ಟೆಹ್ರಾನ್: ಹೊಸ ಪರಮಾಣು ಒಪ್ಪಂದದ ಕುರಿತು ಯಾವುದೇ ಮಾತುಕತೆ ನಡೆಸಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವದ್ ಜರೀಫ್ ಹೇಳಿದ್ದಾರೆ ಎಂದು ಟೆಹ್ರಾನ್ ಟೈಮ್ಸ್ ದಿನಪತ್ರಿಕೆ ವರದಿ ಮಾಡಿದೆ.
ಅಖಿಲ ಭಾರತ ಕೈಗಾರಿಕಾ ಸಂಘ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಯಾವುದೇ ಹೊಸ ಒಪ್ಪಂದದ ಬಗ್ಗೆ ಮಾತುಕತೆ ನಡೆಸಿಲ್ಲ ಎಂದರು. 2015 ರ ಪರಮಾಣು ಒಪ್ಪಂದದ ಪ್ರಕಾರ, ಈಗಾಗಲೇ ತಿಳಿದಂತೆ ಜಂಟಿ ಸಮಗ್ರ ಕಾರ್ಯ ಯೋಜನೆ (ಜೆಸಿಪಿಒಎ) ಅಡಿಯಲ್ಲಿ, ಪರಮಾಣು ಚಟುವಟಿಕೆ ನಿಷೇಧಿಸಲು ಇರಾನ್ ಒಪ್ಪಿದೆ. ಅದಾಗ್ಯೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಒಪ್ಪಂದದಿಂದ ಹೊರಬಂದು, ಇರಾನ್ಗೆ ನೆರವು ನೀಡುವುದಕ್ಕೆ ಅಡ್ಡಿ ಪಡಿಸುತ್ತಿದ್ದಾರೆ.
ಅಲ್ಲದೇ ಇರಾನ್ನ ಪರಮಾಣು ಕಾರ್ಯಕ್ರಮಕ್ಕೆ ಮತ್ತಷ್ಟು ಮಿತಿಗಳನ್ನು ಹೇರುವ ಸಲುವಾಗಿ ಹೊಸ ಒಪ್ಪಂದ ಮಾಡಲು ಒತ್ತಾಯಿಸುತ್ತಿದ್ದಾರೆ. ಇದೇ ವೇಳೆ ಅಮೆರಿಕಾ ಹಳೆ ಒಪ್ಪಂದಕ್ಕೆ ಮತ್ತೆ ಮರಳುವಂತೆ ಭಾರತ ಸರ್ಕಾರ ಮನವೊಲಿಸಬೇಕು ಎಂದು ಅವರು ಹೇಳಿದರು.