ETV Bharat / bharat

ಚಂದ್ರಯಾನ-2: ಇಸ್ರೋದಿಂದ ಮತ್ತೊಂದು ಫೋಟೋ ಬಿಡುಗಡೆ! - ಚಂದ್ರನ ಉತ್ತರ ಗೋಳಾರ್ಧದ ಚಿತ್ರ

ಚಂದ್ರಯಾನ -2 ಆರ್ಬಿಟರ್ ಕಳುಹಿಸಿರುವ ಚಂದ್ರನ ಉತ್ತರ ಗೋಳಾರ್ಧದ ಚಿತ್ರವೊಂದನ್ನ ಇಸ್ರೋ ಬಿಡುಗಡೆ ಮಾಡಿದೆ.

ಇಸ್ರೋದಿಂದ ಮತ್ತೊಂದು ಫೋಟೋ ಬಿಡುಗಡೆ
author img

By

Published : Oct 17, 2019, 8:35 PM IST

ಹೈದರಾಬಾದ್: ಇಮೇಜಿಂಗ್ ಇನ್ಫ್ರಾರೆಡ್ ಸ್ಪೆಕ್ಟ್ರೋಮೀಟರ್ ಪೇಲೋಡ್‌ನಿಂದ ಪಡೆಯಲಾದ ಚಂದ್ರನ ಮೇಲ್ಮೈಯ ಮೊದಲ ಪ್ರಕಾಶಮಾನವಾದ ಚಿತ್ರವನ್ನು ಚಂದ್ರಯಾನ್ -2 ಕಳಿಸಿದ್ದು, ಇಸ್ರೋ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಚಂದ್ರಯಾನ 2ನ ಐಐಆರ್​ಎಸ್​ ಪೇಲೋಡ್​ನಿಂದ ತೆಗೆದುಕೊಂಡ ಚಂದ್ರನ ಮೇಲ್ಮೈನ ಮೊದಲ ಪ್ರಕಾಶಮಾನವಾದ ಚಿತ್ರವನ್ನು ನೋಡಿ. ಚಂದ್ರನ ಮೇಲ್ಮೈಯಿಂದ ಪ್ರತಿಫಲಿತ ಸೂರ್ಯನ ಬೆಳಕನ್ನು ಅಳೆಯಲು ಇಂಡಿಯನ್ ಇನ್ಸಿಟ್ಯೂಟ್ ​ಆಫ್ ರಿಮೋಟ್ ಸೆನ್ಸಿಂಗ್ ಈ ಚಿತ್ರವನ್ನ ವಿನ್ಯಾಸಗೊಳಿಸಿದೆ ಎಂದು ಇಸ್ರೋ ಟ್ವೀಟ್​ ಮೂಲಕ ತಿಳಿಸಿದೆ.

ಚಂದ್ರನ ಉತ್ತರಗೋಳಾರ್ದದ ಚಿತ್ರ ಇದಾಗಿದ್ದು, ಸೊಮರ್ಫೆಲ್ಡ್ ಕುಳಿ ನೆಲ, ಕಿರ್ಕ್ವುಡ್ ಕುಳಿಯಲ್ಲಿನ ಸೂರ್ಯನ ಬೆಳಕು, ಸ್ಟೆಬಿನ್ಸ್ ಕುಳಿ ನೆಲ, ಸೊಮರ್ಫೀಲ್ಡ್ ಕುಳಿ ನೆಲದೊಳಗಿರುವ ಎಜೆಕ್ಟಾ ಕುಳಿ ಮತ್ತು ಸ್ಟೆಬಿನ್ಸ್ ಕುಳಿಯ ಕೇಂದ್ರ ಶಿಖರವನ್ನ ಚಿತ್ರದಲ್ಲಿ ಕಾಣಬಹುದಾಗಿದೆ.

ಚಂದ್ರಯಾನ -2, ಆರ್ಬಿಟರ್ ಹೈ-ರೆಸಲ್ಯೂಷನ್ ಕ್ಯಾಮೆರಾ (ಒಹೆಚ್‌ಆರ್‌ಸಿ) ಸೆರೆಹಿಡಿದ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಿದ 20 ದಿನಗಳ ನಂತರ ಈ ಚಿತ್ರವನ್ನ ಭಾರತೀಯ ಬಾಹ್ಯಾಕಾಶ ಸಂಸ್ಥೆ ಬಿಡುಗಡೆ ಮಾಡಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.