ETV Bharat / bharat

ಕೋವಿಡ್​-19ಗೆ ವ್ಯಾಕ್ಸಿನ್​ ಕಂಡುಹಿಡಿದದ್ದು ನಿಜವಾ? - ವೈರಸ್​ ತಟಸ್ಥ

ವ್ಯಾಕ್ಸಿನ್​ ಅನ್ನು ಇಲಿಗಳ ಮೇಲೆ ಪ್ರಯೋಗಿಸಲಾಗಿದ್ದು, ಇಲಿಗಳ ದೇಹದಲ್ಲಿ ಕೊರೊನಾ ಪ್ರತಿಕಾಯಗಳು ಹುಟ್ಟಿಕೊಂಡು ವೈರಸ್​ ತಟಸ್ಥಗೊಂಡಿದ್ದು ಸಾಬೀತಾಗಿದೆ. ತಾವು ತಯಾರಿಸಿದ ಒಟ್ಟು ಐದು ಮಾದರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಅದರಲ್ಲಿ ಅತಿ ಹೆಚ್ಚು ಪರಿಣಾಮಕಾರಿಯಾದ ಎರಡು ಮಾದರಿಯ ವ್ಯಾಕ್ಸಿನ್​ಗಳನ್ನು ಮುಂದಿನ ಸಂಶೋಧನೆಗಳಿಗಾಗಿ ಆರಿಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Italian researchers claim world's first Covid-19 vaccine

author img

By

Published : May 6, 2020, 8:47 PM IST

ರೋಮ್: ಮಾನವರಿಗೆ ಕೋವಿಡ್​-19 ವೈರಸ್ ಹರಡದಂತೆ ತಡೆಗಟ್ಟುವ ವ್ಯಾಕ್ಸಿನ್​ ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿರುವುದಾಗಿ ಇಟಲಿಯ ಕೆಲ ಸಂಶೋಧಕರು ಹೇಳಿಕೊಂಡಿದ್ದಾರೆ. ವೈರಸ್​ ಅನ್ನು ತಟಸ್ಥಗೊಳಿಸಬಲ್ಲ ವ್ಯಾಕ್ಸಿನ್ ಕಂಡುಹಿಡಿದಿರುವುದಾಗಿ ಕೊರೊನಾ ವೈರಸ್​ ಕಾಯಿಲೆ ಔಷಧಿಯ ಕುರಿತು ಸಂಶೋಧನೆಗಳನ್ನು ನಡೆಸುತ್ತಿರುವ ಇಟಲಿಯ ಟಾಕಿಸ್ ಸಂಸ್ಥೆಯ ಸಿಇಓ ಲುಯಿಗಿ ಆರಿಸಿಚ್ಚಿಯೊ ಹೇಳಿದ್ದಾರೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ.

"ಇಟಲಿಯಲ್ಲಿ ತಯಾರಿಸಲಾದ ಈ ವ್ಯಾಕ್ಸಿನ್ ಪ್ರಾಥಮಿಕ ಪರೀಕ್ಷಾ ಹಂತದಲ್ಲಿದೆ. ಬೇಸಿಗೆಯ ನಂತರ ಮಾನವರ ಮೇಲೆ ವ್ಯಾಕ್ಸಿನ್ ಪ್ರಯೋಗಿಸಿ ನೋಡಲಾಗುವುದು." ಎಂದು ಆರಿಸಿಚ್ಚಿಯೊ ಹೇಳಿರುವುದಾಗಿ ಇಟಲಿಯ ನ್ಯೂಸ್ ಏಜೆನ್ಸಿ ANSA ತಿಳಿಸಿದೆ.

"ಸ್ಪಾಲ್ಲಾಂಜಾನಿ ಆಸ್ಪತ್ರೆಯ ಮೂಲಗಳ ಪ್ರಕಾರ, ನಮ್ಮ ವ್ಯಾಕ್ಸಿನ್​ ಕೊರೊನಾ ವೈರಸ್​ ಅನ್ನು ನಿಷ್ಕ್ರಿಯಗೊಳಿಸುತ್ತದೆ ಎಂಬುದನ್ನು ಸಾಬೀತು ಪಡಿಸಿದ್ದೇವೆ. ಮಾನವರ ದೇಹದಲ್ಲೂ ಇದೇ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ." ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.