ನವದೆಹಲಿ: ಭಾರತದ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಮಗಳು ಇವಾಂಕಾ ಕೂಡ ಆಗಮಿಸಿದ್ದು, ಅವರ ಹಾಕಿಕೊಂಡಿದ್ದ ಉಡುಪು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಇಂದು ಬೆಳಗ್ಗೆ ರಾಷ್ಟ್ರಪತಿ ಭವನ ಹಾಗೂ ರಾಜಘಾಟ್ಗೆ ಆಗಮಿಸಿದ್ದ ಟ್ರಂಪ್ ಜತೆ ಇವಾಂಕಾ ತೊಟ್ಟಿದ್ದ ದೇಶಿ ಸ್ಟೈಲ್ನ ಶೆರ್ವಾನಿಗೆ ಎಲ್ಲರೂ ಫಿದಾ ಆಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತಯಾರಾಗಿರುವ ಈ ರೇಷ್ಮೆ ಶೆರ್ವಾನಿ ಕಳೆದ 20 ವರ್ಷಗಳ ಹಿಂದೆ ರೆಡಿ ಮಾಡಲಾಗಿತ್ತು ಎಂದು ಇದರ ತಯಾರಕರಾದ ಅನಿತಾ ಮಾಹಿತಿ ನೀಡಿದ್ದಾರೆ.
ನಿನ್ನೆ ಗುಜರಾತ್ನ ಅಹಮದಾಬಾದ್ನ ಮೊಟೆರೊ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲೂ ಇವಾಂಕಾ ಹಾಕಿಕೊಂಡಿದ್ದ ಡ್ರೆಸ್ ಎಲ್ಲರ ಗಮನ ಸೆಳೆದಿತ್ತು. ಕೆಂಪು ಬಣ್ಣದ ಹೂವಿನ ವಿನ್ಯಾಸದ ಸ್ಕರ್ಟ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಈ ಹಿಂದೆ ಇದೇ ಉಡುಪು 2019ರ ಸೆಪ್ಟೆಂಬರ್ ತಿಂಗಳಲ್ಲಿ ಅರ್ಜೆಂಟೀನಾ ಪ್ರವಾಸದ ಸಂದರ್ಭದಲ್ಲೂ ಅವರು ಧರಿಸಿದ್ದು ವಿಶೇಷ.