರದ ಬೆಂಬಲ ಕೋರಿದ್ದಾರೆ.