ETV Bharat / bharat

ಸತತ 7 ಗಂಟೆಗಳ ಕಾಲ ನಾಯಕತ್ವ ವಿಚಾರ ಕುರಿತು ಚರ್ಚೆ: ಯಥಾಸ್ಥಿತಿ ಕಾಯ್ದುಕೊಂಡ ಕಾಂಗ್ರೆಸ್​​ - New Delhi

ತಮ್ಮ ಪುತ್ರ ರಾಹುಲ್ ಗಾಂಧಿ ಪಕ್ಷದ ನಾಯಕತ್ವ ವಹಿಸಿಕೊಳ್ಳಲು ಸನ್ನದ್ಧರಾಗುವವರೆಗೂ ಸೋನಿಯಾ ಗಾಂಧಿ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.

Congress debate
ಸೋನಿಯಾ ಗಾಂಧಿ
author img

By

Published : Aug 25, 2020, 9:46 AM IST

ನವದೆಹಲಿ: ಕಾಂಗ್ರೆಸ್ ಎದುರಿಸುತ್ತಿರುವ ನಾಯಕತ್ವ ವಿಚಾರವೂ ಸೇರಿದಂತೆ ಹಲವಾರು ಸವಾಲುಗಳಿಗೆ ಉತ್ತರ ಕಂಡುಕೊಳ್ಳಲು ನಡೆದ ಪಕ್ಷದ ಸಮಾಲೋಚನಾ ಸಭೆಯು ನಾಯಕತ್ವದ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ‌. ತಮ್ಮ ಪುತ್ರ ರಾಹುಲ್ ಗಾಂಧಿ ಪಕ್ಷದ ನಾಯಕತ್ವ ವಹಿಸಿಕೊಳ್ಳಲು ಸನ್ನದ್ಧರಾಗುವವರೆಗೂ ಸೋನಿಯಾ ಗಾಂಧಿ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ಚುನಾವಣೆ ನಡೆಯುವ ಮೂಲಕ‌ ನಾಯಕತ್ವದ ಆಯ್ಕೆ ಆಗಲಿದೆ. ಚುನಾವಣಾ ದಿನಾಂಕ ಇನ್ನು ನಿಗದಿಪಡಿಸಿಲ್ಲ.

ಚುನಾವಣೆಯ ಮುಖಾಂತರ ನಾಯಕತ್ವ ಅಯ್ಕೆ ವಿಚಾರ ಕುರಿತು ಯಾರಿಗೂ ತಕರಾರು ಇರಲಿಲ್ಲ. ಅದರೆ ಆಶ್ಚರ್ಯಕರ ವಿಚಾರವೇನೆಂದರೆ ಕಾಂಗ್ರೆಸ್​​ನ ಪರಮೋಚ್ಚ ನಾಯಕರನ್ನೊಳಗೊಂಡ ಪಕ್ಷದ ಬಲಿಷ್ಠ ಕಾರ್ಯಕಾರಿ ಸಮಿತಿ ಈ ವಿಚಾರದ ಕುರಿತು ಏಳು ಗಂಟೆಗಳ ಕಾಲ ಚರ್ಚೆ ನಡೆಸಿ ಈ ನಿರ್ಧಾರ ಪ್ರಕಟಿಸಿರುವುದು. ಈ ನಿರ್ಧಾರವನ್ನು ಸಾಮಾನ್ಯ ಆದೇಶದ ಮೂಲಕವೂ ತೆಗೆದುಕೊಳ್ಳಬಹುದಿತ್ತು. ಆನ್​​​ಲೈನ್ ಮೂಲಕ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಹೀಗೆ ನಡೆಯಬಹುದೆಂಬ ನಿರೀಕ್ಷೆ ಕಾಂಗ್ರೆಸ್ ನಾಯಕರಿಗೆ ಇರಲಿಲ್ಲ.

