ನವದೆಹಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಅಧ್ಯಕ್ಷ ನರಿಂದರ್ ಬಾತ್ರಾ ಅವರು ಜೂನ್. 23 ರಂದು ಒಲಿಂಪಿಕ್ ದಿನವನ್ನು ಆಚರಿಸಬೇಕೆಂದು ದೇಶದ ಜನತೆಯಲ್ಲಿ ಕೇಳಿಕೊಂಡಿದ್ದಾರೆ.
ಆಧುನಿಕ ಒಲಿಂಪಿಕ್ ಕ್ರೀಡಾಕೂಟದ ಪ್ರಾರಂಭದ ನೆನಪಿಗಾಗಿ 1948 ರಿಂದ ಪ್ರತಿ ವರ್ಷ ಜೂನ್. 23 ರಂದು ಒಲಿಂಪಿಕ್ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಕ್ರೀಡೆಯಲ್ಲಿ ಭಾರತ ಮೈಲಿಗಲ್ಲನ್ನು ಸೃಷ್ಟಿಸಲು ಮತ್ತು ಜನರಲ್ಲಿ ಕ್ರೀಡೆಯ ಕುರಿತು ಆಸಕ್ತಿ ಮೂಡಿಸಲು ಇಂತಹ ಆಚರಣೆಗಳ ಅಗತ್ಯವಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಈ ಬಾರಿ ಒಲಿಂಪಿಕ್ ಕ್ರೀಡೆಗಳು ನಡೆಯುತ್ತಿಲ್ಲ. ಈ ಒಂದು ಆಚರಣೆ ಮೂಲಕ ಒಂದು ರೀತಿಯ ದೈಹಿಕ ಚಟುವಟಿಕೆಯನ್ನು ಮಾಡಬಹುದಾಗಿದೆ. ಅಲ್ಲದೇ ಭಾರತದ ಒಲಿಂಪಿಕ್ ಪದಕ ವಿಜೇತರು ಮತ್ತು ಒಲಿಂಪಿಕ್ ಅಭ್ಯರ್ಥಿಗಳು ಈ ಆಚರಣೆಯ ನೇತೃತ್ವವಹಿಸುವಂತೆ ಬಾತ್ರಾ ಕೇಳಿಕೊಂಡರು.