ತಿರುವನಂತಪುರಂ: ಕೇರಳ ಸರ್ಕಾರ ಮಂಗಳವಾರ 1.3 ಕೋಟಿ ರೂ. ಪರಿಹಾರವಾಗಿ ಮಾಜಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ ಹಸ್ತಾಂತರಿಸಿದೆ.
ಪ್ರಕರಣದಲ್ಲಿ ಸುಳ್ಳು ಆರೋಗಳ ಧಕ್ಕೆಯಾಗಿ 50 ಲಕ್ಷ ರೂ. ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ್ದರಿಂದ ರಾಜ್ಯ ಸರ್ಕಾರ ಈ ಹಿಂದೆ ಅವರಿಗೆ 50 ಲಕ್ಷ ರೂ. ನೀಡಿತ್ತು.
ಇಸ್ರೋ ಗೂಢಚಾರ ಪ್ರಕರಣವೊಂದರಲ್ಲಿ ನಂಬಿ ನಾರಾಯಣ್ ಅವರ ಹೆಸರನ್ನು ಪೊಲೀಸರು ತಳಕು ಹಾಕಿದ್ದರು. ವಿಚಾರಣೆ ಬಳಿಕ ಇದು ಸುಳ್ಳು ಆರೋಪ ಸುಳ್ಳು ಎಂದು ಸಾಬೀತಾಗಿತ್ತು. ಸ್ಥಳೀಯ ನ್ಯಾಯಾಲಯವು ನಾರಾಯಣ್ ಅವರಿಗೆ ಪರಿಹಾರವಾಗಿ 1.3 ಕೋಟಿ ರೂ. ನೀಡುವಂತೆ ಆದೇಶಿಸಿತ್ತು.
ಇದರ ಬೆನ್ನಲ್ಲೇ ಮಾಜಿ ಮುಖ್ಯ ಕಾರ್ಯದರ್ಶಿ ಕೆ.ಜಯಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ನಂಬಿ ನಾರಾಯಣನ್ ಅವರೊಂದಿಗೆ ಮಾತನಾಡಲು ರಾಜ್ಯ ಮತ್ತು ವಿಜ್ಞಾನಿಗಳ ನಡುವಿನ ಪ್ರಕರಣದಲ್ಲಿ ಇತ್ಯರ್ಥಕ್ಕೆ ಬರಲು ರಾಜ್ಯ ಸರ್ಕಾರವು ವಹಿಸಿತ್ತು.
ಸುಪ್ರೀಂಕೋರ್ಟ್ ಆದೇಶದಂತೆ ಈ ಹಿಂದೆ ನಂಬಿ ಅವರಿಗೆ ₹50 ಲಕ್ಷ ಪರಿಹಾರ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಶಿಫಾರಸಿನಂತೆ ₹ 10 ಲಕ್ಷ ಪರಿಹಾರ ನೀಡಲಾಗಿತ್ತು. 1994ರಲ್ಲಿ ಇಸ್ರೋದ ಕೆಲ ದಾಖಲೆಗಳನ್ನು ಕೆಲ ವಿಜ್ಞಾನಿಗಳು ಇಬ್ಬರು ಮಾಲ್ಡೀವ್ಸ್ ಮೂಲದ ಮಹಿಳೆಯರಿಗೆ ಸೋರಿಕೆ ಮಾಡಿದ್ದಾರೆ ಎಂಬ ಆಪಾದನೆ ಕೇಳಿಬಂದಿತ್ತು.