ವಿರೋಧಿಗಳಿಗೆ ಈ ವಿಚಾರ ಸಂತಸ ತಂದಿದೆ. ಕಾರಣ ಪಕ್ಷದ ಕಾರ್ಯಕಾರಿ ಸಮಿತಿ ಒಡೆದ ಮನೆಯಾಗಿದ್ದು, ಎರಡು ತಲೆಮಾರಿನ ನಾಯಕರ ನಡುವೆ ಒಮ್ಮತದ ನಿರ್ಧಾರಕ್ಕೆ ಬರಲು ಅದು ಹೆಣಗಾಡುತ್ತಿತ್ತು. 2014ರ ಲೋಕಸಭಾ ಚುನಾವಣೆಯ ಹೀನಾಯ ಸೋಲಿನ 6 ವರ್ಷದ ನಂತರವೂ ಪಕ್ಷವನ್ನು ರಾಷ್ಟ್ರ ಮಟ್ಟದಲ್ಲಿ ಪುನಶ್ಚೇತನಗೊಳಿಸಲು ಯೋಜನೆ ರೂಪಿಸುವಲ್ಲಿ ಪಕ್ಷ ಇನ್ನೂ ಮಗ್ನವಾಗಿದೆ.

ಪಕ್ಷದ 23 ಹಿರಿಯ ನಾಯಕರು ಕಳೆದ ಜುಲೈ ತಿಂಗಳಲ್ಲಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರ ಅವಶ್ಯಕತೆ ಇದೆ ಮತ್ತು ಪಕ್ಷ ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕೆಂದು ಆಗ್ರಹಪಡಿಸಿತ್ತು. ಈ ಕುರಿತು ಚರ್ಚಿಸಲು ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಸೇರಿತ್ತು. ಪಕ್ಷದ ನಾಯಕರು ಮುಂದಿಟ್ಟಿರುವ ಎರಡು ಬೇಡಿಕೆಗಳು ಸಮಯೋಚಿತವಾಗಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ಸೋನಿಯಾ ಗಾಂಧಿಯವರು ಆಗಸ್ಟ್ 10ಕ್ಕೆ ಒಂದು ವರ್ಷ ಪೂರೈಸಿದ್ದಾರೆ.

ಭಾರತೀಯ ಜನತಾ ಪಕ್ಷವನ್ನು ಎದುರಿಸಲು ಕಾಂಗ್ರೆಸ್​​​ ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರ ಅಗತ್ಯವಿದೆ. ಪಕ್ಷದ ಕಾರ್ಯಕಾರಿ ಸಮಿತಿಯ ನಡವಳಿಕೆಯು ಪಕ್ಷದ ಹಿರಿಯ ನಾಯಕರ ನಡುವಿನ ಅಧಿಕಾರದಾಟಕ್ಕೆ ಸಾಕ್ಷಿಯಾಗಿತ್ತು. ಅವರ ನಿಲುವನ್ನು ಸಾಬೀತುಪಡಿಸಲು ಹೆಣಗಾಡುವಂತಿತ್ತು. ಇನ್ನೊಂದೆಡೆ ರಾಹುಲ್ ಗಾಂಧಿ ಬೆಂಬಲಿಗರ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ತಮ್ಮ ನಾಯಕತ್ವವನ್ನು ವಿರೋಧಿಸುತ್ತಿರುವವರ ನಡೆಯನ್ನು ಪ್ರಶ್ನಿಸಿರುವ ರಾಹುಲ್ ಗಾಂಧಿ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಅಲ್ಲದೆ ಈ ವಿಚಾರವನ್ನು ಮಾಧ್ಯಮದಲ್ಲಿ ಅಪಪ್ರಚಾರ ನಡೆಸುವ ಮೂಲಕ ಅತ್ಯಂತ ಪುರಾತನ ಕಾಂಗ್ರೆಸ್ ಪಕ್ಷಕ್ಕೆ ಕಳಂಕ ತರುತ್ತಿದ್ದಾರೆ ಎಂದೂ ರಾಹುಲ್ ಅರೋಪಿಸಿದ್ದಾರೆ. ಪಕ್ಷ ತಕ್ಷಣವೇ ರಾಹುಲ್ ಗಾಂಧಿಯವರ ಆರೋಪವನ್ನು ಅಲ್ಲಗಳೆದಿದೆ. ಅಲ್ಲದೆ ರಾಹುಲ್ ಗಾಂಧಿಯವರು ಸ್ವತಃ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಅವರಿಗೆ ಕರೆ ಮಾಡಿ ಪಕ್ಷದ ವರ್ಚಸ್ಸಿಗೆ ಹಾನಿಯಾಗಿರುವುದನ್ನು ತಡೆದಿರುವುದು ಕಾಂಗ್ರೆಸ್ ‌ಮರ್ಯಾದೆ ಉಳಿಸಿದೆ.

