ETV Bharat / bharat

ಸುರೇಶ್ ಅಂಗಡಿ ನಿಧನ: ತಡರಾತ್ರಿ ದೆಹಲಿಯ ನಿವಾಸಕ್ಕೆ ಬಂದ ಜಗದೀಶ್​ ಶೆಟ್ಟರ್ - ಸುರೇಶ್ ಅಂಗಡಿ ನಿಧನ

ಸತತ ನಾಲ್ಕು ಬಾರಿಯಿಂದ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸುರೇಶ್‌ ಅಂಗಡಿಯವರ ಜೊತೆ ನನಗೆ ಆತ್ಮೀಯ ಸ್ನೇಹವಿತ್ತು. ರಾಜಕಾರಣವನ್ನು ಹೊರತುಪಡಿಸಿದ ಅತ್ಮೀಯ ಸಂಬಂಧ ನಮ್ಮದಾಗಿತ್ತು. ಅವರ ಅಕಾಲಿಕ ಅಗಲಿಕೆ ನನಗೆ ವೈಯಕ್ತಿಯಕವಾಗಿ ಬಹಳಷ್ಟು ನೋವನ್ನು ಉಂಟುಮಾಡಿದೆ ಎಂದು ಬೃಹತ್ ಹಾಗೂ ಸಣ್ಣ ಕೈಗಾರಿಕೆಗಳ ರಾಜ್ಯ ಸಚಿವ ಜಗದೀಶ್ ಶೆಟ್ಟರ್ ಶೋಕ ವ್ಯಕ್ತಪಡಿಸಿದರು.

Jagadish Shettar
ಜಗದೀಶ್​ ಶೆಟ್ಟರ್
author img

By

Published : Sep 24, 2020, 4:31 AM IST

ನವದೆಹಲಿ: ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರದಲ್ಲಿ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ಚನ್ನಬಸಪ್ಪ ಅಂಗಡಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು ತಿಳಿಯುತ್ತಿದ್ದಂತೆ ರಾಜ್ಯ ಸಚಿವ ಜಗದೀಶ್‌ ಶೆಟ್ಟರ್‌ ಅವರು ಅಂಗಡಿ ಅವರ ದೆಹಲಿಯ ನಿವಾಸಕ್ಕೆ ತಡರಾತ್ರಿಗೆ ಆಗಮಿಸಿದರು.

ಸತತ ನಾಲ್ಕು ಬಾರಿಯಿಂದ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸುರೇಶ್‌ ಅಂಗಡಿಯವರ ಜೊತೆ ನನಗೆ ಆತ್ಮೀಯ ಸ್ನೇಹವಿತ್ತು. ರಾಜಕಾರಣವನ್ನು ಹೊರತುಪಡಿಸಿದ ಅತ್ಮೀಯ ಸಂಬಂಧ ನಮ್ಮದಾಗಿತ್ತು. ಅವರ ಅಕಾಲಿಕ ಅಗಲಿಕೆ ನನಗೆ ವೈಯಕ್ತಿಯಕವಾಗಿ ಬಹಳಷ್ಟು ನೋವನ್ನು ಉಂಟುಮಾಡಿದೆ ಎಂದು ಬೃಹತ್ ಹಾಗೂ ಸಣ್ಣ ಕೈಗಾರಿಕೆಗಳ ರಾಜ್ಯ ಸಚಿವ ಜಗದೀಶ್ ಶೆಟ್ಟರ್ ಶೋಕ ವ್ಯಕ್ತಪಡಿಸಿದರು.

ಅಭಿವೃದ್ದಿಗೆ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ಕಾರ್ಯಗಳಲ್ಲೂ ಅವರು ಸಹಕಾರ ನೀಡುತ್ತಿದ್ದರು. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯಕ್ಕೆ ಅನೇಕ ರೈಲ್ವೆ ಯೋಜನೆಗಳನ್ನು ತರುವಲ್ಲಿ ಹಾಗೂ ಬಾಕಿ ಇರುವ ಯೋಜನೆಗಳ ಅನುಷ್ಠಾನ್ಕಕೆ ವೇಗ ನೀಡಿದ್ದರು. ಸರಳ ಸಜ್ಜನ ಆತ್ಮೀಯ ಸ್ನೇಹಿತರನ್ನು ಕಳೆದುಕೊಂಡಿರುವುದು ಬಹಳ ದುಖಃಕರ ಸಂಗತಿಯಾಗಿದೆ ಎಂದು ದುಖಃ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಸುರೇಶ್ ಅಂಗಡಿ ಅವರ ಬೆಳಗಾವಿ ನಿವಾಸದ ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.