ನವದೆಹಲಿ: ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ 125 ಕ್ರೀಡಾಪಟುಗಳನ್ನು ಕಳುಹಿಸುವ ವಿಶ್ವಾಸವಿದೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷ ನರಿಂದರ್ ಧ್ರುವ್ ಬಾತ್ರಾ ಮಂಗಳವಾರ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಒಲಿಂಪಿಕ್ ದಿನದಂದು, ಕ್ರೀಡಾ ದಂತಕಥೆಗಳಾದ ಲಿಯಾಂಡರ್ ಪೇಸ್, ಅಭಿನವ್ ಬಿಂದ್ರಾ, ಅಂಜು ಬಾಬಿ ಜಾರ್ಜ್ ಮತ್ತು ನೆದರ್ಲ್ಯಾಂಡ್ಸ್ನ ಮಾಜಿ ಡ್ರ್ಯಾಗ್ ಫ್ಲಿಕ್ ತಜ್ಞ ಫ್ಲೋರಿಸ್ ಬೋವೆಲ್ಯಾಂಡರ್ ಅವರು ಬಾತ್ರಾ ಅವರೊಂದಿಗೆ ಕೋವಿಡ್-19 ನಂತರ ಒಲಿಂಪಿಕ್ಸ್ ಕಡೆಗೆ ಎಂಬ ವಿಷಯದ ಕುರಿತು ವೆಬಿನಾರ್ ನಡೆಸಿದರು.
ನೇವಲ್ ಟಾಟಾ ಹಾಕಿ ಅಕಾಡೆಮಿ ಮತ್ತು ಮಾಜಿ ಕ್ರಿಕೆಟಿಗ ದೀಪ್ ದಾಸ್ ಗುಪ್ತಾ ಸಹಯೋಗದೊಂದಿಗೆ ಒಡಿಶಾ ಕ್ರೀಡಾ ಮತ್ತು ಯುವ ಸೇವೆಗಳ ಇಲಾಖೆ ಆಯೋಜಿಸಿದ್ದ ವೆಬಿನಾರ್ ನಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ತರಬೇತಿಗೆ ಮರಳಲು ಹೆಚ್ಚಿನ ನೆರವು ಮತ್ತು ಬೆಂಬಲವನ್ನು ನೀಡುವಲ್ಲಿ ಒತ್ತು ನೀಡಬೇಕೆಂದು ಚರ್ಚಿಸಿಲಾಯಿತು.
"ಮುಂದಿನ ವರ್ಷ ನಿರ್ಣಾಯಕವಾಗಲಿದೆ ಮತ್ತು ಗಣ್ಯ ಕ್ರೀಡಾಪಟುಗಳತ್ತ ಗಮನ ಹರಿಸಲಾಗುವುದು. ನಮ್ಮಲ್ಲಿ ಈಗಾಗಲೇ 78 ಕ್ರೀಡಾಪಟುಗಳು ಅರ್ಹತೆ ಪಡೆದಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಸ್ಪರ್ಧೆಗಳು ಮತ್ತು ಅರ್ಹತಾ ಮೀಟ್ ಪುನಾರಂಭದ ನಂತರ ಈ ಸಂಖ್ಯೆ ಸುಮಾರು 125 ಕ್ರೀಡಾಪಟುಗಳವರೆಗೆ ಹೆಚ್ಚಾಗುತ್ತದೆ ಎಂದು ನನಗೆ ವಿಶ್ವಾಸವಿದೆ. ಭಾರತ ಸರ್ಕಾರ, ಐಒಎ, ಎನ್‌ಎಸ್‌ಎಫ್‌ಗಳ ಜಂಟಿ ಪ್ರಯತ್ನವಾಗಲಿದ್ದು, ಇದು ಕೆಟ್ಟದ್ದನ್ನು ಹೊರಹಾಕುವಂತಹ ಸನ್ನಿವೇಶ ಎಂದು ನಾನು ಭಾವಿಸುತ್ತೇನೆ ”ಎಂದು ಬಾತ್ರಾ ಹೇಳಿದರು.
"ಹಾಕಿ, ವೇಟ್ ಲೀಫ್ಟಿಂಗ್ ಮತ್ತು ಅಥ್ಲೆಟಿಕ್ಸ್‌ನಂತಹ ಕೆಲವು ಕ್ರೀಡೆಗಳು ತರಬೇತಿ ಈಗಾಗಲೇ ಪ್ರಾರಂಭವಾಗಿವೆ. ಜುಲೈ ಮಧ್ಯದಲ್ಲಿ ಶೂಟಿಂಗ್ ಕೂಡ ಪ್ರಾರಂಭವಾಗಲಿದೆ. ನಾನು ಎಲ್ಲ ಎನ್‌ಎಸ್‌ಎಫ್‌ಗಳು ಮತ್ತು ಕೆಲವು ಕ್ರೀಡಾಪಟುಗಳೊಂದಿಗೆ ಸಂಪರ್ಕದಲ್ಲಿದ್ದೇನೆ. 2021ರ ಟೋಕಿಯೊ ಒಲಿಂಪಿಕ್ಸ್‌ಗಾಗಿ ನಾವು ಪರಿಪೂರ್ಣ ತಯಾರಿ ನಡೆಸುತ್ತಿದ್ದೇವೆ ಎಂದರು.