ಕಪಿಲ್ ಸಿಬಲ್ ಕಾರ್ಯಕಾರಿ ಸಮಿತಿ ಸಭೆಗೆ ಗೈರಾಗಿದ್ದರು. ಅಲ್ಲದೆ ಅವರು ರಾಹುಲ್ ಕುರಿತು ನೀಡಿದ್ದರೆನ್ನಲಾದ ಹೇಳಿಕೆ ಮಾಧ್ಯಮದಲ್ಲಿ ವರದಿ ಆಗಿರುವ ಬಗ್ಗೆ ಬೇಸರಗೊಂಡಿದ್ದರು. ಸಿಬಲ್ ಅಸಮಾಧಾನ‌ ವ್ಯಕ್ತಪಡಿಸಿ ಮಾಡಿದ್ದ ಟ್ವಿಟರ್ ಹೇಳಿಕೆಯನ್ನು ಅಳಿಸಿ ಹಾಕಿದರು. ನಂತರ ಮತ್ತೋರ್ವ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಅಜಾದ್ ಟ್ವೀಟ್ ಮಾಡಿ ಬಿಜೆಪಿ ಜೊತೆ ತಮ್ಮ ನಂಟು ಇದೆ ಎಂದು ಸಾಬೀತಾದರೆ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.

ಸೋನಿಯಾ ನಾಯಕತ್ವ ವಿರೋಧಿಸಿ ಬರೆದ ಪತ್ರಕ್ಕೆ ಈ ಹಿಂದೆ ಸಹಿ ಹಾಕಿದ್ದ ಅಜಾದ್ ಮತ್ತು ಸಿಬಲ್ ಅವರ ಈಗಿನ ಹೇಳಿಕೆಯು ಕಾಂಗ್ರೆಸ್ ನಾಯಕರಿಗೆ ಆಶಾ ಕಿರಣದಂತೆ ಗೋಚರಿಸಿದೆ‌. ಗಾಂಧಿ ಕುಟುಂಬವು ಅಸಂತುಷ್ಟಗೊಂಡ ಸಹೋದ್ಯೋಗಿಗಳನ್ನು ಸಂತೈಸುವ ಚಾಕಚಕ್ಯತೆ ಹೊಂದಿದ್ದು ಮತ್ತು ಪಕ್ಷವನ್ನು ಒಟ್ಟಿಗೆ ಮುನ್ನಡೆಸುವ ಸಾಮರ್ಥ್ಯ ಹೊಂದಿರುವುದು ನಿನ್ನೆಯ ಬೆಳವಣಿಗೆಯಿಂದ ಸಾಬೀತಾಗಿದೆ. ನಿನ್ನೆಯ ಸಭೆಯ ಸಮಾರೋಪ ಭಾಷಣದಲ್ಲಿ ತಮ್ಮ ಸಹೋದ್ಯೋಗಿಗಳ ಹೇಳಿಕೆಯಿಂದ ತಮಗೆ ನೋವಾಗಿದ್ದರೂ ತಮ್ಮ ನಡುವೆ ಅಭಿಪ್ರಾಯ ಭೇದವಿದ್ದರೂ ನಾವೆಲ್ಲಾ ಒಂದಾಗಿದ್ದೇವೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಗಾಂಧಿ ಕುಟುಂಬ ಆಶಿಸಿದಂತೆ ನಿನ್ನೆಯ ಸಭೆಯ ನಿರ್ಣಯಕ್ಕೆ ಎಲ್ಲರೂ ಒಮ್ಮತ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಬಂಡಾಯ‌ ನಾಯಕರು ತಾವು ಬೆನ್ನಿಗೆ ಚೂರಿ ಹಾಕುವ ಪ್ರಯತ್ನ ಮಾಡಿಲ್ಲ ಮತ್ತು ಸೋನಿಯಾ ಗಾಂಧಿಯವರ ನಾಯಕತ್ವವನ್ನು ಪ್ರಶ್ನಿಸಿಲ್ಲ. ತಮ್ಮ ಉದ್ದೇಶ ಪಕ್ಷ ಪ್ರಸ್ತುತ ಎದುರಿಸುತ್ತಿರುವ ಸವಾಲುಗಳನ್ನು ತುರ್ತಾಗಿ ಬಗೆಹರಿಸುವುದಾಗಿತ್ತು ಮತ್ತು ಎಲ್ಲಾ ಹಂತಗಳಲ್ಲಿ ಸುಧಾರಣೆ ತರುವ ಉದ್ದೇಶವಾಗಿತ್ತು ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸಿದರು. ಎಂದಿನಂತೆ ಪಕ್ಷದ ಹಿರಿಯ ನಾಯಕರು ಸೋನಿಯಾ ಗಾಂಧಿಯವರಿಗೆ ಪಕ್ಷದಲ್ಲಿ ಅಗತ್ಯ ಬಿದ್ದರೆ ಯಾವುದೇ ಬದಲಾವಣೆ ತರಲು ಅಧಿಕಾರ ನೀಡಿದರು.

