ETV Bharat / bharat

ಅಮೆರಿಕಾದೆದುರು ಮಗದೊಮ್ಮೆ 'ಸಿಡಿ'ದ ಇರಾನ್​​: 16 ಕ್ಷಿಪಣಿಗಳಿಂದ ದಾಳಿ..! - ಮಧ್ಯಪ್ರಾಚ್ಯದ ಲೇಟೆಸ್ಟ್​ ನ್ಯೂಸ್

ಇರಾನ್​ ಹಾಗೂ ಅಮೆರಿಕಾ ನಡುವಿನ ಬಿಕ್ಕಟ್ಟು ತಾರಕ್ಕೇರಿದೆ. ಇರಾಕ್​ನಲ್ಲಿರುವ ಅಮೆರಿಕಾದ ಸೇನಾ ನೆಲೆಗಳ ಮೇಲೆ ಒಂದಾದ ನಂತರ ಒಂದರಂತೆ ದಾಳಿ ನಡೆಸುತ್ತಿದೆ. ಈಗ ಮತ್ತೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಅಮೆರಿಕಾ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

Iran launched 16 missiles from 3 locations
ಅಮೆರಿಕಾದೆ ನೆಲೆಗಳ ಮೇಲೆ ಮತ್ತೆ ಕ್ಷಿಪಣಿ ದಾಳಿ
author img

By

Published : Jan 9, 2020, 3:28 PM IST

ವಾಷಿಂಗ್ಟನ್​: ಇರಾನ್​ ಮತ್ತೊಮ್ಮೆ ಇರಾಕ್​ನಲ್ಲಿರುವ ಸೇನಾನೆಲೆಗಳ ಮೇಲೆ ದಾಳಿ ಮಾಡಿದೆ ಎಂದು ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಮಾರ್ಕ್​ ಎಸ್ಪರ್​ ಆರೋಪಿಸಿದ್ದಾರೆ. ಸುಮಾರು 16 ಬ್ಯಾಲಿಸ್ಟಿಕ್​ ಮಿಸೈಲ್​ಗಳನ್ನು ಇರಾನ್​ನ ಮೂರು ಸ್ಥಳಗಳಿಂದ ಇರಾಕ್​ನಲ್ಲಿರುವ ಅಮೆರಿಕನ್​ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಮಾರ್ಕ್​ ಎಸ್ಪರ್​ ಸ್ಪಷ್ಟಪಡಿಸಿದ್ದಾರೆ.

ಅಮೆರಿಕಾದ ಜಂಟಿ ಸೇನಾ ಅಧ್ಯಕ್ಷ ಮಾರ್ಕ್​ ಮಿಲ್ಲೆ ಅವರೊಂದಿಗಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪರ್​ ಒಟ್ಟು 16 ಮಿಸೈಲ್​ಗಳನ್ನು ಇರಾನ್​ ಉಡಾವಣೆ ಮಾಡಿದೆ. ಅದರಲ್ಲಿ 11 ಮಿಸೈಲ್​ಗಳು ಐನ್​ ಅಲ್​ ಅಸಾದ್​ ನ ವಾಯುನೆಲೆಗೆ ಅಪ್ಪಳಿಸಿವೆ. ಒಂದು ಮಿಸೈಲ್​ ಇಬ್ರಿಲ್​ ಬಳಿ ಬಿದ್ದಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅಮೆರಿಕಾದ ಜಂಟಿ ಸೇನಾ ಅಧ್ಯಕ್ಷ ಮಾರ್ಕ್​ ಮಿಲ್ಲೆ '' ನಮಗೆ ಗೊತ್ತಿರುವುದು ಹಾಗೂ ನೋಡಿದ್ದರ ಆಧಾರದ ಮೇಲೆ ದಾಳಿಯ ಪರಿಣಾಮಗಳನ್ನು ಹೇಳುತ್ತಿದ್ದೇವೆ. ಅಮೆರಿಕಾ ಸೇನೆಯ ರಕ್ಷಣಾ ಕೌಶಲ್ಯ ಅನಾಹುತದ ತೀವ್ರತೆಯನ್ನು ಕಡಿಮೆ ಮಾಡಿವೆ'' ಎಂದು ಉಲ್ಲೇಖಿಸಿದರು. ಜೊತೆಗೆ ಇರಾಕ್​ನಲ್ಲಿ ಇರಾನ್​ ದಾಳಿಯಿಂದ ಆದ ಅನಾಹುತಗಳ ಬಗ್ಗೆ ಚರ್ಚೆ ಹಾಗೂ ಪರಿಹಾರ ಕಾರ್ಯಗಳ ಸಭೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಗೈರಾಗಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮಿಸೈಲ್​ ದಾಳಿಯಲ್ಲಿ ಟೆಂಟ್​ಗಳು, ಕೆಲ ರಸ್ತೆಗಳು, ಪಾರ್ಕಿಂಗ್​ ಪ್ರದೇಶಗಳು ಹಾಗೂ ಒಂದು ಹೆಲಿಕಾಪ್ಟರ್​ಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಯಾವುದೇ ಪ್ರಾಣಾಪಾಯ ಜರುಗಿಲ್ಲ. ಇರಾನ್​ ಇಸ್ಲಾಮಿಕ್​ ರೆವಲ್ಯೂಷನ್​ ಗಾರ್ಡ್​ ಕಾರ್ಪ್ಸ್​​ ಈ ದಾಳಿಗಳ ಹೊಣೆ ಹೊತ್ತಿದೆ. ಈ ಮೂಲಕ ಕಾಸಿಂ ಸೊಲೈಮಾನಿ ಹತ್ಯೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿಕೊಂಡಿದೆ.

Intro:Body:

Blank

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.