ರಾಹುಲ್ ಬೆಂಬಲಿಗರ ಕುರಿತು ಹೇಳುವುದಾದರೆ ರಾಹುಲ್ ಗಾಂಧಿಯವರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಪುನರ್ ನೇಮಕ ಮಾಡಬೇಕೆಂದು ಒತ್ತಾಯಿಸಸುವ ಮೂಲಕ ಚರ್ಚೆಯನ್ನು ಅಂತ್ಯಗೊಳಿಸಿದರು. ಅಲ್ಲದೆ ಗಾಂಧಿ ಕುಟುಂಬದ ಹೊರಗಿನವರು ಪಕ್ಷದ ಚುಕ್ಕಾಣಿ ಹಿಡಿಯಬೇಕೆಂಬ ಕೆಲವರ ಮನದ ಇಂಗಿತವು ರಾಹುಲ್​ ಬೆಂಬಲಿಗರ ಧ್ವನಿಯ ನಡುವೆ ಕುಗ್ಗಿ ಹೋಯಿತು. ಸೋನಿಯಾ ಗಾಂಧಿಯವರ ಅತ್ಯಂತ ನಂಬಿಕಸ್ಥ ಬೆಂಬಲಿಗ ಅಹಮದ್ ಪಟೇಲ್ ಅವರು ರಾಹುಲ್ ಗಾಂಧಿಯವರು ಪಕ್ಷದ ಚುಕ್ಕಾಣಿ ಹಿಡಿಯಬೇಕು ಎಂದು ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ಪಕ್ಷದ ನಾಯಕತ್ವಕ್ಕೆ ನಡೆಯುವ ಆಂತರಿಕ ಚುನಾವಣೆಯಲ್ಲಿ ರಾಹುಲ್ ಗಾಂಧಿ ಒಬ್ಬರೇ ಸ್ಪರ್ಧಿಯಾಗಿರುವುದರಿಂದ ಅವರ ಆಯ್ಕೆ ಅವಿರೋಧವಾಗಿ ನಡೆಯಲಿದೆ‌.

ಡಿಸೆಂಬರ್ 2017ರಲ್ಲಿ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದ ನಾಯಕತ್ವದ ಕುರಿತು ಎದ್ದಿದ್ದ ಚರ್ಚೆ ಈಗ ತಣ್ಣಗಾಗಿರಬಹುದು. ಆದರೆ ಪಕ್ಷದ ಹಿತದೃಷ್ಠಿಯಿಂದ 23 ಹಿರಿಯ ನಾಯಕರು ಎತ್ತಿರುವ ಪ್ರಶ್ನೆಯನ್ನು ಕಾಂಗ್ರೆಸ್ ಪಕ್ಷ ಕಡೆಗಣಿಸಲು ಸಾಧ್ಯವಿಲ್ಲ. ಪಕ್ಷದ ಆಂತರಿಕ ವಿಚಾರಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಎತ್ತುವಂತಿಲ್ಲ ಎಂದು ಪಕ್ಷವು ತನ್ನ ನಾಯಕರಿಗೆ ಆದೇಶ ನೀಡಿದ್ದು, ಪಕ್ಷದ ನಾಯಕತ್ವದ ಬಿಕ್ಕಟ್ಟು ಗಾಂಧಿ ಕುಟುಂಬದ ವಿರುದ್ಧ ನಡೆಯುತ್ತಿರುವ ಇನ್ನೊಂದು ಷಡ್ಯಂತ್ರ ಎಂಬುದು ಇನ್ನೊಂದು ಸವಾಲಾಗಿದೆ ಎಂದು ಪಕ್ಷ ತಿಳಿಸಿದೆ.

-ಅಮಿತ್ ಅಗ್ನಿಹೋತ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.